ಹಾವಿನಿಂದ ಕಚ್ಚಿಸಿ ಪತ್ನಿ ಕೊಂದಿದ್ದ ಪತಿಗೆ ಜೀವಾವಧಿ ಶಿಕ್ಷೆ..!

ಕೋಬ್ರಾ ಹಾವಿನಿಂದ ಕಚ್ಚಿಸಿ 25 ವರ್ಷದ ಪತ್ನಿಯನ್ನ ಕೊಂದ ಪತಿಗೆ ಕೇರಳ ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.ಕಳೆದ ವರ್ಷ ಮೇ ತಿಂಗಳಲ್ಲಿ ಪತ್ನಿ ಉತ್ತರಾಳ ಮಲಗಿದ್ದಾಗ ಕೋಬ್ರಾ ಹಾವಿನಿಂದ ಕಚ್ಚಿಸಿ ಕೊಂದ ಆರೋಪದಲ್ಲಿ ಪತಿ ಸೂರಜ್ ಕುಮಾರ್ ನನ್ನ ಅಕ್ಟೋಬರ್ 11ರಂದು ಬಂಧಿಸಲಾಗಿತ್ತು. ಪತ್ನಿಯನ್ನ ಕೊಲ್ಲಲು ಮೊದಲ ಬಾರಿ ಹಾವೊಂದನ್ನ ಬಳಸಿ ವಿಫಲವಾಗಿದ್ದು, ನಂತರ ಕೋಬ್ರಾದಿಂದ ಕಚ್ಚಿಸಿ ಹತ್ಯೆಗೈದಿದ್ದ.ಪ್ರಕರಣ ಅಪರೂಪದಲ್ಲೇ ಅಪರೂಪ ಎಂದು ವಿಶ್ಲೇಷಿಸಿದ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ವಿಐ. ಮನೋಜ್, ಆರೋಪಿಗೆ ಇನ್ನೂ 23 ವರ್ಷ.ಇಷ್ಟು ಚಿಕ್ಕ ವಯಸ್ಸಿನಲ್ಲಿ ಜೀವನಪೂರ್ತಿ ಜೈಲಿನಲ್ಲಿ ಕೊಳೆಯಬೇಕಾಗುತ್ತದೆ .

ಆರೋಪಿ ತನ್ನ ಪತ್ನಿಯನ್ನ ಕೊಲೆ ಮಾಡಿದ್ದೂ, ಅಲ್ಲದೇ ಸಾಕ್ಷ್ಯ ನಾಶ ಮಾಡಲು ಪ್ರಯತ್ನಿಸಿದ್ದ. ಈ ಹಿನ್ನೆಲೆಯಲ್ಲಿ ವಕೀಲರು ಕೊಲೆ ಮಾಡಿದ್ದಕ್ಕಾಗಿ 10 ವರ್ಷ ಹಾಗೂ ಸಾಕ್ಷ್ಯ ನಾಶ ಮಾಡಲು ಯತ್ನಿಸಿದ್ದಕ್ಕಾಗಿ 7 ವರ್ಷ ಶಿಕ್ಷೆ ವಿಧಿಸಬೇಕು ಎಂದು ವಾದಿಸಿದ್ದರು.

 

ತಾಜಾ ಸುದ್ಧಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ :

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

2 ವರ್ಷದ ಮಗುವಿನ ಮೇಲೆ ಕಾಮುಕನ ಅಟ್ಟಹಾಸ..!

Mon Nov 1 , 2021
ಮಂಗಳೂರು: ಇತ್ತೀಚೆಗೆ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿದೆ. ಇಲ್ಲೊಬ್ಬ ಕಾಮುಕ ಏನು ಅರಿಯದ ಎರಡು ವರ್ಷದ ಮಗುವಿನ ಮೇಲೆರಗಿದ್ದಾನೆ.  ವಿಕೃತಿ ಮೆರೆದ ಕಾಮುಕನಿಗೆ ಸ್ಥಳೀಯರೇ ತಕ್ಕ ಶಾಸ್ತಿ ಮಾಡಿದ್ದಾರೆ. ಕಡಲನಗರಿಯಲ್ಲಿ ಕಾಮುಕನೊಬ್ಬ ಎರಡು ವರ್ಷದ ಮಗುವನ್ನು ತನ್ನ ಕಾಮತೃಷೆಗೆ  ಬಳಸಿಕೊಂಡು ವಿಕೃತಿ ಮೆರೆದಿದ್ದಾನೆ. ಪಾಂಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಮೀನು ಸಂಸ್ಕರಣಾ ಘಟಕದಲ್ಲಿ ಕೆಲಸ ಮಾಡ್ತಿದ್ದ ಬಿಹಾರ ಮೂಲದ ದಂಪತಿಯ ಎರಡು ವರ್ಷದ ಮಗುವಿನ ಮೇಲೆ ಕಾಮುಕ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. […]

Advertisement

Wordpress Social Share Plugin powered by Ultimatelysocial