ಬಾಲಿವುಡ್ ನಟಿ ಸೋನಮ್ ಸೀಮಂತ ಕ್ಯಾನ್ಸಲ್..!

 

ಬಾಲಿವುಡ್ ನಟಿ ಸೋನಮ್ ಕಪೂರ್ ತಾಯ್ತನದ ಖುಷಿಯಲ್ಲಿದ್ದಾರೆ. ಮೊದಲ ಮಗುವಿನ ಆಗಮನದ ಖುಷಿಯಲ್ಲಿದ್ದಾರೆ. ಮುಂಬೈನಲ್ಲಿ ಸೀಮಂತ ಕಾರ್ಯಕ್ರಮ ಹಮ್ಮಿಕೊಂಡಿದ್ದ ಕಪೂರ್ ಕುಟುಂಬದದಿಂದ ಬ್ರೇಕಿಂಗ್ ನ್ಯೂಸ್‌ವೊಂದು ಹೊರಬಿದ್ದಿದೆ. ಸೋನಮ್ ಕಪೂರ್ ಸೀಮಂತ ಕಾರ್ಯವನ್ನು ಮುಂಬೈನಲ್ಲಿ ಮಾಡಲು ಪ್ಲ್ಯಾನ್ ಮಾಡಲಾಗಿತ್ತು.

ಇದೀಗ ರದ್ದಾಗಿದೆ.

`ಸಾವರಿಯಾ’ ಚಿತ್ರದ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದ ಚೆಲುವೆ ಸೋನಮ್ ನಂತರ ಸಾಲು ಸಾಲು ಸಿನಿಮಾಗಳಲ್ಲಿ ಮಿಂಚಿದ್ದರು. ಸ್ಟಾರ್ ನಟ ಅನಿಲ್ ಕಪೂರ್ ಅವರ ಮಗಳಾಗಿರುವ ಸೋನಮ್, 2018ರಲ್ಲಿ ಆನಂದ್ ಅಹುಜಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಕೆಲ ತಿಂಗಳ ಹಿಂದೆ ತಾವು ತಾಯಿಯಾಗುತ್ತಿರುವ ವಿಚಾರವನ್ನ ಅಧಿಕೃತವಾಗಿ ತಿಳಿಸಿದ್ದರು. ಪತಿಯ ಕುಟುಂಬದ ಬೇಬಿ ಶವರ್‌ನಲ್ಲಿ ಮಿಂಚಿದ್ದ ಸೋನಮ್ ಕಪೂರ್, ತವರು ಮನೆ ಮುಂಬೈನಲ್ಲಿ ಸೀಮಂತ ಮಾಡಲು ಸಕಲ ಸಿದ್ಧತೆ ನಡೆದಿತ್ತು. ಈಗ ಸೀಮಂತ ಕಾರ್ಯಕ್ರಮಕ್ಕೆ ಬ್ರೇಕ್ ಬಿದ್ದಿದೆ.

ಸೀಮಂತ ಕಾರ್ಯಕ್ರಮಕ್ಕಾಗಿ ಸೋನಮ್ ಕಪೂರ್ ಮುಂಬೈಗೆ ಬಂದಿಳಿದಿದ್ದಾರೆ. ಕೋವಿಡ್ ಕೇಸ್ ಜಾಸ್ತಿಯಾಗುತ್ತಿರುವ ಹಿನ್ನಲೆ ಸೀಮಂತ ಕಾರ್ಯಕ್ರಮವನ್ನ ಕಪೂರ್ ಕುಟುಂಬ ರದ್ದು ಮಾಡಿದೆ. ಸೋನಮ್ ಕಪೂರ್ ಅವರ ಆರೋಗ್ಯ ಕ್ಷೇಮಕ್ಕಾಗಿ ಕೋವಿಡ್ ಕೇಸ್ ಹೆಚ್ಚಳ ಆಗುತ್ತಿರುವ ಸಂದರ್ಭದಲ್ಲಿ ಸೀಮಂತ ಕಾರ್ಯವನ್ನ ಕ್ಯಾನ್ಸಲ್ ಮಾಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಡ್ರಗ್ಸ್ ಪ್ರಕರಣದಲ್ಲಿ ರಿಲೀಫ್ ಆದ ಬಳಿಕ ಮುಂಬೈನ ನೈಟ್ ಕ್ಲಬ್ ನಲ್ಲಿ ಪಾರ್ಟಿ ಮಾಡುತ್ತಿದ್ದುದನ್ನು ಆರ್ಯನ್ ಖಾನ್ ಗುರುತಿಸಿದ್ದಾರೆ

Tue Jul 19 , 2022
ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿದ್ದ ಶಾರುಖ್ ಖಾನ್ ಮತ್ತು ಗೌರಿ ಖಾನ್ ಪುತ್ರ ಆರ್ಯನ್ ಖಾನ್ ಪಾಸ್ ಪೋರ್ಟ್ ವಾಪಸ್ ಪಡೆದು 1 ಲಕ್ಷ ರೂಪಾಯಿ ಜಾಮೀನು ಬಾಂಡ್ ಕೂಡ ರದ್ದಾಗಿದ್ದರಿಂದ ಕೊನೆಗೂ ರಿಲಫ್ ಸಿಕ್ಕಿದೆ. ಸೋಮವಾರ (ಜುಲೈ 18), ಸ್ಟಾರ್ ಕಿಡ್ ಮುಂಬೈನಲ್ಲಿ ಶಾಖವನ್ನು ಉಗಿಯುತ್ತಿರುವುದನ್ನು ಗುರುತಿಸಲಾಗಿದೆ. ಈಗ ವೈರಲ್ ಆಗುತ್ತಿರುವ ವೀಡಿಯೊದಲ್ಲಿ, ಆರ್ಯನ್ ಖಾನ್ ಮುಂಬೈನ ಐಷಾರಾಮಿ ನೈಟ್‌ಕ್ಲಬ್‌ನಲ್ಲಿ ಪಾರ್ಟಿ ಮಾಡುವುದನ್ನು ಕಾಣಬಹುದು. ಇನ್‌ಸ್ಟಾಗ್ರಾಮ್ ಮತ್ತು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ […]

Advertisement

Wordpress Social Share Plugin powered by Ultimatelysocial