ಕನಾ೯ಟಕ ಪುರಾತತ್ವ ಮತ್ತು ಸಾಹಿತ್ಯ ಪರಿಷತ್ತು (ರಿ.) ಬೆಂಗಳೂರು*

* ಅತಿಶಯ ಶ್ರೀ ಕ್ಷೇತ್ರ ಹೊಂಬುಜ ಜೈನ ಮಠದಲ್ಲಿ ಪ.ಪೂ. ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವಯ೯ ಮಹಾಸ್ವಾಮೀಜಿ ಅವರ ಪಾವನ ಆಶ್ರಯದಲ್ಲಿ ಕರ್ನಾಟಕ ಜೈನ ಪುರಾತತ್ವ ಮತ್ತು ಸಾಹಿತ್ಯ ಪರಿಷತ್ತಿನ ವತಿಯಿಂದ ಜಿಲ್ಲಾವಾರು ಗೆಜೆಟಿಯರ್ ಕುರಿತು 2ನೆಯ ಕ್ಷೇತ್ರಕಾರ್ಯಾವಲಂಬಿತ ರಾಜ್ಯಮಟ್ಟದ ಎರಡು ದಿನಗಳ ಕಾರ್ಯಾಗಾರವು ದಿನಾಂಕ: 27/28-03-2021ರಂದು ಯಶಸ್ವಿಯಾಗಿ ಹೊಂಬುಜದಲ್ಲಿ ಜರುಗಿತು.
* ಜೈನ ಗೆಜೆಟಿಯರ್ ಹೊರತರುವ ಯೋಜನೆಗೆ ಶ್ರೀಮಠ ಸಹಕರಿಸಲಿದೆ ಮತ್ತು ಮುಂದಿನ ತಲೆಮಾರಿಗೆ ಜೈನ ಧರ್ಮದ ಇತಿಹಾಸ, ಪರಂಪರೆ, ಸಂಸ್ಕೃತಿ, ಸಾಹಿತ್ಯ, ಶಿಲ್ಪಕಲೆ ಶಾಸನ, ಜೈನಾವಶೇಷ ಇತ್ಯಾದಿಗಳನ್ನು ಸಮಗ್ರವಾಗಿ ಒಂದೆಡೆ ದಾಖಲಿಸುವ ಜಿಲ್ಲಾವಾರು ಜೈನ ಗೆಜೆಟಿಯರ್ ಹೊರತರುವುದು ಇಂದಿನ ದಿನಗಳಲ್ಲಿ ಅವಶ್ಯಕವಾದ ಅಕಾಡೆಮಿಕ್ ಯೋಜನೆಯಾಗಿದೆ ಎಂದು ಶ್ರೀಗಳು ಅಭಿಪ್ರಾಯಪಟ್ಟು ಆಶೀರ್ವದಿಸಿದರು.
* ಕಾರ್ಯಾಗಾರದಲ್ಲಿ ಎರಡು ದಿನಗಳ ಕಾಲ ಜೈನ ಶಾಸನ, ಬಸದಿ, ವಾಸ್ತುಶಿಲ್ಪ ಕುರಿತು ಕ್ಷೇತ್ರಕಾರ್ಯಾವಲಂಬಿತ ಅಧ್ಯಯನ ಅತ್ಯಂತ ಅರ್ಥಪೂರ್ಣ ಮತ್ತು ಮೌಲಿಕವಾಗಿತ್ತು. ತಜ್ಞರು, ವಿದ್ವಾಂಸರು, ಸಂಶೋಧಕರು ವಿದ್ವತ್ಪೂರ್ಣ ಉಪನ್ಯಾಸ, ಪ್ರಾತ್ಯಕ್ಷತೆ, ಚರ್ಚೆ- ಸಂವಾದದ ಮೂಲಕ ಹೊಸ ಚಿಂತನೆ ಹುಡುಕಾಟಕ್ಕೆ ಹೊಸ ಆಯಾಮ ನೀಡಿದರೆಂದು ಜಿಲ್ಲಾವಾರು ಸಂಪಾದಕರು ಅಭಿಪ್ರಾಯ ವ್ಯಕ್ತಪಡಿಸಿದರು.
* ಜೈನ ಶಾಸನಗಳನ್ನು ಯಾವ ರೀತಿಯಲ್ಲಿ ದಾಖಲೀಕರಣ ಮಾಡಬೇಕೆಂಬುದನ್ನು ಹಿರಿಯ ಸಂಶೋಧಕಿ ಶ್ರೀಮತಿ ಹನುಮಾಕ್ಷಿ ಗೋಗಿ ಅವರು ತಿಳಿಸಿಕೊಟ್ಟರು.
* ಯುವ ಸಂಶೋಧಕ ಡಾ. ರವಿಕುಮಾರ ನವಲಗುಂದ ಅವರು ಶಾಸನವನ್ನು ಪಡಿಯಚ್ಚು ಮಾಡಿಕೊಳ್ಳುವ ವಿಧಾನವನ್ನು ಮತ್ತು ಶಾಸನ ಪಾಠವನ್ನು ಗುರುತಿಸಿಕೊಳ್ಳುವ ಬಗೆಯನ್ನು ಅಮೂಲಾಗ್ರವಾಗಿ ತಿಳಿಸಿದರು.
* ಡಾ. ಸುಂಕಂ ಗೋವಧ೯ನ ಅವರು ಬಸದಿಯ ವಾಸ್ತು ಲಕ್ಷಣಗಳನ್ನು ದಾಖಲೀಕರಣ ಮಾಡಿಕೊಳ್ಳುವ ಕುರಿತು ಸವಿವರವಾಗಿ ಹೇಳಿಕೊಟ್ಟರು.
* ಯೋಜನಾ ನಿದೇ೯ಶಕರಾದ ಡಾ. ಅಪ್ಪಣ್ಣ ಹಂಜೆ ಅವರು ಜೈನ ಶಿಲ್ಪಗಳ ಪ್ರತಿಮಾ ಲಕ್ಷಣಗಳನ್ನು ತಿಳಿಸುತ್ತ, ವಿವರಗಳನ್ನು ಬರೆದುಕೊಳ್ಳುವ ಕುರಿತು ಸಮಗ್ರವಾಗಿ ತಿಳಿಸಿಕೊಟ್ಟರು.
* ಇನ್ನು ಹಲವಾರು ಸಂಶೋಧಕರು ತಮ್ಮ ಆಸಕ್ತಿ ಕ್ಷೇತ್ರದ ಕುರಿತು ಮಾಹಿತಿ ನೀಡಿದರು.
* ಯೋಜನಾ ಸಂಯೋಜಕರಾದ ಡಾ. ಅಜಿತ ಮುರುಗುಂಡೆ ಅವರು ಕಾಯಾ೯ಗಾರವನ್ನು ಅಚ್ಚುಕಟ್ಟಾಗಿ ಯಾವುದೇ ಕೊರತೆ ಆಗದಂತೆ ನಿವ೯ಹಿಸಿದರು.
* ಶ್ರೀ ಸಾತಪ್ಪ ಗೊಂಗಡಿ ಸ್ವಾಗತಿಸಿದರು. ಶ್ರೀ ನಿತಿನ್, ಡಾ. ಸುಂಕಂ ದಂಪತಿಗಳು, ಡಾ. ಮಹಾಂತೇಶ, ಡಾ. ಭರಮಪ್ಪ ಭಾವಿ ಮುಂತಾದವರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಡಾ. ಅಂಜಲಿ ಕಾಯ೯ಕ್ರಮ ನಿರೂಪಿಸಿದರು.
* ನಮಗೆ ಆಶ್ರಯ ನೀಡಿ ಎಲ್ಲ ರೀತಿಯಲ್ಲೂ ಉಪಕರಿಸಿದ ಶ್ರೀಮಠದ ಪರಮಪೂಜ್ಯ ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರಿಗೆ ಕರ್ನಾಟಕ ಜೈನ ಪುರಾತತ್ವ ಮತ್ತು ಸಾಹಿತ್ಯ ಪರಿಷತ್ತಿನ ಪರವಾಗಿ ತ್ರಿವಾರ ಇಚ್ಛಾಮಿ. ಸಂಪನ್ಮೂಲ ವ್ಯಕ್ತಿಗಳಿಗೂ ಹಾಗೂ ಭಾಗವಹಿಸಿದ ಸಂಪಾದಕ ಮಂಡಳಿಗೂ ಮತ್ತು ಶ್ರೀಮಠದ ಸಿಬ್ಬಂದಿಗಳಿಗೂ ಹೃತ್ಪೂರ್ವಕ ಕೃತಜ್ಞತೆಗಳು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ತೆರೆಗೆ 'ಮೇಡ್ ಇನ್ ಚೈನಾ' ಸಿನಿಮಾ!

