ಕೊರೊನಾದ ಮುಂದಿನ ರೂಪಾಂತರಿ ಮತ್ತಷ್ಟು ಅಪಾಯಕಾರಿ: WHO

ವಾಷಿಂಗ್ಟನ್, ಫೆಬ್ರವರಿ 9: ಕೊರೊನಾದ ಮುಂದಿನ ರೂಪಾಂತರಿ ಮತ್ತಷ್ಟು ಅಪಾಯಕಾರಿ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಕೊರೊನಾದ ಮೂರು ಅಲೆಗಳಿಗಿಂತ ಈ ಅಲೆಯಲ್ಲಿ ಹೆಚ್ಚು ಮಂದಿಗೆ ಸೋಂಕು ತಗುಲಬಹುದು ಎಂದು ಅಂದಾಜಿಸಲಾಗಿದೆ.ಓಮಿಕ್ರಾನ್ ಕೊನೆಯ ರೂಪಾಂತರಿ ಅಲ್ಲ, ಮುಂದೆ ಕಾಣಿಸಿಕೊಳ್ಳುವ ರೂಪಾಂತರಿ ಹಿಂದಿನ ಎಲ್ಲಾ ರೂಪಾಂತರಿಗಳಿಗಿಂತ ಹೆಚ್ಚು ಅಪಾಯಕಾರಿ ಎಂದು ಹೇಳಲಾಗಿದೆ.ಡೆಲ್ಟಾ ಬಳಿಕ ಕಾಣಿಸಿಕೊಂಡಿದ್ದು, ಒಮಿಕ್ರಾನ್​ 2021ರ ನವೆಂಬರ್​ನಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಮೊದಲು ಕಾಣಿಸಿಕೊಂಡ ಈ ವೈರಸ್ ಅತ್ಯಂತ ಕಡಿಮೆ ಸಮಯದಲ್ಲಿ ಜಗತ್ತನ್ನು ಆವರಿಸಿದೆ. ಡೆಲ್ಟಾಕ್ಕಿಂತ ನಾಲ್ಕು ಪಟ್ಟು ಹೆಚ್ಚು ವೇಗವಾಗಿ ಹರಡಿದ ಒಮಿಕ್ರಾನ್ ಆರೋಗ್ಯದಲ್ಲಿ ಗಂಭೀರ ಸಮಸ್ಯೆಯನ್ನು ಉಂಟು ಮಾಡಿದ್ದು ತುಂಬ ಕಡಿಮೆ.ಹಾಗೇ, ಇದು ಡೆಲ್ಟಾಕ್ಕಿಂತಲೂ 5 ಪಟ್ಟು ಹೆಚ್ಚು ಮರುಸೋಂಕಿನ ಅಪಾಯ ಹೊಂದಿದೆ. ಸದ್ಯ ಭಾರತದಲ್ಲಿ ನಡೆಯುತ್ತಿರುವ ಮೂರನೇ ಅಲೆಗೆ ಕಾರಣವಾಗಿದ್ದು ಇದೇ ಒಮಿಕ್ರಾನ್ ಸೋಂಕಾಗಿದೆ. ಒಮಿಕ್ರಾನ್ ಶುರುವಾದಾಗ, ಇದು ಕೊರೊನಾದ ಕೊನೆಯ ರೂಪಾಂತರ ಎಂಬ ಎಂದು ಹೇಳಿದ್ದರು, ಆದರೆ ಇದೀಗ ತಜ್ಞರು ಅದನ್ನು ಅಲ್ಲಗಳೆಯುತ್ತಿದ್ದಾರೆ.ಕೊರೊನಾ ಸೋಂಕು​ ಶುರುವಾದ ಮೇಲೆ ಅದರಿಂದ ಹಲವು ರೂಪಾಂತರಗಳು ಉಂಟಾಗಿದ್ದರೂ, ಜಗತ್ತಿಗೆ ಹೆಚ್ಚು ಬಾಧಿಸಿದವು ಡೆಲ್ಟಾ ಮತ್ತು ಒಮಿಕ್ರಾನ್​. ಅದರಲ್ಲಿ ಡೆಲ್ಟಾ ಅತ್ಯಂತ ಮಾರಣಾಂತಿಕವಾಗಿ ಪರಿಣಮಿಸಿತ್ತು. ಅದಕ್ಕೆ ಹೋಲಿಸದರೆ ಒಮಿಕ್ರಾನ್​ ಗಂಭೀರತೆ ತುಂಬ ಕಡಿಮೆಯಿತ್ತು.ಡೆಲ್ಟಾ ಮೊಟ್ಟ ಮೊದಲು ಭಾರತದಲ್ಲಿ ಪತ್ತೆಯಾಗಿದ್ದು 2020ರ ಅಕ್ಟೋಬರ್​​ನಲ್ಲಿ. ಅದರ ಹಿಂದಿನ ಆಲ್ಪಾ ರೂಪಾಂತರಿಗಿಂತಲೂ ಶೇ.50ರಷ್ಟು ವೇಗವಾಗಿ ಹರಡಿತ್ತು. ಹಾಗೇ ಮೂಲ ವೈರಸ್ ಆದ ಕೊರೊನಾ ವೈರಸ್​ಗಿಂತಲೂ ಶೇ.50ರಷ್ಟು ಅಧಿಕ ಸಾಂಕ್ರಾಮಿಕವಾಗಿತ್ತು. ಈ ಡೆಲ್ಟಾ ಭಾರತದಲ್ಲಿ ಎರಡನೇ ಅಲೆಗೆ ಕಾರಣವಾಗಿತ್ತು. ಅದು ಬಿಟ್ಟರೆ ಯುಕೆ, ಇಸ್ರೇಲ್​, ರಷ್ಯಾ, ಆಸ್ಟ್ರೇಲಿಯಾ ಸೇರಿ ಜಗತ್ತಿನ ಇತರ ದೇಶಗಳಿಗೂ ಅತ್ಯಂತ ಹೆಚ್ಚಾಗಿ ಬಾಧಿಸಿತ್ತು.ಪ್ರಸ್ತುತ ಲಭ್ಯವಿರುವ ಲಸಿಕೆಗಳು ಕೊರೊನಾ ರೂಪಾಂತರಿ ವಿರುದ್ಧ ಹೋರಾಡಲಿದ್ದು, ಸಾವಿನ ಸಂಖ್ಯೆ ಹೆಚ್ಚಾಗದಂತೆ ತಡೆಯುತ್ತಿದೆ. ಹೀಗಾಗಿ ಮುಂದಿನ ರೂಪಾಂತರಿಯ ಪ್ರಭಾವ ಅಷ್ಟು ಹೆಚ್ಚಾಗಿ ಇರುವುದಿಲ್ಲ ಎಂದೂ ಕೆಲವು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.ಈಗಿರುವ ಲಸಿಕೆಗಳು ಕೊರೊನಾ ರೂಪಾಂತರಿ ವಿರುದ್ಧ ಹೋರಾಡುವುದು ಕಷ್ಟ, ಆದರೆ ಇದೇ ಪರಿಸ್ಥಿತಿಯಲ್ಲಿ ಮುಂದುವರೆಯಲು ಸಾಧ್ಯವಿಲ್ಲ, ಸೋಂಕು ಮತ್ತಷ್ಟು ಮಂದಿಗೆ ಹರಡದಂತೆ ಎಚ್ಚರಿಕೆವಹಿಸಬೇಕಿದೆ ಎಂದು ಮಾರಿಯಾ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಭುಜ್ಗೆ ಹೋಗುವ ಅಲಯನ್ಸ್ ಏರ್ ಫ್ಲೈಟ್ ಟೇಕ್ ಆಫ್ ಆಗುವ ಮೊದಲು ಮುಂಬೈ ವಿಮಾನ ನಿಲ್ದಾಣದಲ್ಲಿ ಇಂಜಿನ್ ಕವರ್ ಅನ್ನು ಬೀಳಿಸಿತು;

