ಪ್ರತಿ ಮದುವೆಯೂ ಹಿಂಸಾತ್ಮಕ, ಪ್ರತಿಯೊಬ್ಬ ಪುರುಷನೂ ಅತ್ಯಾಚಾರಿ ಎಂದು ಹೇಳುವುದು ಸರಿಯಲ್ಲ: ಸ್ಮೃತಿ ಇರಾನಿ

ಹೊಸದಿಲ್ಲಿ: ದೇಶದಲ್ಲಿ ಮಹಿಳೆಯರು ಹಾಗೂ ಮಕ್ಕಳ ರಕ್ಷಣೆ ಎಲ್ಲರಿಗೂ ಆದ್ಯತೆಯಾಗಿದೆ. ಆದರೆ ಪ್ರತಿ ವಿವಾಹವನ್ನು ಹಿಂಸಾತ್ಮಕವೆಂದು ಖಂಡಿಸುವುದು ಹಾಗೂ ಪ್ರತಿಯೊಬ್ಬ ಪುರುಷನನ್ನು ಅತ್ಯಾಚಾರಿ ಎಂದು ಹೇಳುವುದು ಸೂಕ್ತವಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಬುಧವಾರ ರಾಜ್ಯಸಭೆಯಲ್ಲಿ ಹೇಳಿದ್ದಾರೆ.ವೈವಾಹಿಕ ಅತ್ಯಾಚಾರದ ಕುರಿತು ಸಿಪಿಐ ನಾಯಕ ಬಿನೋಯ್ ವಿಶ್ವಂ ಅವರ ಪೂರಕ ಪ್ರಶ್ನೆಗೆ ಪ್ರತಿಕ್ರಿಯೆಯಾಗಿ ಇರಾನಿ ಪ್ರತಿಕ್ರಿಯಿಸಿದರು.ಕೌಟುಂಬಿಕ ಹಿಂಸಾಚಾರದ ವ್ಯಾಖ್ಯಾನದ ಕುರಿತು ಕೌಟುಂಬಿಕ ಹಿಂಸಾಚಾರ ಕಾಯ್ದೆಯ ಸೆಕ್ಷನ್ 3 ಮತ್ತು ಅತ್ಯಾಚಾರದ ಐಪಿಸಿಯ ಸೆಕ್ಷನ್ 375 ಅನ್ನು ಸರಕಾರ ಗಮನಿಸಿದೆಯೇ ಎಂದು ಅವರು ಕೇಳಿದರು. “….ನಾನು ಹೇಳುತ್ತೇನೆ. ಈ ದೇಶದ ಪ್ರತಿಯೊಂದು ಮದುವೆಯನ್ನು ಹಿಂಸಾತ್ಮಕ ಮದುವೆ ಎಂದು ಖಂಡಿಸುವುದು ಹಾಗೂ ಈ ದೇಶದ ಪ್ರತಿಯೊಬ್ಬ ಪುರುಷನನ್ನು ಅತ್ಯಾಚಾರಿ ಎಂದು ಖಂಡಿಸುವುದು ಸೂಕ್ತವಲ್ಲ” ಎಂದು ಇರಾನಿ ಹೇಳಿದರು.ರಾಜ್ಯ ಸರಕಾರಗಳ ಸಹಯೋಗದೊಂದಿಗೆ ಈ ದೇಶದಲ್ಲಿ ಮಹಿಳೆಯರನ್ನು ರಕ್ಷಿಸುವುದು ಸರಕಾರದ ಪ್ರಯತ್ನವಾಗಿದೆ ಎಂದು ಅವರು ಹೇಳಿದರು. ಪ್ರಸ್ತುತ ಭಾರತದಾದ್ಯಂತ 30 ಕ್ಕೂ ಹೆಚ್ಚು ಸಹಾಯವಾಣಿಗಳು ಕಾರ್ಯನಿರ್ವಹಿಸುತ್ತಿವೆ. ಇದು 66 ಲಕ್ಷಕ್ಕೂ ಹೆಚ್ಚು ಮಹಿಳೆಯರಿಗೆ ಸಹಾಯ ಮಾಡಿದೆ. ಇದಲ್ಲದೆ, 703 ‘ಒನ್ ಸ್ಟಾಪ್ ಸೆಂಟರ್’ಗಳು ದೇಶದಲ್ಲಿ ಕಾರ್ಯನಿರ್ವಹಿಸುತ್ತಿವೆ ಹಾಗೂ ಇವು ಐದು ಲಕ್ಷಕ್ಕೂ ಹೆಚ್ಚು ಮಹಿಳೆಯರಿಗೆ ಸಹಾಯ ಮಾಡಿವೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬಜೆಟ್‌ ʼಗೋಲ್ಮಾಲ್‌ ಹಾಗೂ ಭಯಾನಕʼ: ಪ್ರಧಾನಿ ವಿರುದ್ಧ ಕೆಸಿಆರ್ ವಾಗ್ದಾಳಿ

Wed Feb 2 , 2022
  ತೆಲಂಗಾಣ: ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣೆಗಾಗಿ ಡ್ರೆಸ್ ಮಾಡುತ್ತಾರೆ ಹಾಗೂ ಅವರ ನೇತೃತ್ವದ ಸರಕಾರಕ್ಕೆ ರೈತರು ಮತ್ತು ಬಡವರ ಬಗ್ಗೆ ಗೌರವವಿಲ್ಲ ಎಂದು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ವಾಗ್ದಾಳಿ ನಡೆಸಿದರು.ಕೇಂದ್ರದ ಬಜೆಟ್ ಅನ್ನು “ಭಯಾನಕ ಹಾಗೂ ಗೋಲ್ಮಾಲ್” ಎಂದು ಕರೆದ ಕೆಸಿಆರ್ “ಉಪರ್ ಶೇರ್ವಾಣಿ, ಅಂದರ್ ಪರೇಶಾನಿ” ಎಂದು “ಗುಜರಾತ್ ಮಾದರಿ” ಅನ್ನು ವ್ಯಂಗ್ಯವಾಡಿದರು.ಸೋಷಿಯಲ್ ಮೀಡಿಯಾ ಮ್ಯಾನೇಜ್ ಮೆಂಟ್ ಮತ್ತೆ ಮತ್ತೆ ಸುಳ್ಳನ್ನು ಹೇಳುತ್ತಾ, […]

Advertisement

Wordpress Social Share Plugin powered by Ultimatelysocial