Wed Mar 2 , 2022
  ನಾಗಭೂಷಣ್ ಹಾಗೂ ಪ್ರಿಯಾಂಕಾ ತಿಮ್ಮೇಶ್‌ ನಟನೆಯ ಮೇಡ್ ಇನ್ ಚೈನಾ ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಮಾಡಲಾಗಿದೆ. ಈಗಾಗಲೇ ಟೀಸರ್ ಮೂಲಕ‌ ಎಲ್ಲರ ಗಮನ ಸೆಳೆದ ಈ ಸಿನಿಮಾ ಮಾರ್ಚ್ 11ಕ್ಕೆ ಬಿಡುಗಡೆಯಾಗಲಿದೆ. ಇನ್ನೂ ಹಲವು ಚಿತ್ರಗಳಿಗೆ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದ ಪ್ರೀತಂ ತೆಗ್ಗಿನಮನೆ ‘ಮೇಡ್ ಇನ್ ಚೈನಾ’ ಮೂಲಕ ಮೊದಲ ಬಾರಿಗೆ ಡೈರೆಕ್ಟರ್ ಕ್ಯಾಪ್ ಧರಿಸಿದ್ದು ಜೊತೆಗೆ ಚಿತ್ರಕ್ಕೆ ಛಾಯಾಗ್ರಹಣ, ವಿಎಫ್ ಎಕ್ಸ್ , ಸಂಕಲನದ ಜವಾಬ್ದಾರಿ […]

Advertisement

Wordpress Social Share Plugin powered by Ultimatelysocial