ಸಿದ್ದರಾಮಯ್ಯ ‘ಡಬಲ್ ಕ್ಷೇತ್ರ’ ಕನಸಿಗೆ ಡಿಕೆ ಶಿವಕುಮಾರ್ ಬಿಚ್ಚಿ!

 

2003ರ ವಿಧಾನಸಭೆ ಚುನಾವಣೆಗೂ ಮುನ್ನವೇ ಕಾಂಗ್ರೆಸ್‌ ಮಹಾಸಾಗರರಿಗಳ ಮಧ್ಯೆ ಒಡಕು ಮೂಡಿದ್ದು, ವಿಭಜನೆಯ ಭಜನೆ ಶುರುವಾಗಿದೆ.. ಪಕ್ಷದ ಹಿರಿಯ ನಾಯಕರ ನಡುವೆ ಶುರುವಾದ ಈ ಮಲ್ಲಯುದ್ಧದಿಂದ ಕಾಂಗ್ರೆಸ್ ಹೋಳಾಗಿದೆ.. ರಾಜ್ಯ ಕಾಂಗ್ರೆಸ್‌ನ ಸಾರಥಿ ಡಿ.ಕೆ.ಶಿವಕುಮಾರ್ ಉರುಳಿಸಿದ ಅದೊಂದು ದಾಳಕ್ಕೆ ಸಿದ್ದರಾಮಯ್ಯ ಬಣ ನಿಗಿ ನಿಗಿ ಕೆಂಡವಾಗಿ ಬಿಟ್ಟಿದೆ.

ಸಿದ್ದರಾಮಯ್ಯ ‘ಡಬಲ್ ಕ್ಷೇತ್ರ’ ಕನಸಿಗೆ ಡಿಕೆ ಶಿವಕುಮಾರ್ ಬಿಚ್ಚಿ

ಟಿಕೆಟ್ ಹಂಚಿಕೆ ವಿಚಾರದಲ್ಲಿ ಕಾಂಗ್ರೆಸ್ ಪಡೆ ಮನೆಯೊಂದು ಮೂರು ಬಾಗಿಲಾಗಿದೆ. ಕ್ಷೇತ್ರ ಹುಡುಕಾಟದಲ್ಲಿ ಅಲೆಮಾರಿಯಾಗಿರುವ ಅಂದರಾಮಯ್ಯ, ಚಕ್ರವ್ಯೂಹದಲ್ಲಿ ಸಿಲುಕಿದ್ದಾರೆ. ಈ ಮಧ್ಯೆ ಡಿ.ಕೆ.ಶಿವಕುಮಾರ್ ಕೊಟ್ಟ ಹೇಳಿಕೆ ಸಿದ್ದರಾಮಯ್ಯರ ಸಿಟ್ಟು ಸ್ಫೋಟಗೊಳ್ಳುವಂತೆ ಮಾಡಿದೆ. ಒಬ್ಬರಿಗೆ ಒಂದೇ ಟಿಕೆಟ್ ಎಂಬ ರೂಲ್ಸ್ ಎಂಬ ಡಿಕೆ ಶಿವಕುಮಾರ್ ಹೇಳಿಕೆ ಪರೋಕ್ಷವಾಗಿ ತಮ್ಮ ಕುರಿತೇ ಆಡಿದ ಹಾಕಿಸಿ, ಕೆಣಕಿದ ಮಾತು ಅನ್ನೋದು ಚಾಣಾಕ್ಷ ರಾಮಯ್ಯ ಚೆನ್ನಾಗಿ ಬಲ್ಲರು, ಡಿ.ಕೆ. ಶಿವಕುಮಾರ್ ಹೇಳಿಕೆ ಬಗ್ಗೆ ಕೈ ಪಡೆಯಲ್ಲಿ ಭಾರೀ ಚರ್ಚೆ ಹುಟ್ಟುಹಾಕಿದೆ.

