ಅಧಿಕಾರಿಗಳಿಂದ ಸರ್ಕಾರಕ್ಕೆ 500 ಕೋಟಿ ನಷ್ಟ

 

 

 

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯ ಕಂದಾಯ ವಿಭಾಗದ ಅಧಿಕಾರಿಗಳು ಹಲವು ವರ್ಷಗಳಿಂದ ಬಹುರಾಷ್ಟ್ರೀಯ ಕಂಪನಿಗಳು, ಮಾಲ್‌ಗಳು, ಅಪಾರ್ಟ್‌ಮೆಂಟ್‌ ಗಳಿಂದ ತೆರಿಗೆ ಸಂಗ್ರಹಿಸದೆ, ಕಾಮಗಾರಿ ನಡೆಸದೆ ಬಿಲ್ಲುಗಳನ್ನು ಮಂಜೂರು ಸೇರಿ ಹಲವು ಮಾರ್ಗಗಳ ಮೂಲಕ ಸರ್ಕಾರಕ್ಕೆ ಬರೋಬರಿ 500 ಕೋಟಿ ರೂ.ನಷ್ಟ ಉಂಟು ಮಾಡಿರುವುದು ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ಅಧಿಕಾರಿಗಳ ದಾಳಿಯಲ್ಲಿ ಬಯಲಾಗಿದೆ.

ಅಲ್ಲದೆ, ನಕಲಿ ದಾಖಲೆಗಳ ಮೂಲಕ ಅಭಿವೃದ್ಧಿ ಹಕ್ಕು ಪ್ರಮಾಣ ಪತ್ರಗಳ(ಟಿಡಿಆರ್‌)ನ್ನು ವಿತರಣೆ ಮಾಡಿರುವುದು ಬೆಳಕಿಗೆ ಬಂದಿದೆ.

ಬಿಬಿಎಂಪಿಯ ಕಂದಾಯ ಕಚೇರಿಗಳು ಹಾಗೂಇತರೆ ಕಚೇರಿಗಳಲ್ಲಿ ಬೃಹತ್‌ ಭ್ರಷ್ಟಾಚಾರ ನಡೆಯುತ್ತಿರುವ ದೂರುಗಳ ಮೇರೆಗೆ ಎಸಿಬಿಯ 250 ಮಂದಿ ಅಧಿಕಾರಿಗಳ ತಂಡ ಬಿಬಿಎಂಪಿ ಕೇಂದ್ರ ಕಚೇರಿ ಸೇರಿ ನಗರದ ವಿವಿಧ ವಲಯ ಕಚೇರಿಗಳ 27 ಕಚೇರಿಗಳಿಗೆ ಸಂಬಂಧಿಸಿ 11 ಕಡೆಗಳಲ್ಲಿ 250ಕ್ಕೂ ಅಧಿಕ ಮಂದಿ ಅಧಿಕಾರಿಗಳ ತಂಡ ಶುಕ್ರವಾರದಿಂದ ಸೋಮವಾರದವರೆಗೆ ನಿರಂತರ ದಾಳಿ ನಡೆಸಿತ್ತು.

ಕಂದಾಯ ವಿಭಾಗ, ಎಂಜಿನಿಯರಿಂಗ್‌ ವಿಭಾಗ,ಟಿಡಿಆರ್‌ ವಿಭಾಗ ಸೇರಿ ಹಲವು ವಿಭಾಗಳಲ್ಲಿ ದಾಖಲೆಗಳ ಶೋಧ ನಡೆಸಲಾಗಿದ್ದು, ಈ ವೇಳೆ ಸಾಲು-ಸಾಲುಅಕ್ರಮಗಳು ನಡೆದಿರುವುದು ಪತ್ತೆಯಾಗಿದೆ. ಜತೆಗೆ ಹಲವಾರು ವರ್ಷಗಳಿಂದ ಬಿಬಿಎಂಪಿ ಅಧಿಕಾರಿಗಳುನಿರ್ದಿಷ್ಟ ಕಂಪನಿಗಳು, ಮಾಲ್‌ಗಳು, ಅಪಾರ್ಟ್‌ಮೆಂಟ್‌ಗಳಿಂದ ಕಂದಾಯ ಸಂಗ್ರಹಿಸದೆ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿದ್ದಾರೆ.

