ವಿಡಿಯೊ: ವಿರಾಟ್‌, ಬಾಬರ್‌ ಮತ್ತಿತರರ ಅಂದು ಮತ್ತು ಇಂದಿನ ಬ್ಯಾಟಿಂಗ್‌ ಶೈಲಿ ನೋಡಿ

ಬೆಂಗಳೂರು: ವಿರಾಟ್‌ ಕೊಹ್ಲಿ, ಬಾಬರ್‌ ಆಜಮ್‌, ಸ್ಟೀವ್‌ ಸ್ಮಿತ್‌ ಮತ್ತಿತರ ದಿಗ್ಗಜ ಆಟಗಾರರ ’19 ವರ್ಷದೊಳಗಿನವರ ಕ್ರಿಕೆಟ್‌’ ದಿನಗಳ ಬ್ಯಾಟಿಂಗ್‌ ಶೈಲಿಯನ್ನು ಇಂದಿನ ಆಟಕ್ಕೆ ಪರಸ್ಪರ ಹೋಲಿಸಿ ಅಂತರರಾಷ್ಟ್ರೀಯ ಕ್ರಿಕೆಟ್‌ ಮಂಡಳಿ (ಐಸಿಸಿ) ವಿಡಿಯೊ ಹಂಚಿಕೊಂಡಿದೆ.ವಿರಾಟ್‌ ಕೊಹ್ಲಿ, ಕೆಎಲ್‌ ರಾಹುಲ್‌, ಬಾಬರ್‌ ಆಜಮ್‌, ಜೋ ರೂಟ್‌, ಸ್ಟೀವ್‌ ಸ್ಮಿತ್‌ ಮತ್ತು ಬೆನ್‌ ಸ್ಟೋಕ್‌ ಅವರ ಅಂದಿನ ಮತ್ತು ಇಂದಿನ ಬ್ಯಾಟಿಂಗ್‌ ಶೈಲಿಯನ್ನು ಹೋಲಿಸಿದ ವಿಡಿಯೊ ಕ್ರಿಕೆಟ್‌ ಅಭಿಮಾನಿಗಳ ಗಮನ ಸೆಳೆದಿದೆ. ಅಂದು 19 ವರ್ಷದೊಳಗಿನ ಕ್ರಿಕೆಟ್‌ನಲ್ಲಿ ಸಿಕ್ಸರ್‌ ಅಥವಾ ಬೌಂಡರಿಗೆ ಅಟ್ಟುತ್ತಿದ್ದ ಬ್ಯಾಟಿಂಗ್‌ ಭಂಗಿಗೂ, ಇಂದು ಅಂತಾರಾಷ್ಟ್ರೀಯ ಪಂದ್ಯಗಳಲ್ಲಿನ ಬ್ಯಾಟಿಂಗ್‌ ಶೈಲಿಗೂ ವಿಧಾನದಲ್ಲಿ ಬದಲಾವಣೆ ಕಂಡರೂ ಅದೇ ಅಬ್ಬರವಿದೆ.ಆಡುವ ವಿಧಾನ ಬದಲಾಗಿದೆ ಆದರೆ ಬ್ಯಾಟಿಂಗ್‌ ಅಬ್ಬರ ಅಂದಿನಂತೆ ಇದೆ’ ಎಂದು ಐಸಿಸಿ ಇನ್‌ಸ್ಟಾಗ್ರಾಮ್‌ ಪೋಸ್ಟ್‌ನಲ್ಲಿ ಹೇಳಿದೆ. ‘ಯಾವ ಆಟಗಾರನ ಬ್ಯಾಟಿಂಗ್‌ ವಿಧಾನ ಹೆಚ್ಚು ಬದಲಾಗಿದೆ?’ ಎಂಬ ಪ್ರಶ್ನೆಯನ್ನು ಐಸಿಸಿ ಪ್ರೇಕ್ಷಕರ ಮುಂದಿಟ್ಟಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮದ್ವೆ ಮನೆಯಲ್ಲಿ ಕೊರಗಜ್ಜನ ವೇಷ ಧರಿಸಿ ಕುಣಿತ: ತಲೆಮರೆಸಿಕೊಂಡಿದ್ದ ಮದುಮಗ ಕೊನೆಗೂ ಸಿಕ್ಕಿಬಿದ್ದ

Fri Feb 4 , 2022
  ವಿಟ್ಲ: ಅನ್ಯ ಧರ್ಮದ ಮದುಮಗನೊಬ್ಬ ತನ್ನ ಮದುವೆಯಲ್ಲಿ ತುಳುನಾಡ ಆರಾಧ್ಯ ದೈವ ಕೊರಗಜ್ಜನ ವೇಷ ಧರಿಸಿ ಕುಣಿದಿದ್ದ ಪ್ರಕರಣದಲ್ಲಿ ಈತನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ.ಉಪ್ಪಳದ ಉಮರುಲ್ಲಾ ಬಾಷಿತ್ ಬಂಧಿತ. ವಧುವಿನ ಮನೆಗೆ ಬರುವ ಸಂದರ್ಭದಲ್ಲಿ ಈತ, ಕೊರಗಜ್ಜನ ವೇಷ ಧರಿಸಿ ತಲೆಗೆ ಅಡಿಕೆ ಹಾಳೆಯ ಟೋಪಿ ಹಾಕಿ ಮುಖಕ್ಕೆ ಮಸಿ ಬಳಿದುಕೊಂಡು ನೃತ್ಯ ಮಾಡುತ್ತಾ ಬಂದಿದ್ದ.ಇದಕ್ಕೆ ಈತನ ಸ್ನೇಹಿತರೂ ಸಾಥ್​ ಕೊಟ್ಟಿದ್ದರು. ಬಂಟ್ವಾಳ ತಾಲೂಕಿನ ಕೊಳ್ನಾಡು ಗ್ರಾಮದಲ್ಲಿ ಕಳೆದ […]

Advertisement

Wordpress Social Share Plugin powered by Ultimatelysocial