Wed Feb 9 , 2022
ಇಂಜಿನ್ ಕವರ್ ಇಲ್ಲದೆ ಮುಂಬೈನಿಂದ ಅಲಯನ್ಸ್ ಏರ್ ಫ್ಲೈಟ್ ಟೇಕ್ ಆಫ್ ಆದ ಘಟನೆಯ ಬಗ್ಗೆ ತನಿಖೆಯನ್ನು ಪ್ರಾರಂಭಿಸಲಾಗಿದೆ ಅಲಯನ್ಸ್ ಏರ್ ವಿಮಾನವು ಬುಧವಾರ ಬೆಳಗ್ಗೆ ಮುಂಬೈ ವಿಮಾನ ನಿಲ್ದಾಣದಿಂದ ಭುಜ್‌ಗೆ ಹೊರಟಿತು, ಆದರೆ ಎಂಜಿನ್ ಕೌಲ್ (ಕವರ್) ಇಲ್ಲದೆ. ವಿವರಗಳ ಪ್ರಕಾರ, ವಿಮಾನವು ಹೊರಡಲು ತಯಾರಿ ನಡೆಸುತ್ತಿದ್ದಾಗ ವಿಮಾನ ನಿಲ್ದಾಣದ ರನ್‌ವೇ ಮೇಲೆ ಹಸು ಬಿದ್ದಿದೆ. ಭುಜ್ ವಿಮಾನ ನಿಲ್ದಾಣದಲ್ಲಿ ವಿಮಾನವನ್ನು ಸುರಕ್ಷಿತವಾಗಿ ಇಳಿಸಲಾಗಿದ್ದರೂ, ಏರ್‌ಲೈನ್ಸ್ ವಿರುದ್ಧ ಘಟನೆಯ […]

Advertisement

Wordpress Social Share Plugin powered by Ultimatelysocial