ಸೌಂದರ್ಯಕ್ಕೆ ರಿಂಗಾಟ… ಕೆಲವು ಉಪಕರಣಗಳ ಮಾಹಿತಿ ಇಲ್ಲಿದೆ

ಸುಂದರವಾಗಿ ಕಾಣಬೇಕೆಂದು ನಾವು ವಿವಿಧ ಸಾಧನಗಳನ್ನು, ಸೌಂದರ್ಯವರ್ಧಕಗಳನ್ನು ಬಳಸುತ್ತಿದ್ದೇವೆ. ನಿತ್ಯವೂ ಹಲವು ಉಪಕರಣಗಳು ಮಾರುಕಟ್ಟೆಗೆ ಬರುತ್ತಲೇ ಇವೆ. ಈಚೆಗೆ ಬಂದಿರುವಂಥ ಕೆಲವು ಉಪಕರಣಗಳ ಮಾಹಿತಿ ಇಲ್ಲಿದೆ.

*ಚರ್ಮದ ಹೊಳಪಿಗೆ ರೋಲರ್

ಕಾಡಿಗೆ, ಐಲೈನರ್‌ಗಳಿಂದ ಕಣ್ಣುಗಳಿಗೆ ಹೊಳಪು ನೀಡಬಹುದು; ಲಿಪ್‌ಸ್ಟಿಕ್‌ಗಳಿಂದ ಅಧರಗಳ ಅಂದ ಹೆಚ್ಚಿಸಬಹುದು.

ಆದರೆ ಲೇಪನಗಳಿಂದ ಚರ್ಮಕ್ಕೆ ಸದಾ ಹೊಳಪು ನೀಡಲು ಸಾಧ್ಯವಿಲ್ಲ; ಆರೋಗ್ಯ ಚೆನ್ನಾಗಿದ್ದರಷ್ಟೇ ಚರ್ಮ ಹೊಳೆಯುತ್ತದೆ. ಇದಕ್ಕಾಗಿ ವಿಶೇಷ ಕಾಳಜಿ ಅಗತ್ಯ. ಹೀಗೆ ವಿಶೇಷ ಶ್ರದ್ಧೆ ವಹಿಸಿ ಆರೋಗ್ಯಕರ ಆಕರ್ಷಕ ಚರ್ಮ ರೂಪಿಸಿಕೊಳ್ಳಲು ನೆರವಾಗುತ್ತದೆ ಸ್ಕಿನ್‌ಟೋನ್ ಲಿಫ್ಟ್‌ ಜೆರ್ಮೇನಿಯಂ ಕಾಂಟೌರಿಂಗ್ ಫೇಶಿಯಲ್ ರೌಲರ್. ಫಾರ್ವರ್ಡ್ ಥಿಂಕಿಂಗ್ ಟೆಕ್ನಾಲಜಿ ಅಳವಡಿಸಿರುವ ಈ ಸಾಧನವು ವಯಸ್ಸಿನೊಂದಿಗೆ ಬರುವ ಸುಕ್ಕುಗಟ್ಟುವ ಚರ್ಮವನ್ನು ಮರೆಮಾಡುತ್ತದೆಯಂತೆ. ಈ ಸಾಧನದ ಮೇಲ್ಭಾಗದಲ್ಲಿರುವ ಆಕ್ಯೂಪ್ರೆಷರ್ ಪಾಡ್ಸ್ ದೇಹದ ಕಣಗಳನ್ನು ಉತ್ತೇಜಿಸಲು ಕಡಿಮೆ ಪ್ರಮಾಣದ ಒತ್ತಡವನ್ನು ಸೃಷ್ಟಿಸುತ್ತದೆ. ಇದರಿಂದ ಚರ್ಮದ ಕಣಗಳು ಬಿಗಿಯಾಗಿ ಚರ್ಮಕ್ಕೆ ಹೊಳಪು ಸಿಗುತ್ತದೆ. 30ರಿಂದ 60 ಸೆಕಂಡುಗಳಷ್ಟು ಕ್ರಮತಪ್ಪದಂತೆ, ಕೆನ್ನೆ-ಹಣೆಗಳನ್ನು ಸೇರಿದಂತೆ ಶರೀರದ ವಿವಿಧ ಭಾಗಗಳಲ್ಲಿ ಉಜ್ಜಿಕೊಳ್ಳಬೇಕು. ನಂತರ ಉಗುರು ಬೆಚ್ಚಗಿನ ನೀರಿನಿಂದ ಆ ಭಾಗಗಳನ್ನು ತೊಳೆದುಕೊಂಡರೆ ಚರ್ಮದ ಅಂದ ಹೆಚ್ಚುತ್ತದೆ ಎಂದು ಸಂಸ್ಥೆ ಹೇಳಿಕೊಂಡಿದೆ. ‌