ಕಂದಾಯ ವಿಭಾಗ: ನಗರದಲ್ಲಿರುವ ವಿವಿಧ ಕಂದಾಯ ವಿಭಾಗದ ಕಚೇರಿಗಳ ಮೇಲೆ ದಾಳಿ ನಡೆಸಿದಾಗಹಲವಾರು ವರ್ಷಗಳಿಂದ ಬಹು ರಾಷ್ಟ್ರೀಯ ಕಂಪನಿ ಗಳು, ಮಾಲ್‌ಗ‌ಳು, ಅಪಾರ್ಟ್‌ಮೆಂಟ್‌ಗಳಿಂದ ತೆರಿಗೆ ಸಂಹ್ರಹಿಸದೆ ಸರ್ಕಾರದ ಬೊಕ್ಕಸಕ್ಕೆ 500 ಕೋಟಿ ರೂ. ನಷ್ಟ ಉಂಟು ಮಾಡಿದ್ದಾರೆ. ಸರ್ಕಾರದ ಮಾನದಂಡಗಳನ್ನು ಪಾಲಿಸದೆ ಕಡಿಮೆ ತೆರಿಗೆ ಸಂಗ್ರಹಿಸಿರುವುದು ಪತ್ತೆಯಾಗಿದೆ. ಅಲ್ಲದೆ, ಬಹು ರಾಷ್ಟ್ರೀಯ ಕಂಪನಿಗಳು,ಮಾಲ್‌, ಅಪಾರ್ಟ್‌ ಮೆಂಟ್‌ ಕಾನೂನು ಬಾಹಿರವಾಗಿ ಜಾಗ ಸ್ವಾಧೀನಪಡಿಸಿಕೊಳ್ಳಲು ಪ್ರಮಾಣಪತ್ರ ನೀಡಿ ಸರ್ಕಾರಕ್ಕೆ ನೂರಾರು ಕೋಟಿ ನಷ್ಟ ಉಂಟು ಮಾಡಿದ್ದಾರೆ.

ಎಂಜಿನಿಯರಿಂಗ್‌ ವಿಭಾಗ: ಈ ವಿಭಾಗಲ್ಲಿ ಒಂದೇ ಕಾಮಗಾರಿಗೆ ಹಲವಾರು ಬಿಲ್ಲುಗಳನ್ನು ಮಂಜೂರಾತಿಆಗಿರುವುದು ಕಂಡು ಬಂದಿದೆ. ಕೆಲವು ಕಡೆಗಳಲ್ಲಿ ಕಾಮಗಾರಿಗಳು ನಡೆಸದೆಯೇ ನಡೆದಿರುವುದಾಗಿ ಬಿಂಬಿಸಿ ಬಿಲ್ಲುಗಳನ್ನು ಮಂಜೂರು ಮಾಡಿಕೊಂಡಿದ್ದಾರೆ. ಸರ್ಕಾರ ನಿಗದಿಪಡಿಸಿದ ಟೆಂಡರ್‌ ಮಾನದಂಡ ಅನುಸರಿಸದೇಕಳಪೆ ಕಾಮಗಾರಿ ನಿರ್ವಹಿಸಿ ಹೆಚ್ಚಿನ ಮೊತ್ತದ ಬಿಲ್ಲುಗಳನ್ನು ಮಂಜೂರಾತಿ ಮಾಡಿಕೊಂಡಿರುವುದು ಪರಿಶೀಲನೆಯಲ್ಲಿ ಬೆಳಕಿಗೆ ಬಂದಿದೆ ಎಂದು ಎಸಿಬಿ ತಿಳಿಸಿದೆ.

