ಬಹಳ ದಿನಗಳ ನಂತರ ಮತ್ತೆ ಶೂಟಿಂಗ್‌ ಹಾಜರು..ವಿಡಿಯೋ ಹಂಚಿಕೊಂಡ ಮೀನಾ.

 

 

ಬಹುಭಾಷಾ ನಟಿಯಾಗಿ ಹೆಸರು ಮಾಡಿರುವ ಚೆಲುವೆ. ಕನ್ನಡ, ತಮಿಳು, ತೆಲುಗು, ಮಲಯಾಳಂನ ಅನೇಕ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಬಾಲನಟಿಯಾಗಿ ಚಿತ್ರರಂಗಕ್ಕೆ ಬಂದ ಮೀನಾ, ನಾಯಕಿಯಾಗಿ ಕೂಡಾ ಸಕ್ಸಸ್‌ ಕಂಡಿದ್ದಾರೆ.ಒಂದು ಕಾಲದಲ್ಲಿ ಬಹುತೇಕ ಎಲ್ಲಾ ಭಾಷೆಯ ಸ್ಟಾರ್‌ ನಟರೊಂದಿಗೆ ಹೀರೋಯಿನ್‌ ಆಗಿ ನಟಿಸಿದ್ದ ಮೀನಾ ಈಗ ಪೋಷಕ ಪಾತ್ರಗಳಲ್ಲಿ ಮಿಂಚುತ್ತಿದ್ದಾರೆ. ಅಂದಿಗೂ, ಇಂದಿಗೂ ಅವರಿಗೆ ಬೇಡಿಕೆ ಕಡಿಮೆ ಆಗಿಲ್ಲ.ಕೆಲವು ದಿನಗಳ ಹಿಂದಷ್ಟೇ ಮೀನಾ ಬದುಕಲ್ಲಿ ದೊಡ್ಡ ದುರಂತ ನಡೆದಿದೆ. ಮೀನಾ, ಬಹಳ ಪ್ರೀತಿಸುತ್ತಿದ್ದ ತಮ್ಮ ಪತಿ ವಿದ್ಯಾ ಸಾಗರ್‌ ಅವರನ್ನು ಕಳೆದುಕೊಂಡಿದ್ದಾರೆ. ಈ ಘಟನೆಯಿಂದ ಮೀನಾ ಶಾಕ್‌ಗೆ ಒಳಗಾಗಿದ್ದರು. ಸಿನಿಮಾಗಳಿಂದ ದೂರ ಇದ್ದು ಮನೆಯಲ್ಲೇ ಉಳಿದಿದ್ದರು. ಇದೀಗ ಮೀನಾ, ತಮ್ಮ ಪತಿ ಅಗಲಿಕೆ ನೋವಿನಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಮೀನಾ ಕುಟುಂಬ, ಸ್ನೇಹಿತರು, ಸಹ ಕಲಾವಿದರು ಆಕೆಯನ್ನು ಮೊದಲಿನ ಸ್ಥಿತಿಗೆ ತರಲು ಸಾಕಷ್ಟು ಪ್ರಯತ್ನ ಪಡುತ್ತಿದ್ದಾರೆ. ಇದೀಗ ಬಹಳ ದಿನಗಳ ನಂತರ ಮತ್ತೆ ಚಿತ್ರೀಕರಣಕ್ಕೆ ಹಾಜರಾಗಿದ್ದಾರೆ. ಮೀನಾ, ಶೂಟಿಂಗ್‌ ಸೆಟ್‌ನಲ್ಲಿ ಮೇಕಪ್‌ ಮಾಡಿಕೊಳ್ಳುತ್ತಿರುವ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದೊಂದು ಜಾಹೀರಾತಿನ ಚಿತ್ರೀಕರಣವಾಗಿದ್ದು ಈ ವಿಡಿಯೋವನ್ನು ಸ್ವತ: ಮೀನಾ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de….

 

 

Please follow and like us:

Leave a Reply

Your email address will not be published. Required fields are marked *

Next Post

ಮುಲ್ಕ್ ರಾಜ್ ಆನಂದ್ ಭಾರತೀಯ ಪ್ರಧಾನ ಇಂಗ್ಲಿಷ್ ಕಥೆಗಾರ.

Sun Dec 25 , 2022
    ಮುಲ್ಕ್ ರಾಜ್ ಆನಂದ್ ಭಾರತೀಯ ಪ್ರಧಾನ ಇಂಗ್ಲಿಷ್ ಕಥೆಗಾರರಲ್ಲಿ ಒಬ್ಬರು. ಭಾರತೀಯ ಸಮಾಜದಲ್ಲಿನ ಶೋಷಿತ ಬಡಜನರ ಜೀವನ ಚಿತ್ರಣ ಅವರ ಬರಹಗಳಲ್ಲಿ ಎದ್ದು ಕಾಣುವಂತದ್ದು. ಮುಲ್ಕ್ ರಾಜ್ ಆನಂದ್ 1905ರ ಡಿಸೆಂಬರ್ 12ರಂದು ಪೆಶಾವರ್‌‌‌ನಲ್ಲಿ ಜನಿಸಿದರು. ಅಮೃತಸರದ ಖಾಲ್ಸಾ ಕಾಲೇಜಿನಲ್ಲಿ ಅಧ್ಯಯನ ಮಾಡಿದ ಆನಂದ್, ಲಂಡನ್‌‌ ವಿಶ್ವವಿದ್ಯಾಲಯದ ಕಾಲೇಜಿನಲ್ಲಿ ಹೆಚ್ಚಿನ ವ್ಯಾಸಂಗ ಮಾಡಿದರು. ಅಲ್ಲಿ ತಮ್ಮ ಖರ್ಚು ವಹಿಸಲು ರೆಸ್ಟೊರೆಂಟ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ಮುಂದೆ 1929ರಲ್ಲಿ […]

Related posts

Advertisement

Wordpress Social Share Plugin powered by Ultimatelysocial