ದೋರನಹಳ್ಳಿ ಸಿಲಿಂಡರ್ ಸ್ಪೋಟ: ಸಾವಿನ ಸಂಖ್ಯೆ 11 ಕ್ಕೆ ಏರಿಕೆ

 

ಶಹಾಪುರ: ತಾಲೂಕಿನ ದೋರನಹಳ್ಳಿ ಗ್ರಾಮದ ಯುಕೆಪಿ ಕ್ಯಾಂಪಿನಲ್ಲಿ ಫೆ.25 ರಂದು ಸೀಮಂತ ಕಾರ್ಯಕ್ರಮವೊಂದರಲ್ಲಿ ನಡೆದ ಸಿಲಿಂಡರ್ ಸ್ಪೋಟ ದುರಂತದಲ್ಲಿ ಮೃತರ ಸಂಖ್ಯೆ ಗುರುವಾರ 11 ಕ್ಕೆ ಏರಿಕೆಯಾಗಿದೆ.ಹೆಚ್ಚಿನ ಚಿಕಿತ್ಸೆಗಾಗಿ ಮಹಾರಾಷ್ಟ್ರದ ಸೋಲಾಪುರ ಗಂಗಾಮಯಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಸಂಗಣ್ಣಗೌಡ ಗುರುಲಿಂಗಪ್ಪಗೌಡ ಲಕಶೆಟ್ಟಿ (55) ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ.ಸಿಲಿಂಡರ್ ದುರಂತ ಜಿಲ್ಲೆಯಲ್ಲಿಯೇ ಅತಿದೊಡ್ಡ ದುರ್ಘಟನೆ ಇದಾಗಿದ್ದು, 24-25 ಜನ ಗಾಯಗೊಂಡಿದ್ದರು. ಇಡಿ ಗ್ರಾಮದ ತುಂಬಾ ಸೂತಕದ ಛಾಯೆ ಆವರಿಸಿದ್ದು, ಶಿವರಾತ್ರಿ ಹಬ್ಬ ಕರಾಳ ಆಚರಣೆಯಾಗಿ ಕಾಡುತ್ತಿದೆ.ನಿತ್ಯ ನರಕಯಾತನೆ ಅನುಭವಿಸುತ್ತಿರುವ ಗ್ರಾಮಸ್ಥರು ನಿತ್ಯ ಸಾವಿನ ಸುದ್ದಿ ಬರುತ್ತಲಿರುತ್ತದೆ. ಇವತ್ಯಾರದೋ ಎಂಬ ಚಿಂತೆಯಲ್ಲಿ ಸಂಸ್ಕಾರ ತಯಾರಿ ನಡೆಸುವ ಸ್ಥಿತಿ ಬಂದಿರುವದು ನಮ್ಮೆಲ್ಲರ ದೌರ್ಭಾಗ್ಯವೆಂದು ಗ್ರಾಮದ ಯುವ ಮುಖಂಡ ತಮ್ಮಣ್ಣಗೌಡ ಜೋಳದ ದುಃಖವನ್ನು ತೋಡಿಕೊಂಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬಿಕ್ಕಟ್ಟು ಕಡಿಮೆಯಾದರೆ ಈ ಷೇರುಗಳು ವೇಗವಾಗಿ ಚೇತರಿಸಿಕೊಳ್ಳಬಹುದು!

Thu Mar 3 , 2022
ಬೇಡಿಕೆಯ ದೃಷ್ಟಿಕೋನದಿಂದ, ಹೂಡಿಕೆಯ ಚಕ್ರ, ಕ್ರೆಡಿಟ್ ಸೈಕಲ್ ಮತ್ತು ಪೆಂಟ್-ಅಪ್ ಖರ್ಚುಗೆ ಸಂಪರ್ಕ ಹೊಂದಿದ ದೇಶೀಯ ಚಕ್ರಗಳು. ಇದು ಕೈಗಾರಿಕೆಗಳು, ಬ್ಯಾಂಕುಗಳು, ಹಣಕಾಸು ಸೇವೆಗಳು, ಸ್ವಯಂ, ವಿವೇಚನೆಯ ಬಳಕೆ ಮತ್ತು ಪ್ರಸ್ತುತ ಭೌಗೋಳಿಕ ರಾಜಕೀಯ ಬಿಕ್ಕಟ್ಟಿಗೆ ಹೆಚ್ಚಾಗಿ ಸಂಬಂಧಿಸದ ರಿಯಲ್ ಎಸ್ಟೇಟ್ ಕ್ಷೇತ್ರಗಳನ್ನು ಒಳಗೊಂಡಿದೆ. ಸಾಮಾನ್ಯ ಭಾಷೆಯಲ್ಲಿ, ವ್ಯವಸ್ಥಿತ ಅಪಾಯವು ನಿರ್ದಿಷ್ಟ ಕಂಪನಿಯ ನಿಯಂತ್ರಣಕ್ಕೆ ಮೀರಿದ ಅಂಶಗಳಿಂದ ಉಂಟಾಗುವ ಅಪಾಯದ ಭಾಗವಾಗಿದೆ. ಇದನ್ನು ಮಾರುಕಟ್ಟೆ ಅಪಾಯ ಎಂದೂ ಕರೆಯುತ್ತಾರೆ. “ಸಿಸ್ಟಮ್ಯಾಟಿಕ್ […]

Advertisement

Wordpress Social Share Plugin powered by Ultimatelysocial