*ಸಪೂರ ದೇಹಕ್ಕೆ ರಿಂಗಾಟ

ದೇಹವನ್ನು ಸಪೂರವಾಗಿಸಿಕೊಂಡು ಅಂದ ಹೆಚ್ಚಿಸಿಕೊಳ್ಳಬೇಕೆಂಬ ಬಯಸುವವರು ಹಲವರು. ಹೂಲಾ ಹೂಪ್ ಆಟವು ಸಪೂರ ದೇಹಕ್ಕೆ ಸಹಕಾರಿಯಾಗುತ್ತದೆ ಎಂದು ಹೇಳುತ್ತಿದ್ದಾರೆ ತಜ್ಞರು. ಹೂಲಾ ಹೂಪ್ ಹೆಸರಿನ ವೃತ್ತಾಕಾರದ ರಿಂಗನ್ನು ಸೊಂಟದ ಭಾಗದಲ್ಲಿರಿಸಿಕೊಂಡು ದೇಹವನ್ನು ಅಲುಗಾಡಿಸದೆ ಸೊಂಟ ಮಾತ್ರ ಚಲಿಸುತ್ತ ರಿಂಗ್ ಕೆಳಗೆ ಬೀಳದಂತೆ ಆಡುವಂಥ ಆಟ ಇದು. ಇದು ಸ್ವಲ್ಪ ಕಷ್ಟ. ಈ ಕಷ್ಟವನ್ನು ತಪ್ಪಿಸಲೆಂದೇ ತಜ್ಞರು ಈ ರಿಂಗ್‌ಗೆ ತಂತ್ರಜ್ಞಾನದ ಸ್ಪರ್ಶವನ್ನು ನೀಡಿದ್ದಾರೆ. ಸೊಂಟ ತಿರುಗಿಸುವಾಗ ರಿಂಗ್ ಕೆಳಗೆ ಬೀಳದಂತೆ ವೈಟೆಡ್ ಹೂಲಾ ಸ್ಮಾರ್ಟ್ ಹೂಪ್ ಎಂಬ ಡಿವೈಸ್‌ ಅನ್ನು ಇದಕ್ಕೆ ಜೋಡಿಸಿದ್ದಾರೆ. ಈ ಸ್ಮಾರ್ಟ್ ರಿಂಗ್ 47.2 ಇಂಚುಗಳಷ್ಟು ವ್ಯಾಸವಿರುತ್ತದೆ. ಇದರಲ್ಲಿ ಒಟ್ಟು 16 ಮಸಾಜ್ ಹೆಡ್ಸ್‌ಗಳನ್ನು ಜೋಡಿಸಿಕೊಳ್ಳಬಹುದು. ಪ್ರತಿ ಹೆಡ್ 2.95 ಇಂಚುಗಳಷ್ಟು ಗಾತ್ರವಿರುತ್ತದೆ. ದೇಹಕ್ಕೆ ತಕ್ಕಂತೆ ಹಾಗೂ ಸೊಂಟದ ಗಾತ್ರಕ್ಕೆ ತಕ್ಕಂತೆ ಇವನ್ನು ಬಳಸಿ ರಿಂಗ್ ಜೋಡಿಸಿಕೊಳ್ಳಬಹುದು. ಅಂದರೆ ಎಷ್ಟು ಮಸಾಜ್ ಹೆಡ್ಸ್‌ಗಳನ್ನು ಜೋಡಿಸುತ್ತೇವೆಯೊ ಅಷ್ಟು ಗಾತ್ರದ ರಿಂಗ್ ತಯಾರಾಗುತ್ತದೆ. ಆದರೆ ಈ ರಿಂಗ್‌ಗೆ ನೀಳವಾದ ಪೈಪ್‌ಗೆ ಜೋಡಿಸಿರುವ ವೈಟ್ ಬಾಲ್ ಒಂದನ್ನು ಹೆಚ್ಚುವರಿಯಾಗಿ ಜೋಡಿಸಿಕೊಳ್ಳಬೇಕು. ಇದನ್ನು ಸೊಂಟಕ್ಕೆ ಅಳವಡಿಸಿಕೊಂಡು ತಿರುಗಿಸಿದಷ್ಟು ಹೊತ್ತು ವೈಟ್ ಬಾಲ್ 360 ಡಿಗ್ರಿ ತಿರುಗುತ್ತಲೇ ಇರುತ್ತದೆ. ಹೀಗೆ ತಿರುಗುವಾಗ ಪ್ರತಿ ಮಸಾಜ್ ಹೆಡ್‌ ಅನ್ನು ಒತ್ತುತ್ತಾ ಹೋಗುತ್ತದೆ. ಇದು ಸೊಂಟದ ಸುತ್ತಲೂ ಇರುವಂಥ ಕೊಬ್ಬನ್ನು ಕರಗಿಸಲು ನೆರವಾಗುತ್ತದೆ.

