ಸಚಿವ ವಿ.ಸೋಮಣ್ಣ “ಪೌರ ಕಾರ್ಮಿಕರು ನಮ್ಮ ಜೀವ, ಜೀವನದ ರಕ್ಷಕರು”

ಬೆಂಗಳೂರು : ವಸತಿ ಸಚಿವರ ಕಛೇರಿ ಅವರಣದಲ್ಲಿ ಯಶಸ್ವಿನಿ ಫೌಂಡೇಶನ್ ರವರ ಸಹಯೋಗ ದೊಂದಿಗೆ ವಸತಿ ಸಚಿವರಾದ ವಿ ಸೋಮಣ್ಣನವರು ಹಾಗೂ ಡಾ.ಅರುಣ್ ಸೋಮಣ್ಣನವರು ಡಾ.ರಾಜ್ ಕುಮಾರ್ ವಾರ್ಡ್ನನ ಪೌರ ಕಾರ್ಮಿಕರಿಗೆ ಸಮವಸ್ತ್ರ ವಿತರಣೆ ಮಾಡಿದರು.ಇದೇ ಸಂದರ್ಭದಲ್ಲಿ ಸಚಿವರಾದ ವಿ.ಸೋಮಣ್ಣರವರು ಮಾತನಾಡಿ ಬಡವರಾಗಿ ಹುಟ್ಟಿರಬಹುದು ಅದರೆ ಬಡತನ ಶಾಶ್ವತವಲ್ಲ, ಯಾವುದೇ ಉದ್ಯೋಗ ಮೇಲು ,ಕೀಳಲ್ಲ ರಾಜಕೀಯ ಕ್ಷೇತ್ರದಲ್ಲಿ ಅಧಿಕಾರ ಸಿಕ್ಕಾಗ ಜಾತಿ ,ವರ್ಗ ನೋಡದೇ ಆರ್ಥಿಕವಾಗಿ ಹಿಂದುಳಿದವರು ,ಧ್ವನಿ ಇಲ್ಲದ ಜನರನ್ನು ಸಮಾಜದ ಮುಖ್ಯವಾಹಿನಿ ತರಬೇಕು . ಕೊವಿಡ್ ಸಾಂಕ್ರಮಿಕ ರೋಗದಿಂದ ಜನಜೀವನ ತತ್ತರವಾಗಿತ್ತು. ಅಂತಹ ಕಿಷ್ಟಕರ ಸಂದರ್ಭದಲ್ಲಿಯೂ ಪ್ರಾಣದ ಹಂಗು ತೊರೆದು ಪೌರ ಕಾರ್ಮಿಕರು ನಗರ ಸ್ವಚ್ಚತೆಗೆ ಹಗಲಿರಳು ಶ್ರಮಿಸಿದರು. ಸಾಂಕ್ರಾಮಿಕ ರೋಗ ನಿಯಂತ್ರಣ ಮತ್ತು ನಮ್ಮ ಆರೋಗ್ಯ ರಕ್ಷಣೆಗಾಗಿ ದುಡಿಯುತ್ತಿರುವ ಪೌರ ಕಾರ್ಮಿಕರು ನಮ್ಮ ಜೀವ,ಜೀವನದ ರಕ್ಷಕರು ಎಂದು ಹೇಳಿದರು.ಈ ವೇಳೆ ಬಿ.ಜೆ.ಪಿ.ಅಧ್ಯಕ್ಷರಾದ ವಿಶ್ವನಾಥಗೌಡ ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಉಪಾಧ್ಯಕ್ಷರಾದ ಸೋಮಶೇಖರ್ , ಮಾಜಿ ಪಾಲಿಕೆ ಸದಸ್ಯರುಗಳಾದ ಕೆ.ಉಮೇಶ್ ಶೆಟ್ಟಿ, ಮೋಹನ್ ಕುಮಾರ್ , ವಾಗೇಶ್ ಮತ್ತು ಬಿ.ಜೆ.ಪಿ.ಮುಖಂಡರಾದ ರಾಜಪ್ಪ , ಹೆಚ್.ರಮೇಶ್ , ಸಿದ್ದಾರ್ಥ್ ಶ್ರೀಧರ್ ರವರು ಪಾಲ್ಗೊಂಡಿದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಧಾರವಾಡ: ಮಹಿಳೆಯರ ಮೇಲೆ ಕಾಡುಪ್ರಾಣಿಗಳ ಹಟ್ಟಹಾಸ

Tue Feb 1 , 2022
ಧಾರವಾಡ: ತಾಲ್ಲೂಕಿನ ಗೋವನಕೊಪ್ಪ ಮತ್ತು ದಂಡಿಕೊಪ್ಪ ಗ್ರಾಮಗಳ ವ್ಯಾಪ್ತಿ ಪ್ರದೇಶದಲ್ಲಿ ಸೋಮವಾರ ಬೆಳಿಗ್ಗೆ ಇಬ್ಬರು ಮಹಿಳೆಯರ ಮೇಲೆ ಕಾಡುಪ್ರಾಣಿ ದಾಳಿ ಮಾಡಿದೆ.ಬಸವಣ್ಣೆವ ಕುಲಕರ್ಣಿ ಹಾಗೂ ಮಂಜುಳಾ ತೋಟಗೇರೆ ಅವರು ನಸುಕಿನಲ್ಲಿ ಕಡಲೆ ಕೀಳಲೆಂದು ಹೊಲಕ್ಕೆ ತೆರಳಿದಾಗ ಕಾಡುಪ್ರಾಣಿ ದಾಳಿ ನಡೆಸಿದೆ.ಈ ಕುರಿತು ಪ್ರತಿಕ್ರಿಯಿಸಿದ ಉಪ ಅರಣ್ಯ ಸಂರಕ್ಷಣಾಧಿಕಾರಿ ಯಶಪಾಲ್ ಕ್ಷೀರಸಾಗರ, ‘ಸಾರ್ವಜನಿಕರ ದೂರಿನನ್ವಯ ಕ್ರಮವಹಿಸಲಾಗಿದೆ. ಸೋಮವಾರ ರಾತ್ರಿ ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿ ಕಾರ್ಯಚರಣೆ ನಡೆಸಲಿದ್ದಾರೆ. ಧಾರವಾಡ […]

Advertisement

Wordpress Social Share Plugin powered by Ultimatelysocial