ರಮೇಶ ಮಾತ್ರವಲ್ಲ, ಲಕ್ಷ್ಮಿ ಹೆಬ್ಬಾಳಕರ ಸಕ್ಕರೆ ಕಾರ್ಖಾನೆಯದ್ದೂ ಬಾಕಿ ಇದೆ:

ಬೆಳಗಾವಿ: ರಾಜ್ಯದ ವಿವಿಧ ಸಕ್ಕರೆ ಕಾರ್ಖಾನೆಗಳು ₹6 ಸಾವಿರ‌ ಕೋಟಿಗೂ ಹೆಚ್ಚು ಬಾಕಿ ಉಳಿಸಿಕೊಂಡಿವೆ ಎಂದು ಸಹಕಾರ ‌ಸಚಿವ ಎಸ್‌.ಟಿ. ಸೋಮಶೇಖರ್ ತಿಳಿಸಿದರು.

ಶಾಸಕ ರಮೇಶ ಜಾರಕಿಹೊಳಿ ಅವರ ಸೌಭಾಗ್ಯಲಕ್ಷಿ ಸಕ್ಕರೆ ಕಾರ್ಖಾನೆಯಿಂದ ಹಣ ಬಾಕಿ ಇರುವ ವಿಚಾರಕ್ಕೆ ಸಂಬಂಧಿಸಿದಂತೆ ಇಲ್ಲಿ ಮಂಗಳವಾರ ಪ್ರತಿಕ್ರಿಯೆ ನೀಡಿದ ಅವರು, ಯಾವೆಲ್ಲ ಕಾರ್ಖಾನೆಗಳು ಬಾಕಿ ಉಳಿಸಿಕೊಂಡಿವೆಯೋ ಅವುಗಳಿಗೆ ಸಂಬಂಧಿಸಿದವರೆಲ್ಲರಿಗೂ ನೋಟಿಸ್ ಜಾರಿಗೊಳಿಸಲಾಗಿದೆ ಎಂದರು.

ಸಾಲ ಕೊಟ್ಟಿದ್ದು, ಅದನ್ನು ಮರುಪಾವತಿ ಮಾಡಲು ನೋಟಿಸ್ ಕೊಟ್ಟಿದ್ದಾರೆ. ರಮೇಶ ಜಾರಕಿಹೊಳಿ ಮಾತ್ರವಲ್ಲ, ಕಾಂಗ್ರೆಸ್‌ನ ಲಕ್ಷ್ಮಿ ಹೆಬ್ಬಾಳಕರ, ಜೆಡಿಎಸ್‌ನ‌ ಬಂಡೆಪ್ಪ ಕಾಂಶಪೂರ ಮೊದಲಾದವರು ಕೂಡ ಬಾಕಿ ಉಳಿಸಿಕೊಂಡಿದ್ದಾರೆ. ಸಕ್ಕರೆ ಕಾರ್ಖಾನೆ ಇರುವ 24 ಜನರು ಸಾಲ ಪಡೆದಿದ್ದಾರೆ. ₹2 ಲಕ್ಷದಿಂದ ₹ ಲಕ್ಷ ಸಾಲ ಕಟ್ಟದಿದ್ದಾಗಲೇ ಸಂಬಂಧಿಸಿದವರ ಮನೆಯನ್ನು ಜಪ್ತಿ ಮಾಡುವುದಿಲ್ಲವೇ? ಹಾಗೆಯೇ ನೂರಾರು ಕೋಟಿ ರೂಪಾಯಿ ಸಾಲ ಪಡೆದಿರುವವರ ವಿರುದ್ದ ಅಪೆಕ್ಸ್ ಬ್ಯಾಂಕ್‌ನವರು ಕ್ರಮ ಕೈಗೊಂಡಿದ್ದಾರೆ. ವಸೂಲಾತಿಗೆ ಇಲಾಖೆಯಿಂದಲೂ ಸೂಚನೆ ಕೊಡಲಾಗಿದೆ ಎಂದು ತಿಳಿಸಿದರು.

ಕೆಲವರು ಬಡ್ಡಿ ಹಾಗೂ ಅಸಲು ಎರಡನ್ನೂ ಕಟ್ಟಿಲ್ಲ. ಕೆಲವರು ಬಡ್ಡಿಯನ್ನು ನಿಯಮಿತವಾಗಿ ಪಾವತಿಸುತ್ತಿದ್ದಾರೆ. ದಕ್ಷಿಣ ಕನ್ನಡ, ತುಮಕೂರು ಮೊದಲಾದ ಡಿಸಿಸಿ ಬ್ಯಾಂಕ್‌ಗಳಿಂದ ಸಾಲ ಪಡೆದಿದ್ದಾರೆ. ವಸೂಲಿ ಮಾಡಲು ಗಂಭೀರವಾದ ಕ್ರಮಗಳನ್ನು ಕೈಗೊಳ್ಳಲಾಗಿದೆ. ಯಾರದು ಎಷ್ಟು ಕೋಟಿ ರೂಪಾಯಿ ಬಾಕಿ ಇದೆ ಎನ್ನುವುದನ್ನು ಕೂಡ ಸಾರ್ವಜನಿಕ ವೇದಿಕೆಯಲ್ಲಿ ಪ್ರಕಟಿಸಲಾಗುವುದು. ಇದರಲ್ಲಿ ರಾಜಕೀಯವೇನಿಲ್ಲ; ಮುಚ್ಚು ಮರೆಯೂ‌ ಇಲ್ಲ ಎಂದು ಪ್ರತಿಕ್ರಿಯಿಸಿದರು.

