ಅಡುಗೆಮನೆಯಲ್ಲಿ ಈ ವಸ್ತುಗಳು ಖಾಲಿ ಆಗಬಾರದು..!

ನಮಸ್ಕಾರ ಸ್ನೇಹಿತರೆ ಅಡುಗೆಮನೆಯಲ್ಲಿ ಇರುವಂತಹ ವಸ್ತುಗಳು ನಾವು ಪ್ರತಿದಿನ ಬಳಸುವಂತಹ ಕೆಲವೊಂದು ವಸ್ತುಗಳು ಲಕ್ಷ್ಮೀದೇವಿಯ ಪ್ರಧಾನವಾದ ವಸ್ತುಗಳಾಗಿರುತ್ತವೆ, ಇಂತಹ ಲಕ್ಷ್ಮೀದೇವಿಯ ಪ್ರಧಾನ ವಸ್ತುಗಳು ಮನೆಯಲ್ಲಿ ಯಾವಾಗಲೂ ಇರುವುದರಿಂದ ಮನೆಯೂ ಸಮೃದ್ಧಿ ಗೊಳ್ಳುತ್ತದೆ ಆಹಾರದ ಕೊರತೆ ಬರುವುದಿಲ್ಲ ಎಂದು ಹೇಳಲಾಗುತ್ತದೆ.ಒಂದು ವೇಳೆ ಅಡುಗೆಮನೆಯಲ್ಲಿ ಸಂಪೂರ್ಣವಾಗಿ ಇಂತಹ ವಸ್ತುಗಳು ಖಾಲಿಯಾದರೆ ದಾರಿದ್ರ್ಯ ಬರುತ್ತದೆ, ಇದು ಬಡತನಕ್ಕೆ ಕಾರಣವಾಗುತ್ತದೆ. ಇದರಿಂದ ಆಹಾರದ ಕೊರತೆ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ, ಹಾಗಾದರೆ ಅಡುಗೆಮನೆಯಲ್ಲಿ ಯಾವ ವಸ್ತುಗಳು ಖಾಲಿಯಾಗದಂತೆ ನೋಡಿಕೊಳ್ಳಬೇಕು ಎಂದು ನೋಡೋಣ. ಮೊದಲನೆಯದಾಗಿ ಉಪ್ಪು, ಉಪ್ಪನ್ನು ಮಹಾಲಕ್ಷ್ಮಿ ದೇವಿಯ ಸ್ವರೂಪವೆಂದು ಹೇಳಲಾಗುತ್ತದೆ, ಅದೇ ರೀತಿಯಾಗಿ ಉಪ್ಪಿಗೆ ಋಣಾತ್ಮಕ ಶಕ್ತಿಯನ್ನು ದೂರ ಮಾಡುವಂತಹ ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸುವಂತಹ ಶಕ್ತಿ ಇದೆ,‌ ಅಷ್ಟೇ ಅಲ್ಲದೆ ಮಹಾಲಕ್ಷ್ಮಿ ದೇವಿಯನ್ನು ಒಲಿಸಿಕೊಳ್ಳಲು ಉಪ್ಪನ್ನು ಬಳಸಬಹುದು, ಇಂತಹ ಉಪ್ಪು ಅಡುಗೆಮನೆಯಲ್ಲಿ ಕಾಲಿ ಆಗದಂತೆ ನೋಡಿಕೊಳ್ಳಬೇಕು. ಶುಕ್ರವಾರದ ದಿನ ಉಪ್ಪನ್ನು ಮನೆಗೆ ತರುವುದು ಶುಭಕರ, ಉಪ್ಪು ಮನೆಯಲ್ಲಿ ಖಾಲಿಯಾದರೆ ಲಕ್ಷ್ಮಿ ದೇವಿಯ ಅನುಗ್ರಹ ಕಡಿಮೆಯಾಗುತ್ತದೆ.ಎರಡನೆಯದಾಗಿ ಅರಿಶಿಣ, ಅರಿಶಿಣ ಕೂಡ ಮಹಾಲಕ್ಷ್ಮಿ ದೇವಿಗೆ ಇಷ್ಟವಾಗುವಂತಹ ವಸ್ತು, ಮನೆಯಲ್ಲಿ ಅರಿಶಿಣ ಯಾವಾಗಲೂ ಖಾಲಿಯಾಗದಂತೆ ನೋಡಿಕೊಳ್ಳಬೇಕು ಅರಿಶಿನ ಮನೆಯಲ್ಲಿರುವುದರಿಂದ ಗುರುಬಲವು ಮನೆಗೆ ಇರುತ್ತದೆ. ಇನ್ನು ಅಕ್ಕಿ, ಮನೆಯಲ್ಲಿ ಯಾವಾಗಲೂ ಅಕ್ಕಿ ಖಾಲಿಯಾಗದಂತೆ ನೋಡಿಕೊಳ್ಳಿ ಮನೆಯಲ್ಲಿ ಅಕ್ಕಿ ಖಾಲಿ ಆಗುವುದರಿಂದ ಆಹಾರದ ಕೊರತೆ ಉಂಟಾಗುತ್ತದೆ ಅನ್ನಪೂರ್ಣೇಶ್ವರಿ ದೇವಿಯ ಅನುಗ್ರಹ ಕಡಿಮೆಯಾಗುತ್ತದೆ ಹಾಗಾಗಿ ಮನೆಯಲ್ಲಿ ಸದಾ ಅಕ್ಕಿ ಇರುವುದರಿಂದ ಅನ್ನಪೂರ್ಣೇಶ್ವರಿ ಅನುಗ್ರಹ ಸದಾಕಾಲ ಇರುತ್ತದೆ. ಇನ್ನು ಎಣ್ಣೆ, ಮನೆಯಲ್ಲಿ ಎಣ್ಣೆ ಖಾಲಿಯಾಗದಂತೆ ನೋಡಿಕೊಳ್ಳಬೇಕು ಅಡುಗೆಗೆ ಬಳಸುವ ಎಣ್ಣೆ ಮನೆಗೆ ಅದೃಷ್ಟವನ್ನು ತರುತ್ತದೆ, ಹಾಗಾಗಿ ಸ್ವಲ್ಪ ಎಣ್ಣೆ ಇರುವಾಗಲೇ ಎಣ್ಣೆಯನ್ನು ತಂದು ಇಟ್ಟುಕೊಳ್ಳಬೇಕು. ಇನ್ನು ಹಿಟ್ಟು, ಗೋಧಿಹಿಟ್ಟು ಆಗಲಿ ರಾಗಿ ಹಿಟ್ಟು ಆಗಲಿ ಯಾವುದೇ ಆಗಲಿ ಮನೆಯಲ್ಲಿ ಖಾಲಿಯಾಗದಂತೆ ನೋಡಿಕೊಳ್ಳಬೇಕು. ಮನೆಯಲ್ಲಿ ಹಿಟ್ಟು ಖಾಲಿಯಾಗಿದರಿಂದ ಮನೆ ಯಜಮಾನನ ಘನತೆಗೆ ಧಕ್ಕೆ ಆಗುತ್ತದೆ ಎಂದು ವಾಸ್ತುಶಾಸ್ತ್ರದಲ್ಲಿ ಹೇಳಲಾಗಿದೆ. ಈ ರೀತಿಯಾಗಿ ಮನೆಯಲ್ಲಿ ಬಡತನಕ್ಕೆ ದಾರಿದ್ರ್ಯ ಬರಬಾರದು ಎಂದರೆ ಈ 5 ವಸ್ತುಗಳು ಖಾಲಿಯಾಗದಂತೆ ನೋಡಿಕೊಳ್ಳಬೇಕು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸೌಜನ್ಯದ ಭೇಟಿಯಷ್ಟೇ, ರಾಜಕೀಯ ಉದ್ದೇಶವಿಲ್ಲ: ಡಿಕೆ ಶಿವಕುಮಾರ್ ಭೇಟಿ ಬಗ್ಗೆ ಆನಂದ್ ಸಿಂಗ್ ಸ್ಪಷ್ಟನೆ

