ಚೀನಾದ ಆಕ್ರಮಣಶೀಲತೆ: ಭಾರತದ ಪರ ಅಮೆರಿಕ ನಿಲುವು

ವಾಷಿಂಗ್ಟನ್,ಫೆ.4- ಚೀನಾದ ಆಕ್ರಮಣಶೀಲತೆಯ ವಿರುದ್ಧ ಭಾರತದ ಜೊತೆ ನಿಲ್ಲುವುದಾಗಿ ಅಮೆರಿಕ ಸ್ಪಷ್ಟಪಡಿಸಿದೆ. 2020ರಲ್ಲಿ ಗಾಲ್ವನ್ ಕಣಿವೆಯಲ್ಲಿ ಭಾರತೀಯ ಯೋಧರ ವಿರುದ್ಧ ದಾಳಿ ನಡೆಸಿದ ಚೀನೀ ಸೇನೆಯ ಭಾಗವಾಗಿದ್ದ ಓರ್ವ ಪಿಎಲ್‍ಎ( ಪೀ ಪಲ್ಸ್ ಲಿಬರೇಷನ್ ಆರ್ಮಿ)ಯ ಸೈನಿಕನೊಬ್ಬನನ್ನು ಬೀಜಿಂಗ್ ಚಳಿಗಾಲದ ಒಲಿಂಪಿಕ್ಸ್‍ನ ಜ್ಯೋತಿಧಾರಕನನ್ನಾಗಿ ಆಯ್ಕೆ ಮಾಡಿರುವುದನ್ನು ಅಮೆರಿಕದ ಅನೇಕ ನೀತಿ ನಿರೂಪಕರು ಖಂಡಿಸಿದ್ದಾರೆ.ಭಾರತ-ಚೀನಾ ಗಡಿವಿವಾದಕ್ಕೆ ಸಂಬಂಧಿಸಿದಂತೆ, ನಾವು ನೇರ ಮಾತುಕತೆ ಮತ್ತು ವಿವಾದದ ಶಾಂತಿಯುತ ಇತ್ಯರ್ಥಕ್ಕೆ ಬೆಂಬಲ ಮುಂದುವರೆಸುತ್ತೇವೆ ಎಂದು ವಿದೇಶಾಂಗ ಇಲಾಕೆ ವಕ್ತಾರ ನೆಡ್‍ಪ್ರೈಸ್ ನಿನ್ನೆ ತಮ್ಮ ದೈನಿಕ ಸುದ್ದಿಗೋಷ್ಠಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.ತನ್ನ ನೆರೆಹೊರೆಯನ್ನು ಬೆದರಿಸುವ ಚೀನಾದ ಪ್ರವೃತ್ತಿಯ ವಿರುದ್ಧ ನಾವು ಈ ಮೊದಲೇ ಧ್ವನಿ ಎತ್ತಿದ್ದೇವೆ. ಯಾವಾಗಲೂ ನಾವು ಮಾಡುವಂತೆ ನಮ್ಮ ಸ್ನೇಹಿತರ ಪರ ಇರುತ್ತೇವೆ. ನಾವು ನಮ್ಮ ಸಮೃದ್ಧಿ, ಭದ್ರತೆ ಮತ್ತು ಮೌಲ್ಯಗಳನ್ನು ಇಂಡೋಫೆಸಿಫಿಕ್‍ನಲ್ಲಿ ಹಂಚಿಕೊಳ್ಳಲು ಸಹಭಾಗಿಗಳು ಮತ್ತು ಮಿತ್ರರೊಂದಿಗೆ ನಿಲ್ಲುತ್ತೇವೆ ಎಂದು ಪ್ರೈಸ್ ಪ್ರತಿಪಾದಿಸಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬೆಂಗಳೂರು:ನೀಟ್ ಪಿಜಿ ಪರೀಕ್ಷೆ ಮುಂದೂಡಿಕೆ

Fri Feb 4 , 2022
ಬೆಂಗಳೂರು,ಫೆ.4- ಮಾರ್ಚ್ 12ಕ್ಕೆ ನಿಗದಿಯಾಗಿದ್ದ ನೀಟ್ ಪಿಜಿ ಪರೀಕ್ಷೆಯನ್ನು ಕೇಂದ್ರ ಆರೋಗ್ಯ ಸಚಿವಾಲಯ 8 ವಾರಗಳ ಕಾಲ ಮುಂದೂಡಿದೆ.2022ರ ನೀಟ್ ಪರೀಕ್ಷೆ(ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ-ಸ್ನಾತಕೋತ್ತರ ಪದವಿ)ಯ ದಿನಾಂಕವನ್ನು ಮುಂದೂಡುವಂತೆ ಕೋರಿ ಎಂಬಿಬಿಎಸ್ ವಿದ್ಯಾರ್ಥಿಗಳು ಸುಪ್ರೀಂಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದು, ಇದರ ಬೆನ್ನಲ್ಲೇ ಸರ್ಕಾರ ಪರೀಕ್ಷೆಯನ್ನು ಮುಂದೂಡಿದೆ.ಇಂದು ಸುಪ್ರೀಂಕೋರ್ಟ್‍ನಲ್ಲಿ ವಿಚಾರಣೆ ನಡೆಯಲಿದೆ. ಕಡ್ಡಾಯ ಇಂಟರ್ನ್‍ಶಿಪ್ ಪೂರೈಸದ ಕಾರಣ ಪರೀಕ್ಷೆ ಮುಂದೂಡುವಂತೆ 6 ಎಂಬಿಬಿಎಸ್ ವಿದ್ಯಾರ್ಥಿಗಳು ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು.ಕೋವಿಡ್ ಕರ್ತವ್ಯದಿಂದಾಗಿ […]

Advertisement

Wordpress Social Share Plugin powered by Ultimatelysocial