*ಸುಂದರ ವದನಕ್ಕೆ

ಬ್ಲ್ಯಾಕ್ ಹೆಡ್ಸ್, ವೈಟ್ ಹೆಡ್ಸ್, ಮಚ್ಚೆಗಳು, ಮೊಡವೆಗಳು, ಮುಖ ಸುಕ್ಕುಗಟ್ಟುವುದು – ಹೀಗೆ ಹಲವು ಸಮಸ್ಯೆಗಳಿಗೆ ಪೋರ್ ವಾಕ್ಯೂಮ್ (ಬ್ಲಾ ಹೆಡ್ ರಿಮೂವರ್) ಉಪಕರಣ ಉತ್ತಮ ಪರಿಹಾರ. ವೈದ್ಯಕೀಯ ಪರೀಕ್ಷೆಗಳಲ್ಲಿ ಈ ಉಪಕರಣದ ಸಾಮರ್ಥ್ಯ ಸಾಬೀತಾಗಿದೆ. ಇದು ಚರ್ಮವನ್ನು ಶುದ್ಧಿ ಮಾಡುವುದರ ಜೊತೆಗೆ ಅದನ್ನು ಸುಕ್ಕುಗಟ್ಟುವುದರಿಂದಲೂ ತಪ್ಪಿಸಿ, ಮಚ್ಚೆಗಳು ಮೊಡವೆಗಳನ್ನು ಅಳಿಸಿ, ತಾರುಣ್ಯಮಯವಾಗಿಡುತ್ತದೆಯಂತೆ. ಚಾರ್ಜಿಂಗ್ ಮಾಡಿಕೊಂಡು ಸ್ಮಾರ್ಟ್‌ಫೋನ್‌ಗೆ ಜೋಡಿಸಿಕೊಂಡು ಬಳಸಬಹುದಾದ ಈ ಉಪಕರಣದಿಂದ ಉತ್ತಮ ಗುಣಮಟ್ಟದ ಫೇಶಿಯಲ್ ಮಾಡಿಕೊಳ್ಳಬಹುದು. ಇದರ ಮುಂಭಾಗದಲ್ಲಿ ಮೂರು ಲಕ್ಷ ಪಿಕ್ಸೆಲ್ ಹಾಗೂ 5.5 ಮೆಗಾ ಪಿಕ್ಸೆಲ್ ಗುಣಮಟ್ಟದ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಇದು 20 ಪಟ್ಟು ಮೆಗ್ನಿಫೇಕಷನ್ ಡಿಸ್‌ಪ್ಲೇ ಹೈ ಡೆಫಿನೇಷನ್ ಲೆನ್ಸ್ ನೆರವಿನಿಂದ ಸ್ಕಿನ್ ಕ್ಲೀನಿಂಗ್ ಪರಿಶೀಲಿಸುತ್ತಾ ಸ್ಮಾರ್ಟ್‌ಫೋನ್‌ನಲ್ಲಿ ತೋರಿಸುತ್ತದೆ. ಇದರಲ್ಲಿ ಮೂರು ಹಂತಗಳಿದ್ದು, ಮೊದಲನೆಯದು ಸೆನ್ಸೆಟಿವ್ ಸ್ಕಿನ್, ಡ್ರೈ ಸ್ಕಿನ್‌ಗೆ ನೆರವಾಗುತ್ತದೆ. ಎರಡನೇ ಲೆವೆಲ್ ನ್ಯೂಟ್ರಲ್ ಸ್ಕಿನ್‌ಗೆ ಉಪಯೋಗವಾಗುತ್ತದೆ. ಮೂರನೆಯದ್ದು ಆಯಿಲ್ ಸ್ಕಿನ್‌ಗೆ ಉಪಯೋಗವಾಗುತ್ತದೆ. ಇದನ್ನು ಬಳಸುವ ಮುನ್ನ ಬಿಸಿ ನೀರಿನಲ್ಲಿ ಒದ್ದೆ ಮಾಡಿದ ಟವೆಲ್‌ನಿಂದ ಚರ್ಮವನ್ನು ಉಜ್ಜಿಕೊಳ್ಳಬೇಕು. ಮೂರು ಸೆಕೆಂಡುಗಳಿಗಿಂತ ಹೆಚ್ಚು ಹೊತ್ತು ಒಂದೇ ಕಡೆ ಇದನ್ನು ಇಟ್ಟುಕೊಳ್ಳಕೂಡದು.