ಈ ಹಿಂದೆಯೂ ಒಬ್ಬರಿಗೆ ಒಂದೇ ಟಿಕೆಟ್ ಎಂದಿದ್ದ ಡಿಕೆ ಶಿವಕುಮಾರ್, ಈಗ ಮತ್ತೆ ಪುನರುಚ್ಚರಿಸಿದ್ದಾರೆ, ಡಿಕೆ ಶಿವಕುಮಾರ್‌ಗೆ ಸಿದ್ದರಾಮಯ್ಯ ಡಬಲ್ ಕ್ಷೇತ್ರಗಳಲ್ಲಿ ನಿಲ್ಲಲು ಸಿದ್ಧತೆ ನಡೆಸಿದ್ದಾರೆ ಎಂಬ ಸುಳಿವು ಸಿಕ್ಕಂತಿದೆ. ಈ ಎರಡು ಕ್ಷೇತ್ರದಲ್ಲಿ ಟಿಕೆಟ್‌ಗೆ ಮೂಲ ಕಾಂಗ್ರೆಸ್ ನಾಯಕ ಅಪಸ್ವರ ಎತ್ತಿದ್ದು, ಶಿವಕುಮಾರ್ ಮೂಲಕ ಪರೋಕ್ಷವಾಗಿ ಸಂದೇಶ ರವಾನಿಸಿದ್ದಾರೆ ಅನ್ನೋ ಮಾತುಗಳು ಪೊಲಿಟಿಕಲ್ ಪಡಸಾಲೆಯಲ್ಲಿ ಕೇಳಿ ಬರ್ತಿದೆ.

ಸಿದ್ದರಾಮಯ್ಯ ಬಣಕ್ಕೆ ಸಂದೇಶದ ದಾಟಿಸಿದ ಡಿಕೆ ಶಿವಕುಮಾರ್ ಆಕಾಂಕ್ಷಿಗಳೊಂದಿಗೆ ಗೌಪ್ಯ ಸಭೆ ನಡೆಸಿದ್ರು. ಈ ಸಭೆಗೆ ಸಿದ್ದರಾಮಯ್ಯ ಗೈರಾಗೋ ಮೂಲಕ ತಮ್ಮ ಅಸಮಾಧಾನ ಪರೋಕ್ಷ ವಾಗಿ ಪ್ರಕಟಿಸಿದ್ದಾರೆ. ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದವರಿಗೆ ಮಾತ್ರ ರೆಸಾರ್ಟ್‌ಗೆ ಪ್ರವೇಶ ನೀಡಲಾಗ್ತಿದೆ. ಒಟ್ಟಾರೆ, ರಣೋತ್ಸಾಹದಲ್ಲಿರುವ ಕಾಂಗ್ರೆಸ್‌ನಲ್ಲಿ ಹೊತ್ತಿದ ಟಿಕೆಟ್ ಕಿಡಿ, ಚುನಾವಣೆ ಹೊತ್ತಲ್ಲಿ ಅಗ್ನಿ ಪರ್ವತವಾಗಿ ಧಗಧಗಿಸೋದು ಪಕ್ಕಾ ಅನ್ನೋ ಸುಳಿವು ಸಿಗ್ತಿದೆ.

