ಕೊನೆಗೂ ಶಿವರಾಜ್‌ಕುಮಾರ್‌ ಅಭಿಮಾನಿಗಳ ಕುತೂಹಲಕ್ಕೆ ತೆರೆಬಿದ್ದಿದೆ.

 

ಅಭಿಮಾನಿಗಳು ಸಂಭ್ರಮಿಸಲು ಕಾಯುತ್ತಿದ್ದ ದಿನವನ್ನು ಬೈರಾಗಿ ಚಿತ್ರತಂಡ ಈಗ ಅಧಿಕೃತವಾಗಿ ಘೋಷಿಸಿದೆ.

ಶಿವಣ್ಣ ನಟನೆಯ ‘ಬೈರಾಗಿ’ ಚಿತ್ರ ಜುಲೈ 1ರಂದು ತೆರೆಕಾಣುತ್ತಿದೆ. ಈ ಮೂಲಕ ಶಿವಣ್ಣ ಅಭಿಮಾನಿಗಳ ಕುತೂಹಲಕ್ಕೆ ತೆರೆಬಿದ್ದಿದೆ.

2022ರಲ್ಲಿ ಬಿಡುಗಡೆಯಾಗುತ್ತಿರುವ ಶಿವರಾಜ್‌ ಕುಮಾರ್‌ ಅವರ ಮೊದಲ ಚಿತ್ರ ಕೂಡಾ ಇದಾಗಿದೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಪೋಸ್ಟರ್‌, ಸ್ಟಿಲ್ಸ್‌ ಸಿನಿಮಾ ಬಗೆಗಿನ ಕುತೂಹಲ ಹೆಚ್ಚಿಸಿದೆ

ಇನ್ನು, ಈಗಾಗಲೇ ಚಿತ್ರದ ‘ರಿದಮ್‌ ಆಫ್ ಶಿವಪ್ಪ’ ಹಾಡು ಬಿಡುಗಡೆಯಾಗಿ ಹಿಟ್‌ಲಿಸ್ಟ್‌ ಸೇರಿದೆ. ಈ ಹಾಡನ್ನು ಶಿವರಾಜ್‌ ಕುಮಾರ್‌ ಹಾಗೂ ಶರಣ್‌ ಜೊತೆಯಾಗಿ ಹಾಡಿದ್ದಾರೆ. ಆರಂಭದಲ್ಲಿ ಈ ಹಾಡನ್ನು ಶಿವಣ್ಣ-ಪುನೀತ್‌ ರಾಜ್‌ಕುಮಾರ್‌ ಜೊತೆಯಾಗಿ ಹಾಡಲು ನಿರ್ಧರಿಸಿದ್ದರಂತೆ. ಪುನೀತ್‌ ಅವರು ಕೂಡಾ ಈ ಹಾಡಲು ಒಪ್ಪಿದ್ದರು. ಇತ್ತೀಚೆಗಷ್ಟೇ ಈ ವಿಚಾರವನ್ನು ಶಿವಣ್ಣ ಹೇಳಿಕೊಂಡಿದ್ದಾರೆ. ‘ವಜ್ರಕಾಯ’ ಬಳಿಕ ಶಿವಣ್ಣನ ಸಿನಿಮಾಕ್ಕೆ ಶರಣ್‌ ದನಿಗೂಡಿಸಿದ ಹಾಡು ಮಾಸ್‌ಪ್ರಿಯರನ್ನು ಸೆಳೆಯುತ್ತಿದೆ.

ವಿಜಯ್‌ ಮಿಲ್ಟನ್‌ ನಿರ್ದೇಶನವಿರುವ ಈ ಚಿತ್ರದಲ್ಲಿ ಹಿರಿಯ ನಟ ಶಶಿಕುಮಾರ್‌, ಅನು ಪ್ರಭಾಕರ್‌, ಯಶ ಶಿವಕುಮಾರ್‌, ಚಿಕ್ಕಣ್ಣ ಮೊದಲಾದವರು ನಟಿಸಿದ್ದಾರೆ. ಕೃಷ್ಣ ಕ್ರಿಯೇಷನ್ಸ್ ಬ್ಯಾನರ್‌ ಅಡಿಯಲ್ಲಿ ಕೃಷ್ಣ ಸಾರ್ಥಕ್‌ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ‘ಬೈರಾಗಿ’ ಕೂಡಾ ಸೇರಿದೆ.

ಪುನೀತ್ ರಾಜಕುಮಾರ್ ಕೊನೆಯ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ನಟಿ ಅಂಜಲಿ ಬೈರಾಗಿ ಮೂಲಕ ಮತ್ತೆ ಕನ್ನಡ ಸಿನಿಮಾಗೆ ಮರಳಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹಣ್ಣುಗಳಿಂದ ನಮ್ಮ ಮುಖದ ಅಂದವನ್ನು ಕಾಪಾಡಿಕೊಳ್ಳಬಹುದು.

Mon Jun 6 , 2022
ಮುಖ ಟ್ಯಾನ್ ಆಗುವುದು, ಹೊಳಪು ಕಳೆದುಕೊಳ್ಳುವುದು ಬೇಸಿಗೆಯಲ್ಲಿ ಸಾಮಾನ್ಯವಾಗಿದೆ. ಸ್ವಲ್ಪ ಕೇರ್ ತೆಗೆದುಕೊಂಡರೆ ಬೇಸಿಗೆಯಲ್ಲಿಯೇ ಸಿಗುವ ಹಣ್ಣುಗಳಿಂದ ನಮ್ಮ ಮುಖದ ಅಂದವನ್ನು ಕಾಪಾಡಿಕೊಳ್ಳಬಹುದು. ಬೇಸಿಗೆ ಕಾಲದಲ್ಲಿ ಮಾವಿನ ಹಣ್ಣು ಯಥೇಚ್ಚವಾಗಿ ದೊರಕುತ್ತದೆ. ಇದನ್ನು ತಿನ್ನುವುದರ ಜತೆಗೆ ಮುಖದ ಅಂದವನ್ನು ಕೂಡ ಹೆಚ್ಚಿಸಿಕೊಳ್ಳಬಹುದು. ಮಾವಿನ ಹಣ್ಣಿನ ತಿರುಳು ಅರ್ಧ ಕಪ್ ತೆಗೆದುಕೊಂಡು ಅದಕ್ಕೆ ಸ್ವಲ್ಪ ಹಾಲು ಸೇರಿಸಿ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ಇದಕ್ಕೆ ಬಾದಾಮಿ ಪುಡಿ ಹಾಗೂ ಓಟ್ಸ್ ಪೌಡರ್ ಅನ್ನು ಸೇರಿಸಿ […]

Advertisement

Wordpress Social Share Plugin powered by Ultimatelysocial