ಟಿಡಿಆರ್‌ ವಿಭಾಗ: ಇನ್ನು ಟಿಡಿಆರ್‌ ಹಗರಣ ಮತ್ತೆ ಬೆಳಕಿಗೆ ಬಂದಿದ್ದು, ಈ ವಿಭಾಗದಲ್ಲಿ ಒಂದು ಮಹಡಿ ಇರುವ ಕಟ್ಟಡವನ್ನು 2 ಅಥವಾ 3 ಮಹಡಿಗಳೆಂದು ನಮೂದಿಸಿ ಹೆಚ್ಚು ಮೌಲ್ಯವನ್ನು ನಿಗದಿಪಡಿಸಿಅಕ್ರಮವಾಗಿ ಹೆಚ್ಚು ವಿಸ್ತೀರ್ಣದ ಡಿಆರ್‌ಸಿಗಳನ್ನು ನೀಡಿದ್ದಾರೆ. ಬಿಬಿಎಂಪಿ ಅಧಿಕಾರಿಗಳು, ಬಹುರಾಷ್ಟ್ರೀಯ ಕಂಪನಿಗಳೊಂದಿಗೆ, ಮದ್ಯವರ್ತಿಗಳೊಂದಿಗೆ,ಭೂಮಾಲೀಕರೊಂದಿಗೆ ಸೇರಿಕೊಂಡು ಕಾನೂನು ಬಾಹಿರವಾಗಿ ನಿಯಮಗಳನ್ನು ಉಲ್ಲಂಘಿಸಿ ಅಳತೆಗಿಂತಲೂ ಹೆಚ್ಚಿನ ಅಳತೆಗೆ ಸಂಬಂಧಿಸಿದಂತೆ ನಕಲಿ ದಾಖಲೆ ಸೃಷ್ಟಿಸಿ ಹೆಚ್ಚು ಅಳತೆ ಹೊಂದಿರುವ ಟಿಡಿಆರ್‌ ನೀಡಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಚಿಕ್ಕಮ್ಮನನ್ನೇ ಪ್ರೀತಿಸಿ ಮದುವೆಯಾದ ಯುವಕ..!

Tue Mar 1 , 2022
ಸಂಬಂಧಗಳು ತುಂಬಾ ವಿಚಿತ್ರ. ಇನ್ನು ಪ್ರೀತಿಯ (Love) ವಿಚಾರ ಇನ್ನೂ ವಿಚಿತ್ರ. ಪ್ರೀತಿಗೆ ಕಣ್ಣಿಲ್ಲ ಅಂತೆಲ್ಲ ಹೇಳೋದು ಸುಮ್ಮನೆ ಅಲ್ಲ. ಪ್ರೀತಿಗೆ ಸಂಬಂಧಗಳೂ ಲೆಕ್ಕಕ್ಕಿಲ್ಲ. ಒಟ್ಟಾರೆಯಾಗಿ ಲವ್ ಆಗಿಬಿಡುತ್ತೆ ಅಷ್ಟೆ. ಅಪ್ಪ ಮಗಳನ್ನು ಮೋಹಿಸುವುದು, ಅಣ್ಣ-ತಂಗಿಯನ್ನು ಮೋಹಿಸುವುದು ಹೀಗೆ ಇಂಥಹ ಘಟನೆಗಳು ನಡೆಯುತ್ತಲೇ ಇರುತ್ತವೆ. ಪ್ರೀತಿಗೆ ಯಾವುದೇ ಕಂಡೀಷನ್ಸ್ ಇಲ್ಲ. ಸುಮ್ಮನೆ ಹಾಗೆಯೇ ಪ್ರೀತಿ ಆಗಿಬಿಡುತ್ತದೆ. ಮತ್ತೆ ಕಾಣಿಸುವ ಸರಿ ತಪ್ಪುಗಳೆಲ್ಲವೂ ನಂತರ ನಗಣ್ಯ. ಇತ್ತೀಚೆಗ ಝಾರ್ಕಂಡ್​ನಲ್ಲಿ ಇಂಥದ್ದೇ ಪ್ರೇಮ […]

Advertisement

Wordpress Social Share Plugin powered by Ultimatelysocial