‘ಸ್ಮೈಲ್ ಗುರು ಡ್ಯಾನ್ಸ್ ಗ್ಯಾರೇಜ್’ ಮೂರನೇ ಬ್ರ್ಯಾಂಚ್ ಲೋಕಾರ್ಪಣೆ- ಶಾಸಕ ಸೋಮಶೇಖರ್ ರಿಂದ ಶುಭ ಹಾರೈಕೆ.

ಸಿನಿಮಾ, ಸೀರಿಯಲ್, ಹಾಡು ಮತ್ತು ಡ್ಯಾನ್ಸ್ ಸೇರಿದಂತೆ ಯಾವುದೇ ರಂಗದಲ್ಲಿ ಸಾಧನೆ ಮಾಡಿದ ಮೇಲೆ ಕೆಲವರು ಅದೇ ಕ್ಷೇತ್ರದಲ್ಲಿ ಕೆಲಸ ಮುಂದುವರೆಸುತ್ತಾರೆ. ಮತ್ತೆ ಕೆಲವರು ನಟನೆಯ ಹೊರತಾಗಿಯೂ ತಮ್ಮ ಇಷ್ಟದ ಹವ್ಯಾಸಗಳನ್ನು ಉದ್ಯಮವನ್ನಾಗಿ ಮಾಡಿಕೊಳ್ಳುವವರಿದ್ದಾರೆ. ಅದಕ್ಕೆ ಮತ್ತೊಂದು ಉದಾಹರಣೆ ಕನ್ನಡತಿ ಖ್ಯಾತಿಯ ರಕ್ಷಿತ್.ಕಲರ್ಸ್ ಕನ್ನಡದ ಜನಪ್ರಿಯ ಧಾರಾವಾಹಿ ‘ಕನ್ನಡತಿ’ಯಲ್ಲಿ ಆದಿಯಾಗಿ ಖ್ಯಾತಿ ಗಳಿಸಿದ್ದ ರಕ್ಷಿತ್ ಡ್ಯಾನ್ಸ್ ನಲ್ಲಿ ಅಪಾರ ಪ್ಯಾಶನ್ ಹೊಂದಿದ್ದಾರೆ. ತಮ್ಮದೇ ಡ್ಯಾನ್ಸ್ ಸ್ಕೂಲ್ ಗಳನ್ನು ಹೊಂದಿರುವ ಇವರು ಇದೀಗ ಮೂರನೇ ಡ್ಯಾನ್ಸ್ ಸ್ಕೂಲ್ ತೆರೆದಿದ್ದು ಶಾಸಕ ಸೋಮಶೇಖರ್ ರಕ್ಷಿತ್ ಅವರ ‘ಸ್ಮೈಲ್ ಗುರು ಡ್ಯಾನ್ಸ್ ಗ್ಯಾರೇಜ್’ ಉದ್ಘಾಟನೆ ಮಾಡಿ ಶುಭ ಹಾರೈಸಿದ್ದಾರೆ. ಈ ವೇಳೆ ಕಿರುತೆರೆ ಕಲಾವಿದರಾದ ಮಾಸ್ಟರ್ ಆನಂದ್, ವಂಶಿಕಾ, ನೇಹಾ ಗೌಡ, ವಿನೋದ್ ಗೊಬ್ರ, ಸಾಗರ್ ಬಿಳಿಗೌಡ, ತ್ರಿವಿಕ್ರಮ್, ಬೃಂದಾ (ಡಿಕೆಡಿ ವಿನ್ನರ್), ಸುಶ್ಮಿತಾ(ಮಜಾಭಾರತ),ಯಶಸ್ವಿನಿ, ಮೇಘಾ ಶಣೈ, ಕರಣ್ ಆರ್ಯ, ನಕುಲ್ ಹಾಗೂ ಅನನ್ಯ ಅಮರ್(ಗಿಚ್ಚಿ ಗಿಲಿಗಿಲಿ) ಹಾಜರಿದ್ರು.ಹೊಸ ವಿನ್ಯಾಸದೊಂದಿಗೆ ‘ಸ್ಮೈಲ್ ಗುರು ಡ್ಯಾನ್ಸ್ ಗ್ಯಾರೇಜ್’ ಆರಂಭಿಸಲಾಗಿದೆ. ಈಗಾಗಲೇ ಎರಡು ಡ್ಯಾನ್ಸ್ ಸ್ಕೂಲ್ ತೆರೆದು ಗೆಲುವು ಕಂಡಿರುವ ರಕ್ಷಿತ್ ಇದೀಗ ಮೂರನೇ ಬ್ರ್ಯಾಂಚ್ ತೆರೆದಿದ್ದಾರೆ. ಈ ಮೂಲಕ ಡ್ಯಾನ್ಸ್ ನಲ್ಲಿ ಆಸಕ್ತಿ ಹೊಂದಿದವರಿಗೆ ಮಾರ್ಗದರ್ಶನ ನೀಡಲು ಮುಂದಾಗಿದ್ದಾರೆ. ಕೆಂಗೇರಿ ಉಪ ನಗರದ ಹೊಯ್ಸಳ ಸರ್ಕಲ್ ನಲ್ಲಿ ಮೂರನೇ ಡ್ಯಾನ್ಸ್ ಸ್ಕೂಲ್ ತೆರೆಯಲಾಗಿದೆ. ಅಡ್ಮಿಶನ್ ಓಪನ್ ಆಗಿದ್ದು, ಆಸಕ್ತಿ ಇರುವವರು ಸಂಪರ್ಕಿಸಬಹುದು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de….