ರಾಜ್ಯದಲ್ಲಿ 21 ಡಿಸಿಸಿ ಬ್ಯಾಂಕ್‌ಗಳಿವೆ. ಗುರಿ ತಲುಪಿವೆಯೇ ಎಂದು ಪ್ರಗತಿ ಪರಿಶೀಲನೆ ನಡೆಸುತ್ತಿದ್ದೇನೆ ಎಂದರು.

ಸಚಿವ ಸಂಪುಟ ಪುನರ್‌ರಚನೆ ಹಾಗೂ ವಿಸ್ತರಣೆ ಮುಖ್ಯಮಂತ್ರಿ ಅವರಿಗೆ ಬಿಟ್ಟಿದ್ದು. ಕೇಂದ್ರದ ನಾಯಕರೊಂದಿಗೆ ಚರ್ಚಿಸಿ ಕ್ರಮ ವಹಿಸುತ್ತಾರೆ. ರಮೇಶ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ ಕೊಡುವುದು ನನಗೆ ಗೊತ್ತಿಲ್ಲ ಎಂದು ಪ್ರತಿಕ್ರಿಯೆ ನೀಡಿದರು.

ನಮ್ಮ ಶಾಸಕರಲ್ಲಿ ಯಾರಾರಿಗೆ ಏನೇನು ಸ್ಥಾನಮಾನ ಸಿಕ್ಕಿಲ್ಲ ಎನ್ನುವುದು ಕೇಂದ್ರದ ‌ನಾಯಕರಿಗೆ ಗೊತ್ತಿದೆ ಎಂದರು.

ಡಿಸಿಸಿ ಬ್ಯಾಂಕ್‌ನಿಂದ ₹ 1200 ಕೋಟಿ ಸಾಲ ಕೊಡಲಾಗಿದೆ. ಪಾವತಿಗೆ ಅಪೆಕ್ಸ್ ಬ್ಯಾಂಕ್‌ನಿಂದ ಕ್ರಮ ವಹಿಸಲಾಗಿದೆ ಎಂದು ಹೇಳಿದರು.

ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಉಡಾಫೆಯ ಮಾತುಗಳನ್ನು ಆಡುತ್ತಾರೆ. ಅವರ ಕಾಲದಲ್ಲಿ ಹಗರಣಗಳು ಆಗಿಲ್ಲವೇ? ಮುಚ್ಚಿ ಹಾಕಿಲ್ಲವೇ? ಎಲ್ಪವೂ ಗೊತ್ತಿದೆ ಎಂದು ಕಿಡಿಕಾರಿದರು.

ಖಾಸಗಿ ತರಕಾರಿ ಮಾರುಕಟ್ಟೆ ಆರಂಭವಾಗಿರುವುದು ನನ್ನ ಗಮನಕ್ಕೂ ಬಂದಿದೆ. ಎಪಿಎಂಸಿ ಕಾಯ್ದೆಗೆ ತಿದ್ದುಪಡಿಯಾದ ನಂತರ ಎಲ್ಲಿ ಬೇಕಾದರೂ ಉತ್ಪನ್ನಗಳನ್ನು ಮಾರಲು ಅವಕಾಶವಿದೆ. ಇಲ್ಲಿನ ಎಪಿಎಂಸಿಗೆ ನಷ್ಟವಾಗುತ್ತಿದೆ ಎನ್ನುವುದು ಗೊತ್ತಾಗಿದೆ. ರೈತರಿಗೆ ‌ನಿರ್ಬಂಧವಿಲ್ಲ. ಯಾರಿಗೆ ಬೇಕಾದರೂ, ಎಲ್ಲಾದರೂ ಮಾರಬಹುದಾಗಿದೆ. ಪೈಪೋಟಿ ಎದುರಿಸಲು ನಮ್ಮ ಎಪಿಎಂಸಿಗಳು ಕೂಡ ಸಿದ್ಧವಾಗಬೇಕಿದೆ ಎಂದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

"ಪೃಥ್ವಿರಾಜ್‌' ಸಿನೆಮಾ ಶಾಲೆಗಳಲ್ಲಿ ಪ್ರದರ್ಶಿಸಿ!

Tue May 10 , 2022
ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ ತಾವು ನಟಿಸಿರುವ “ಪೃಥ್ವಿರಾಜ್‌’ ಸಿನೆಮಾವನ್ನು ಶೈಕ್ಷಣಿಕ ಸಿನೆಮಾ ಎಂದು ಕರೆದಿದ್ದು, ಚಿತ್ರವನ್ನು ಎಲ್ಲ ಶಾಲೆಗಳಲ್ಲಿ ಮಕ್ಕಳಿಗೆ ತೋರಿಸಬೇಕೆಂದು ಮನವಿ ಮಾಡಿದ್ದಾರೆ. “ಪೃಥ್ವಿರಾಜ್‌ ರಾಸೋ ಪುಸ್ತಕ ಓದಿ ಪೃಥ್ವಿರಾಜ್‌ ಚೌಹಾಣ್‌ ಅವರು ಅದೆಷ್ಟು ದೊಡ್ಡ ವ್ಯಕ್ತಿ ಎನ್ನುವ ಬಗ್ಗೆ ತಿಳಿದುಕೊಂಡೆ. ಆದರೆ ನಮ್ಮ ಶಿಕ್ಷಣದಲ್ಲಿ ಅವರ ಕಥೆಯನ್ನು ಕೇವಲ 1 ಪ್ಯಾರಾಕ್ಕೆ ಇಳಿಸಲಾಗಿದೆ. ನಮ್ಮ ದೇಶದ ಜತೆ ಇಡೀ ವಿಶ್ವದ ಮಕ್ಕಳು ಈ ಸಿನೆಮಾ ನೋಡಿ […]

Advertisement

Wordpress Social Share Plugin powered by Ultimatelysocial