ಸಿನಿಮಾರಂಗದ ವಾಸ್ತವತೆಯ ದರ್ಶನ ಮಾಡಿಸುವ ‘ಸೌತ್ ಇಂಡಿಯನ್ ಹೀರೋ’!.

ಹಂಪಿಯ ಶಾಲೆಯೊಂದರಲ್ಲಿ ಫಿಸಿಕ್ಸ್‌ ಟೀಚರ್ ಆಗಿದ್ದ ಲಕ್ಷ್ಮಣ್ ರಾವ್ (ಸಾರ್ಥಕ್) ಅಚಾನಕ್ ಆಗಿ ಸಿನಿಮಾರಂಗಕ್ಕೆ ಎಂಟ್ರಿ ಕೊಡುತ್ತಾನೆ. ಪ್ರತಿಯೊಂದರಲ್ಲೂ ಲಾಜಿಕ್ ಹುಡುಕುವ ಲಕ್ಷ್ಮಣ್ ರಾವ್, ಸಿನಿಮಾದಲ್ಲಿನ ಲಾಜಿಕ್‌ಲೆಸ್ ಪಾಯಿಂಟ್‌ಗಳನ್ನು ಪ್ರಶ್ನೆ ಮಾಡುತ್ತಿರುತ್ತಾನೆ. ಅದೇ ಇವನಿಗೆ ಒಮ್ಮೊಮ್ಮೆ ಸಮಸ್ಯೆಯನ್ನು ತಂದಿಡುತ್ತದೆ. ಕೊನೆಗೆ ಈತ ರಾತ್ರಿಬೆಳಗಾಗುವುದರಲ್ಲಿ ಸೂಪರ್ ಸ್ಟಾರ್ ಆಗಿಬಿಡುತ್ತಾನೆ. ಅಲ್ಲಿಂದ ಮುಂದಿನದೇ ಅಸಲಿ ಕಥೆ. ಸಾಮಾನ್ಯ ಶಿಕ್ಷಕನೊಬ್ಬ ಸೂಪರ್ ಸ್ಟಾರ್ ಆದಮೇಲೆ ಆತನ ಬದುಕು ಹೇಗೆ ಬದಲಾಗುತ್ತದೆ? ಯಾವ ರೀತಿಯ ಜೀವನ ಕ್ರಮ ಅನುಸರಿಸಬೇಕಾಗುತ್ತದೆ? ಸಿನಿಮಾರಂಗದಲ್ಲಿನ ಕಹಿ ಸತ್ಯಗಳೇನು ಎಂಬುದನ್ನು ಇಂಚಿಂಚಾಗಿ ಹೇಳುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ನರೇಶ್.ನಿರ್ದೇಶಕ ನರೇಶ್ ಈ ಹಿಂದೆ ‘ಫಸ್ಟ್ Rank ರಾಜು’ ಸಿನಿಮಾದಲ್ಲೂ ಒಂದಷ್ಟು ಕಹಿ ಸತ್ಯಗಳನ್ನು ಮನರಂಜನೆಯ ರೂಪದಲ್ಲಿ ಹೇಳಿ ಸಕ್ಸಸ್ ಆಗಿದ್ದರು. ಈ ಬಾರಿ ‘ಸೌತ್ ಇಂಡಿಯನ್ ಹೀರೋ’ ಸಿನಿಮಾದಲ್ಲೂ ಕೂಡ ಅಂಥದ್ದೇ ವಿಚಾರಗಳನ್ನು ಹೇಳುವುದಕ್ಕೆ ಯತ್ನಿಸಿದ್ದಾರೆ. ಸ್ಟಾರ್ ಹೀರೋಗಳ ಸುತ್ತ ಇರುವ ಕೆಲ ಅಭಿಮಾನಿಗಳು, ಸ್ಟಾರ್ ವಾರ್, ಸಿನಿಮಾದವರನ್ನು ರಾಜಕೀಯದವರು ಬಳಸಿಕೊಳ್ಳುವ ರೀತಿ, ಫ್ಯಾನ್ ವಾರ್‌.. ಹೀಗೆ ನಾನಾ ವಿಚಾರಗಳನ್ನು ಇಲ್ಲಿ ಹೇಳಿದ್ದಾರೆ. ಅಭಿಮಾನದ ಹೆಸರಿನಲ್ಲಿ ನಡೆಯುವ ಅತಿರೇಕಗಳ ಬಗ್ಗೆಯೂ ಈ ಸಿನಿಮಾ ಮಾತನಾಡುತ್ತದೆ. ಪ್ರಸ್ತುತ ಸಿನಿಮಾರಂಗದಲ್ಲಿನ ಕೆಲ ಘಟನೆಗಳಿಗೆ ಕನ್ನಡಿ ಹಿಡಿಯುವಂತಿದೆ ಈ ಸಿನಿಮಾ.
ಕೆಲವೊಮ್ಮೆ ಕಥೆಯ ಮೂಲ ಆಶಯವನ್ನು ಮೀರಿ ಕಥೆ ಎತ್ತೆತ್ತಲೋ ಸಾಗಿರುವ ಸಂದರ್ಭವೂ ಇದೆ. ಒಂದಷ್ಟು ಅನಗತ್ಯ ದೃಶ್ಯಗಳಿಗೆ ಮುಲಾಜಿಲ್ಲದೇ ಕತ್ತರಿ ಹಾಕಬಹುದಿತ್ತು. ಇಲ್ಲಿ ಹೀರೋ ಪ್ರತಿ ಬಾರಿ ಲಾಜಿಕ್ ಬಗ್ಗೆ ಪ್ರಶ್ನೆ ಮಾಡುತ್ತಾನೆ. ಆದರೆ ಸಿನಿಮಾದ ದ್ವಿತಿಯಾರ್ಧದಲ್ಲೂ ಕೆಲವು ಸೀನ್‌ಗಳಲ್ಲಿ ಲಾಜಿಕ್ ಇಲ್ಲ. ಅದನ್ನು ಪ್ರೇಕ್ಷಕ ಕೂಡ ಪ್ರಶ್ನೆ ಮಾಡಬಹುದು. ಆದರೆ ಎಲ್ಲೂ ಬೋರ್ ಆಗದಂತೆ ಕಾಮಿಡಿಯನ್ನು ಇಡಿ ಇಡಿಯಾಗಿ ಕೊಡುವುದನ್ನು ನರೇಶ್ ಮರೆತಿಲ್ಲ. ಸಂಭಾಷಣೆ ರಿಯಾಲಿಟಿಗೆ ಹತ್ತಿರವಾಗಿದೆ. ಹರ್ಷವರ್ಧನ್ ರಾಜ್ ಸಂಗೀತ ನಿರ್ದೇಶನದಲ್ಲಿ ‘ಘಮ ಘಮ ಘಮಾಡಿಸ್ತಾವ ಮಲ್ಲಿಗೆ..’ ಹಾಡು ಇಷ್ಟವಾಗುತ್ತದೆ. ಆದರೆ ಸಿನಿಮಾದ ಮೇಕಿಂಗ್‌ನಲ್ಲಿ ಒಂದಷ್ಟು ಗುಣಮಟ್ಟದ ಕೊರತೆ ಇದ್ದು, ಆ ಬಗ್ಗೆ ನರೇಶ್ ಗಮನಹರಿಸಬೇಕಿತ್ತು.ಲಾಜಿಕ್ ಲಕ್ಷ್ಮಣ್ ರಾವ್ ಅಲಿಯಾಸ್ ಲಕ್ಕಿ ಪಾತ್ರ ಮಾಡಿರುವ ನಟ ಸಾರ್ಥಕ್‌ಗೆ ಇಲ್ಲಿ ಎರಡ್ಮೂರು ಶೇಡ್‌ನ ಪಾತ್ರವಿದೆ. ಶಿಕ್ಷಕನಾಗಿ, ಸ್ಟಾರ್ ನಟನಾಗಿ, ಪ್ರೇಮಿಯಾಗಿ ಸಾರ್ಥಕ್ ಇಷ್ಟವಾಗುತ್ತಾರೆ. ಕಾಶಿಮಾ ಮತ್ತು ಊರ್ವಶಿ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ, ತುಂಬ ಬೋಲ್ಡ್ ಆಗಿಯೇ ನಿಭಾಯಿಸಿದ್ದಾರೆ. ಹತಾಶೆಗೊಂಡ ನಿರ್ದೇಶಕನ ಪಾತ್ರದಲ್ಲಿ ವಿಜಯ್ ಚೆಂಡೂರ್ ಮತ್ತು ಪೊಲೀಸ್ ಅಧಿಕಾರಿಯಾಗಿ ಗುರುದೇವ್‌ ನಾಗರಾಜ್ ಇಷ್ಟವಾಗುತ್ತಾರೆ. ಅಶ್ವಿನ್ ರಾವ್ ಮತ್ತು ಅಮಿತ್ ತೆರೆಮೇಲೆ ಇದ್ದಷ್ಟು ಹೊತ್ತು ನಗಿಸುತ್ತಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