 

Please follow and like us:

Leave a Reply

Your email address will not be published. Required fields are marked *

Next Post

ರಷ್ಯಾ, ಉಕ್ರೇನ್ ಧ್ವಜಗಳನ್ನು ಅಲಂಕರಿಸಿದ, ದಂಪತಿಗಳು;

Fri Feb 25 , 2022
ರಷ್ಯಾ ಮತ್ತು ಉಕ್ರೇನಿಯನ್ ಧ್ವಜಗಳಲ್ಲಿ ಆಲಿಂಗಿಸಿಕೊಂಡ ದಂಪತಿಗಳ ಗಮನಾರ್ಹ ಛಾಯಾಚಿತ್ರವು ಉಭಯ ದೇಶಗಳ ನಡುವೆ ಹಿಂಸಾತ್ಮಕ ಯುದ್ಧದ ಸಮಯದಲ್ಲಿ ಭರವಸೆಯ ಚಿತ್ರವನ್ನು ಚಿತ್ರಿಸುತ್ತದೆ. ಈ ಫೋಟೋವನ್ನು ಕಾಂಗ್ರೆಸ್ ಸಂಸದ ಶಶಿ ತರೂರ್ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. “ಕಟುವಾದ: ಉಕ್ರೇನಿಯನ್ ಧ್ವಜವನ್ನು ಧರಿಸಿರುವ ವ್ಯಕ್ತಿಯೊಬ್ಬರು ರಷ್ಯಾದ ಧ್ವಜವನ್ನು ಧರಿಸಿರುವ ಮಹಿಳೆಯನ್ನು ಆಲಿಂಗಿಸಿಕೊಂಡಿದ್ದಾರೆ. ಯುದ್ಧ ಮತ್ತು ಸಂಘರ್ಷದ ಮೇಲೆ ಪ್ರೀತಿ, ಶಾಂತಿ ಮತ್ತು ಸಹಬಾಳ್ವೆಯ ವಿಜಯವನ್ನು ನಾವು ಆಶಿಸೋಣ” ಎಂದು ತರೂರ್ ಫೋಟೋಗೆ ಶೀರ್ಷಿಕೆ […]

Advertisement

Wordpress Social Share Plugin powered by Ultimatelysocial