ಈ ಬಾರಿ ಬಿಜೆಪಿ ಆಡಳಿತ ವಿರೋಧಿ ಅಲೆ ಕಾಂಗ್ರೆಸ್ ಸರ್ಕಾರ ಹಿಂದೆ ಮಾಡಿದ್ದ ಎಲ್ಲಾ ತಪ್ಪುಗಳನ್ನು ಮುಚ್ಚಿ ಹಾಕಿದೆ. 40 ಪರ್ಸೆಂಟ್ ಆರೋಪಗಳು ಕಾಂಗ್ರೆಸ್ ಗೆ ವಿಜಯ ಮೆಟ್ಟಿಲುಗಳಾಗಿ ಪರಿವರ್ತನೆ ಆಗುತ್ತಿದೆ. ಆದ್ರೆ ಕಾಂಗ್ರೆಸ್ ಸ್ವಯಂಕೃತ ತಪ್ಪುಗಳು ಅಧಿಕಾರವನ್ನು ಕಸಿದುಕೊಳ್ಳುತ್ತಾ ಅನ್ನೋದು ಗೊತ್ತಿಲ್ಲ. ಇಬ್ಬರು ನಾಯಕರು ತಮ್ಮೊಳಗಿನ ಅಹಂ ಅನ್ನು ತೊರೆದು ಪಕ್ಷ ಕಟ್ಟಿದ್ರೆ ಅಧಿಕಾರ ದಕ್ಕುತ್ತೆ. ಆದ್ರೆ ಅದ್ಯಾಕೋ ಇಬ್ಬರು ನಾಯಕರು ನಾನೊಂದು ತೀರಾ ನೀನೊಂದು ತೀರ ಅನ್ನುವ ರೀತಿ ಇದ್ದಾರೆ. ಹೀಗಾಗಿ ಕಾರ್ಯಕರ್ತರಿಗೆ ಕಾಂಗ್ರೆಸ್ ಚುನಾವಣೆಯ ಹೊತ್ತಲ್ಲಿ ಎತ್ತ ಸಾಗುತ್ತಿದೆ ಎನ್ನುವ ಅನುಮಾನ ಕಾಡುತ್ತಿದೆ.

ಇಬ್ಬರು ಘಟಾನುಘಟಿ ನಾಯಕರು ತಮ್ಮ ಭಿನ್ನಾಭಿಪ್ರಾಯಗಳನ್ನು ಮುಚ್ಚಿಟ್ಟುಕೊಂಡು ಕರ್ನಾಟಕದಲ್ಲಿ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರುವುದಕ್ಕೆ ಪ್ರಯತ್ನಿಸಬೇಕಿದೆ. ಆದ್ರೆ ಆ ಹೊಂದಾಣಿಕೆಯೇ ಇಲ್ಲಿ ಕಾಣಿಸುತ್ತಿಲ್ಲ. ದೇಶದಲ್ಲಿ ನೆಲೆ ಕಳೆದುಕೊಂಡಿರುವ ಕಾಂಗ್ರೆಸ್ ಈಗ ಕರ್ನಾಟಕದಲ್ಲೂ ನೆಲೆ ಕಳೆದುಕೊಂಡರೆ ಪಕ್ಷಕ್ಕೆ ಭಾರಿ ಹಿನ್ನಡೆಯಾಗಲಿದೆ. ಅಲ್ಲದೆ ಮತ್ತೆ 5 ವರ್ಷಗಳ ಕಾಲ ವಿರೋಧ ಪಕ್ಷದಲ್ಲಿ ಕೂತುಕೊಂಡು ಆರೋಪಗಳಲ್ಲಿಯೇ ಕಾಲಕಳೆಯಬೇಕಾದ ಅನಿವಾರ್ಯತೆ ಶುರುವಾಗಬಹುದು. ಯಾವುದಕ್ಕೂ ಕಾಲ ಮಿಂಚುವ ಮೊದಲೇ ಎಚ್ಚೆತ್ತುಕೊಂಡರೆ ಕಾಂಗ್ರೆಸ್ ಗೆ ಒಳ್ಳೆಯದು

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

Just how is CENTRAL BUSINESS DISTRICT Made?

Sun Nov 27 , 2022
How is certainly CBD produced? A variety of tactics are used to acquire https://validcbdoil.com/diamond-cbd-review/ the cannabinoids and terpenes in hemp, but the most commonly used methods are CO2 extraction and necessary oil infusion. These processes both isolate the CBD composite and take away unwanted put materials, resulting in total, high-quality […]

Advertisement

Wordpress Social Share Plugin powered by Ultimatelysocial