Movie Stars-Cricketers ಎಲ್ಲರನ್ನೂ ಒಟ್ಟಿಗೆ ನೋಡ್ಬೇಕಾ?

Fri Feb 24 , 2023
ಸಿನಿಮಾ ಶೂಟಿಂಗ್​ ನಡುವೆ ಸ್ಯಾಂಡಲ್​ವುಡ್  ಮಂದಿ ಇದೀಗ ಕ್ರಿಕೆಟ್​ ಆಡಲು ಸಿದ್ಧರಾಗಿದ್ದಾರೆ. ಕೆಸಿಸಿ 3ನೇ ಸೀಸನ್ (KCC 3rd Season)​ ಇಂದಿನಿಂದ ಆರಂಭವಾಗಲಿದೆ. ಕೆಸಿಸಿ 2023ರ ಹೊಸ ಆವೃತ್ತಿಯು ಇಂದು ಮತ್ತು ನಾಳೆ (24-25) ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ.ನಟ ಸುದೀಪ್ ​(Actor Sudeep)​ ಸೇರಿದಂತೆ ಸ್ಯಾಂಡಲ್​ವುಡ್​ನ ಅನೇಕ ನಟರುಗಳು ಕಾಣಿಸಿಕೊಳ್ಳಲಿದ್ದಾರೆ. ಅಲ್ಲದೇ ಎಲ್ಲಾ ತಂಡಗಳಲ್ಲಿಯೂ ಈ ಬಾರಿ ಸ್ಟಾರ್​ ಆಟಗಾರರನ್ನು ಆಯ್ಕೆ ಮಾಡಲಾಗಿದ್ದು, ಅದರಲ್ಲಿಯೂ ಗೇಲ್​, ರೈನಾ ಸಹ […]

Advertisement

Wordpress Social Share Plugin powered by Ultimatelysocial