ಸಚಿವ ಎಸ್.ಟಿ.ಸೋಮಶೇಖರ್ ಕೇಂದ್ರ ಬಜೆಟ್ ಕುರಿತು ಸಹಕಾರ!

ಬೆಂಗಳೂರು, ಫೆ.01, ಮಂಗಳವಾರ: ದೇಶದ ಆರ್ಥಿಕ ವ್ಯವಸ್ಥೆ ಚೇತರಿಕೆಗೆ ಪೂರಕವಾದ ವಾತಾವರಣ ನಿರ್ಮಿಸುವ, ಗ್ರಾಮೀಣ ಮೂಲ ಸೌಕರ್ಯಕ್ಕೆ ಒತ್ತು ನೀಡುವ ಜನಪರ ಬಜೆಟ್ ಇದಾಗಿದೆ ಎಂದು ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಹೇಳಿದರು.ಕೇಂದ್ರ ಸರ್ಕಾರದ ಬಜೆಟ್ ಕುರಿತಂತೆ ಪ್ರತಿಕ್ರಿಯಿಸಿರುವ ಸಚಿವರು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ಬಜೆಟ್ ಇದಾಗಿದೆ. ಜನಸಾಮಾನ್ಯರ ಜೀವನ ಮಟ್ಟ ಸುಧಾರಿಸುವಂತಹ ಬಜೆಟ್ ನಲ್ಲಿ ಉದ್ಯೋಗ ಸೃಷ್ಟಿ, ಬಂಡವಾಳ ಸೃಷ್ಟಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.ಸಹಕಾರ ಸಂಘಗಳ ತೆರಿಗೆಯನ್ನು ಕೇಂದ್ರ ಸರ್ಕಾರ ಇಳಿಕೆ ಮಾಡಿದೆ. ಪ್ರಸ್ತುತ ಸಹಕಾರ ಸಂಘಗಳು ಪಾವತಿಸುತ್ತಿದ್ದ 18% ತೆರಿಗೆಯನ್ನು 15%ಗೆ ಇಳಿಕೆ ಮಾಡಿದೆ. ಒಂದು ಕೋಟಿಗಿಂತ ಹೆಚ್ಚು ಮತ್ತು 10 ಕೋಟಿ ರೂ.ವರೆಗಿನ ಆದಾಯ ಹೊಂದಿರುವ ಸಹಕಾರ ಸಂಘಗಳ ಮೇಲಿನ ಸರ್ ಚಾರ್ಜ್ ಅನ್ನು 12% ನಿಂದ 7%ಗೆ ಇಳಿಕೆ ಮಾಡುವುದಾಗಿ ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ನಲ್ಲಿ‌ ಪ್ರಸ್ತಾಪಿಸಿದ್ದಾರೆ.ಇದರಿಂದಾಗಿ ಸಹಕಾರ ಸಂಘಗಳು ಮತ್ತು ಸಂಘದ ಸದಸ್ಯರುಗಳ ಆದಾಯ ಹೆಚ್ಚಳಕ್ಕೆ ಸಹಕಾರಿಯಾಗಲಿದೆ. ಬಹುಪಾಲು ಸದಸ್ಯರು ಗ್ರಾಮೀಣ ಭಾಗದವರಾದ್ದರಿಂದ ಅವರ ಆರ್ಥಿಕ ಪರಿಸ್ಥಿತಿ ಕೂಡ ಸುಧಾರಿಲಿದೆ ಎಂದು ಸೋಮಶೇಖರ್ ಹೇಳಿದ್ದಾರೆ.ಕೋವಿಡ್ ನಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ದೇಶದ ಅರ್ಥವ್ಯವಸ್ಥೆಯನ್ನು ಸರಿದಾರಿಗೆ ತರುವುದನ್ನು ಕೇಂದ್ರಿಕರಿಸಿರುವ ಬಜೆಟ್ ಇದಾಗಿದೆ. ಈ ಬಾರಿಯ ಬಜೆಟ್ ನಿಂದ ದೇಶದ ಆರ್ಥಿಕ ಪ್ರಗತಿ ಸಾಧಿಸಲಿದೆ.ಕಸ್ಟಮ್ಸ್ ಸುಂಕ ಕಡಿತದಿಂದ ಚಿನ್ನಾಭರಣಗಳ ಬೆಲೆ ಇಳಿಕೆಯಾಗಲಿದೆ. ಕೃಷಿಗೆ ಆರ್ಥಿಕ ನೆರವು ನೀಡುವುದು, ನದಿ ಜೋಡಣೆಯಂತಹ ಹತ್ತಾರು ಯೋಜನೆಗಳನ್ನು ಘೋಷಿಸುವ ಮೂಲಕ ಜನಪರ ಬಜೆಟ್ ಅನ್ನು ಮಂಡಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಜಾಕಿ ಶ್ರಾಫ್: ಇವರ ಜನ್ಮದಿನದಂದು, ಅವರ ಜೀವನ, ಆಯ್ಕೆಗಳು ಮತ್ತು ಚಲನಚಿತ್ರಗಳನ್ನು ಡಿಕೋಡ್ ಮಾಡೋಣ;

Tue Feb 1 , 2022
ಜಾಕಿ ಶ್ರಾಫ್ ವಿಶೇಷವಾಗಿದೆ, ಮತ್ತು ಅವರ ಜನ್ಮದಿನದಂದು ಮಾತ್ರವಲ್ಲ. ಅವರ ಕೆಲವು ಹಿತ್ತಾಳೆ ಪ್ರಚಾರ-ಹಸಿದ ಸಹೋದ್ಯೋಗಿಗಳಿಗಿಂತ ಭಿನ್ನವಾಗಿ, ಸಾರ್ವಜನಿಕವಾಗಿ ತುಂಬಾ ನಾಚಿಕೆಪಡುತ್ತಾನೆ. ಅವನು ತನ್ನ ಬಗ್ಗೆ ಮಾತನಾಡಲು ದ್ವೇಷಿಸುತ್ತಾನೆ. ಮತ್ತು ನೀವು ಅವನನ್ನು ಸಂದರ್ಶಿಸಲು ಒತ್ತಾಯಿಸಿದರೆ, ಅವರು ಗೊಣಗುವ ಅರ್ಧ ವಾಕ್ಯಗಳಲ್ಲಿ ಮಾತನಾಡುತ್ತಾರೆ ಮತ್ತು ಅಂತರವನ್ನು ತುಂಬಲು ನಿಮ್ಮನ್ನು ಕೇಳುತ್ತಾರೆ. ಒಮ್ಮೆ ಅವನ ಅತ್ಯಂತ ನಿರಂತರ ಪುರುಷ ಸಹನಟ ಅವನನ್ನು ಕೇಳಿದನು, ‘ಅವನು ತನ್ನನ್ನು ತಾನೇ ಏಕೆ ಉತ್ತಮವಾಗಿ ಮಾರುಕಟ್ಟೆಗೆ […]

Advertisement

Wordpress Social Share Plugin powered by Ultimatelysocial