ಹೈಟೆಕ್​ ರೇಷ್ಮೆ ಮಾರುಕಟ್ಟೆ ನಿರ್ಮಾಣಕ್ಕೆ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ.

ರಾಮನಗರ: ಚನ್ನಪಟ್ಟಣದ ವಂದಾರಗುಪ್ಪೆ ಬಳಿಯ ರೇಷ್ಮೆ ಇಲಾಖೆ ಆವರಣದಲ್ಲಿ ಹೈಟೆಕ್​ ರೇಷ್ಮೆ ಮಾರುಕಟ್ಟೆ ನಿರ್ಮಾಣಕ್ಕೆ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ.ಇದರಿಂದ ರಾಮನಗರ-ಚನ್ನಪಟ್ಟಣ ಅವಳಿ ನಗರದಲ್ಲಿ ಹೈಟೆಕ್​ ರೇಷ್ಮೆ ಮಾರುಕಟ್ಟೆ ನಿರ್ಮಾಣದ ಕನಸು ನನಸಾಗಲಿದೆ.ಜ.27ರ ಸಚಿವ ಸಂಪುಟ ಸಭೆಯಲ್ಲಿ ಈ ಯೋಜನೆಗೆ ಅನುಮೋದನೆ ನೀಡಲಾಗಿದ್ದು, ಇದೀಗ ಆದೇಶ ಹೊರಡಿಸಲಾಗಿದೆ.75 ಕೋಟಿ ರೂ. ವೆಚ್ಚಚನ್ನಪಟ್ಟಣದ ಸರ್ಕಾರಿ ರೇಷ್ಮೆ ತರಬೇತಿ ಸಂಸ್ಥೆಯ 20 ಎಕರೆ ಜಾಗದಲ್ಲಿ 75 ಕೋಟಿ ರೂಪಾಯಿ ವೆಚ್ಚದಲ್ಲಿ ರೇಷ್ಮೆ ಮಾರುಕಟ್ಟೆ ನಿರ್ಮಾಣವಾಗಲಿದೆ. ಹೈಟೆಕ್​ ರೇಷ್ಮೆ ಮಾರುಕಟ್ಟೆ ನಿರ್ಮಾಣಕ್ಕೆ ನಬಾರ್ಡ್​ನಿಂದ 75 ಕೋಟಿ ರೂ. ಆರ್ಥಿಕ ನೆರವು ಈಗಾಗಲೇ ಬಿಡುಗಡೆ ಆಗಿದೆ.10 ದಿನಗಳಲ್ಲಿ ಟೆಂಡರ್​: ಮಾರುಕಟ್ಟೆಗೆ ಪ್ರತಿದಿನ 40-50 ಟನ್​ ರೇಷ್ಮೆಗೂಡು ಬರುತ್ತಿದೆ. ಹೈಟೆಕ್​ ಮಾರುಕಟ್ಟೆ ನಿರ್ಮಾಣವಾದ ಬಳಿಕ ಇದರ ಪ್ರಮಾಣ 100-150 ಟನ್​ಗೆ ಹೆಚ್ಚಳವಾಗುವ ನಿರೀಕ್ಷೆ ಇದೆ. ಹಾಗಾಗಿ, 10 ದಿನಗಳಲ್ಲಿ ಟೆಂಡರ್​ ಕರೆದು, ಆದಷ್ಟು ಬೇಗ ಭೂಮಿಪೂಜೆ ನೆರವೇರಿಸಲು ಕ್ರಮ ಕೈಗೊಳ್ಳುವಂತೆ ರೇಷ್ಮೆ ಇಲಾಖೆ ಸಚಿವ ಡಾ. ನಾರಾಯಣಗೌಡ ಅಧಿಕಾರಿಗಳಿಗೆ ಸೂಚಿಸಿದ್ದಾರೆ.ಮಾರುಕಟ್ಟೆಯಲ್ಲಿ ಏನೆಲ್ಲ ಇರಲಿದೆ : ಹೈಟೆಕ್​ ಮಾರುಕಟ್ಟೆಯಲ್ಲಿ ಆಧುನಿಕ ಪ್ರವೇಶದ್ವಾರ, ಗಣಕೀಕೃತ ರೇಷ್ಮೆಗೂಡು ಹರಾಜು ಸಭಾಂಗಣ, ಕೋರ್​ ಕಟ್ಟಡ, ಶೌಚಗೃಹದ ಬ್ಲಾಕ್​, ಅಗ್ನಿಶಾಮಕದಳದ ಕೊಠಡಿ, ವಿದ್ಯುತ್​ ಕೊಠಡಿ, ಪೊಲೀಸ್​ ಚೌಕಿ, ನೀರು ಶೇಖರಣಾ ತೊಟ್ಟಿ, ಒಳಚರಂಡಿ ಸಂಸ್ಕರಣಾ ಘಟಕ, ಕಾಂಪೌಂಡ್​, ಸೋಲಾರ್​ ವ್ಯವಸ್ಥೆ, ಸಿಸಿ ಕ್ಯಾಮರಾ, ಹವಾನಿಯಂತ್ರಣ ವ್ಯವಸ್ಥೆ, ಆಂತರಿಕ ರಸ್ತೆಗಳು, ಜನರೇಟರ್​ ಮತ್ತಿತರ ಸೌಲಭ್ಯಗಳು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

Please follow and like us:

Leave a Reply

Your email address will not be published. Required fields are marked *

Next Post

ಕುಶಾಲನಗರ ಸಂಚಾರಿ ಪೊಲೀಸ್ ಠಾಣೆಯ ಎಎಸ್ಐ ನಾಪತ್ತೆ ಪ್ರಕರಣ

Fri Feb 4 , 2022
ಕಾಣೆಯಾಗಿದ್ದ ಪೊಲೀಸ್ ಅದಿಕಾರಿ ಶವವಾಗಿ ಪತ್ತೆ?ಕುಶಾಲನಗರ ಟ್ರಾಫಿಕ್ ಠಾಣೆಯ ಎಎಸ್ಐ ಸುರೇಶ್ಕೆಲ ದಿನಗಳಿಂದ ಕರ್ತವ್ಯಕ್ಕೆ ಹಾಜರಾಗದ ಸುರೇಶ್ಮೊಬೈಲ್ ಸ್ವಿಚ್ ಆಫ್ ಮಾಡಿ ವಸತಿಗೃಹಕ್ಕೆ ಬೀಗಹಾಕಿ ನಾಪತ್ತೆ ಆಗಿದ್ದ ಎ.ಎಸ್.ಐ ಇದೀಗ ಸುರೇಶ್ ರನ್ನೇ ಹೋಲುವ ಮೃತದೇಹ ಕೊಣನೂರಿನ ಕಾವೇರಿ ನದಿಯಲ್ಲಿ ಪತ್ತೆಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಕೊಣನೂರುನದಿಯಲ್ಲಿ ತೇಲುತ್ತಿರೊ ಮೃತದೇಹ, ಧರಿಸಿರೊ ಬಟ್ಟೆ ನೋಡಿ ಸುರೇಶ್ ಮೃತದೇಹ ಎಂದು ಗುರ್ತಿಸಿರೋ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಆಗಮಿಸುತ್ತಿರೊ ಸುರೇಶ್ ಕುಟುಂಬ ಸದಸ್ಯರು […]

Advertisement

Wordpress Social Share Plugin powered by Ultimatelysocial