Please follow and like us:

Leave a Reply

Your email address will not be published. Required fields are marked *

Next Post

ಚಾರ್ಲಿ ಚಾಪ್ಲಿನ್ ಮಹಾನ್ ಕಲಾವಿದ

Sun Dec 25 , 2022
  ಚಾರ್ಲಿ ಚಾಪ್ಲಿನ್ 1889ರ ಏಪ್ರಿಲ್ 16ರಂದು ಜನಿಸಿದ. ಚಾರ್ಲಿ ಚಾಪ್ಲಿನ್ ಹುಟ್ಟಿದ್ದು ವಾಲ್ ವರ್ತ್ ಎಂಬ ಲಂಡನ್ನಿನ ಸಮೀಪದ ಊರಿನಲ್ಲಿ. ಎಂಬತ್ತೆಂಟು ವರ್ಷ ಬದುಕಿ 1977ರ ಕ್ರಿಸ್ಮಸ್ ದಿನದಂದು ಸ್ವಿಟ್ಸರ್ಲೆಂಡಿನಲ್ಲಿ ನಿಧನನಾದ. ಚಾಪ್ಲಿನ್ ಚಿತ್ರಗಳನ್ನು ಆಸ್ವಾದಿಸಿದ ನಮಗೆ ಚಾಪ್ಲಿನ್ನನಷ್ಟು ಆತ್ಮೀಯರು ಮತ್ತೊಬ್ಬರಿದ್ದಾರೆಯೇ ಎನಿಸುತ್ತದೆ. ಇಡೀ ವಿಶ್ವಕ್ಕೆ ಸಂತೋಷ ಕೊಟ್ಟ ಅಪರೂಪದ ವ್ಯಕ್ತಿ ಆತ. ಚಾಪ್ಲಿನ್ನನಿಗೆ ಹೇಳಬೇಕೆನಿಸುತ್ತಿದೆ “ಚಾಪ್ಲಿನ್ ನೀನು ಯಾವ ಲೋಕದಲ್ಲಿದ್ದರೂ ಅಲ್ಲಿನ ಜನರನ್ನು ಸಂತೋಷವಾಗಿ ಇಟ್ಟಿರುವೆ!” ‘ದಿ […]

Advertisement

Wordpress Social Share Plugin powered by Ultimatelysocial