ಕ್ಷಿಪ್ರಕ್ರಾಂತಿ ವಿರೋಧಿಸಿ ಮುಂದುವರಿದ ಪ್ರತಿಭಟನೆ..!!!

ಸುಡಾನ್‌ನಲ್ಲಿ ಸೇನಾ ಮುಖ್ಯಸ್ಥ ಜನರಲ್ ಅಬ್ದುಲ್ ಫತಾಹ್ ಬರ್ಹಾನ್ ನೇತೃತ್ವದಲ್ಲಿ ಸೋಮವಾರ ನಡೆದ ಕ್ಷಿಪ್ರಕ್ರಾಂತಿಯನ್ನು ವಿರೋಧಿಸಿ ರಾಜಧಾನಿ ಖರ್ಟೂಮ್‌ನಲ್ಲಿ ಸತತ 2ನೇ ದಿನವೂ ಪ್ರತಿಭಟನೆ ನಡೆದಿದೆ. ಸರಕಾರವನ್ನು ವಿಸರ್ಜಿಸಿ ದೇಶದಾದ್ಯಂತ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ ಎಂದು ಜನರಲ್ ಬರ್ಹಾನ್ ಘೋಷಿಸಿದ ಕೆಲವೇ ಗಂಟೆಗಳ ಬಳಿಕ ಪ್ರಜಾಪ್ರಭುತ್ವ ವ್ಯವಸ್ಥೆಯ ಸಾವಿರಾರು ಬೆಂಬಲಿಗರು ರಸ್ತೆಗಿಳಿದು ಪ್ರತಿಭಟನೆ ಆರಂಭಿಸಿದ್ದರು. ಪ್ರತಿಭಟನೆಯನ್ನು ಹತ್ತಿಕ್ಕಲು ಭದ್ರತಾ ಪಡೆಗಳು ಹಿಂಸಾತ್ಮಕ ಕ್ರಮ ಕೈಗೊಂಡಿದ್ದು ಸೋಮವಾರ 7 ಮಂದಿ ಮೃತಪಟ್ಟಿದ್ದಾರೆ ಎಂದು ಅಲ್‌ಜಝೀರಾ ವರದಿ ಮಾಡಿದೆ.

 

ತಾಜಾ ಸುದ್ಧಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ :

https://play.google.com/store/apps/details?id=com.speed.newskannada

 

 

 

Please follow and like us:

Leave a Reply

Your email address will not be published. Required fields are marked *

Next Post

ಟೀಂ ಇಂಡಿಯಾ ಕೋಚ್‌ ಹುದ್ದೆಗೆ ದ್ರಾವಿಡ್‌ ಅರ್ಜಿ...!!!

Wed Oct 27 , 2021
ಮಾಜಿ ಬ್ಯಾಟ್ಸ್‌ ಮನ್‌ ರಾಹುಲ್‌ ದ್ರಾವಿಡ್‌ ಟೀಮ್‌ ಇಂಡಿಯಾದ ಕೋಚ್‌ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ. ಇದರೊಂದಿಗೆ ದ್ರಾವಿಡ್‌ ಅವರೇ ಭಾರತ ತಂಡದ ಕೋಚ್‌ ಆಗುವುದು ಬಹುತೇಕ ಖಚಿತಗೊಂಡಿದೆ. ರಾಹುಲ್‌ ದ್ರಾವಿಡ್‌ ನೂತನ ಕೋಚ್‌ ಆಗಿ ಅಧಿಕಾರ ಸ್ವೀಕರಿಸುವುದು ಕೆಲವು ವಾರಗಳ ಹಿಂದೆಯೇ ಖಾತ್ರಿಯಾಗಿತ್ತು. ಇದನ್ನು ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಔಪಚಾರಿಕವಾಗಿ ಹೇಳಿದ್ದರು. ಆದರೆ ಕ್ರಿಕೆಟ್‌ ಮಂಡಳಿಯ ಸಂಪ್ರದಾಯದಂತೆ ಅರ್ಜಿ ಮೂಲಕವೇ ಈ ಪ್ರಕ್ರಿಯೆ ನಡೆಯ ಬೇಕಿತ್ತು.ಹೀಗಾಗಿ ದ್ರಾವಿಡ್‌ ಇದನ್ನು […]

Advertisement

Wordpress Social Share Plugin powered by Ultimatelysocial