Thu Feb 3 , 2022
ಬೆಂಗಳೂರು: ಇತ್ತೀಚೆಗೆ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ ವಿಷಯಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿದ್ದಾರೆ.ಈ ಸಂಬಂಧ ಬುಧವಾರ ಮಾತನಾಡಿದ ಅವರು ಇದೊಂದು ಸೌಜನ್ಯಯುತ ಭೇಟಿಯಾಗಿತ್ತು, ಅದರಲ್ಲಿ ರಾಜಕೀಯ ಉದ್ದೇಶವಿರಲಿಲ್ಲ ಎಂದು ಹೇಳಿದ್ದಾರೆ.ಅದೊಂದರ ಆಕಸ್ಮಿಕ ಭೇಟಿಯಾಗಿತ್ತು, ಅದಕ್ಕೂ ರಾಜಕೀಯಕ್ಕೂ ಯಾವುದೇ ಸಂಬಂಧವಿರಲಿಲ್ಲ ಎಂದು ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ, ಮಾಜಿ ಸಿಎಂ ಯಡಿಯೂರಪ್ಪ ವಿಜಯ ನಗರ ಜಿಲ್ಲೆ ಮಾಡುವ ಬಗ್ಗೆ ನೀಡಿದ್ದ ಭರವಸೆ ಈಡೇರಿಸಿದ್ದಾರೆ, […]

Advertisement

Wordpress Social Share Plugin powered by Ultimatelysocial