ಕೃಷಿ ಸಹಕಾರ ಸಂಘಗಳ ಡಿಜಿಟಲೀಕರಣಕ್ಕೆ ಮುಂದಾದ ರಾಜ್ಯ ಸರ್ಕಾರ

ರೈತರ ಸಾಲ ವಿತರಣೆ ಹಾಗೂ ವಸೂಲಾತಿಯಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಪ್ರಾಥಮಿಕ ಕೃಷಿ ಸಹಕಾರ ಸಂಘಗಳನ್ನು ಡಿಜಿಟಲೀಕರಣ ಮಾಡಲು ಮುಂದಾಗಿದೆ. ಇದರ ಅನುಷ್ಠಾನ ಪ್ರಕ್ರಿಯೆಯು ಮಾರ್ಚ್​ ತಿಂಗಳಲ್ಲಿ ಆರಂಭಗೊಳ್ಳಲಿದೆ. ಈ ನಿಟ್ಟಿನಲ್ಲಿ ಕೆಲ ದಿನಗಳ ಹಿಂದಷ್ಟೇ ಸಿಎಂ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಸಭೆಯನ್ನೂ ನಡೆಸಲಾಗಿದೆ.ಈ ಸಂಬಂಧ ಅವಶ್ಯವಿರುವ ಸಾಫ್ಟ್​​ವೇರ್​ಗಳ ಅಭಿವೃದ್ಧಿಗಾಗಿ ಕಂಪನಿಯನ್ನು ಅಂತಿಮಗೊಳಿಸುವಲ್ಲಿ ಸರ್ಕಾರವು ಮಗ್ನವಾಗಿದೆ. ಅಲ್ಲದೇ ಈ ಡಿಜಿಟಲೀಕರಣ ಈ ವರ್ಷದ ಒಳಗಾಗಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಸಹಕಾರ ಸಚಿವ ಎಸ್​.ಟಿ. ಸೋಮಶೇಖರ್​ ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಇದಕ್ಕಾಗಿ ರಾಜ್ಯ ಸರ್ಕಾರವು 50 ಕೋಟಿವರೆಗೆ ವ್ಯಯಿಸಬೇಕಿದ್ದು ಉಳಿದ ಮೊತ್ತವನ್ನು ಕೇಂದ್ರ, ಅಪೆಕ್ಸ್​ ಹಾಗೂ ಡಿಸಿಸಿ ಬ್ಯಾಂಕ್​ಗಳಿಂದ ಪಡೆಯಲು ತೀರ್ಮಾನಿಸಲಾಗಿದೆ.ರಾಜ್ಯದಲ್ಲಿ ಸುಮಾರು 5,400 ಪಿಎಸಿಎಸ್‌ಗಳಿವೆ. ಇವುಗಳ ಡಿಜಿಟಲೀಕರಣವು ಕೇಂದ್ರ ಸರ್ಕಾರದ ಪ್ರಾಯೋಜಿತ ಯೋಜನೆಯಾಗಿದೆ. ಕೇಂದ್ರವು 60% ಪಾವತಿ ಮಾಡುತ್ತದೆ. ಉಳಿದ 40% ದಲ್ಲಿ ರಾಜ್ಯ ಸರ್ಕಾರವು 20% ಪಾವತಿ ಮಾಡುತ್ತದೆ, ಆದರೆ ಅಪೆಕ್ಸ್ ಬ್ಯಾಂಕ್ 10% ಮತ್ತು DCC ಬ್ಯಾಂಕ್​​ಗಳು ​​10% ಪಾವತಿಸುತ್ತವೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹೆಣ್ಣುಮಕ್ಕಳ ಮುಖ ನೋಡುವ ಆಸೆ ಯಾಕೆ?: ಹಿಜಾಬ್ ವಿವಾದದ ಕುರಿತು ಸಿ.ಎಂ‌.ಇಬ್ರಾಹಿಂ

Sat Feb 5 , 2022
ಬೆಂಗಳೂರು : ರಾಜ್ಯ ಸರ್ಕಾರ ವಿವಾದಗಳನ್ನು ಸೃಷ್ಟಿ ಮಾಡುವಲ್ಲಿ ಮುಂಚೂಣಿಯಲ್ಲಿದ್ದು, ಯಾವುದೇ ವಿವಾದದಲ್ಲಿ ಯಶಸ್ಸು ಸಿಗುತ್ತಿಲ್ಲ, ಹಾಗಾಗಿ ಈಗ ಹಿಜಾಬ್ ವಿವಾದ ಶುರು ಆಗಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ ಎಂ‌ ಇಬ್ರಾಹಿಂ ಹೇಳಿಕೆ ನೀಡಿದ್ದಾರೆ.ಹಿಜಾಬ್ ಬಹಳ ವರ್ಷದಿಂದ ನಡೆದುಕೊಂಡು ಬಂದಿದೆ. ಮೈಸೂರು ಮಹಾರಾಜ ಕಾಲದಿಂದಲೂ ಜಾರಿಯಲ್ಲಿದೆ.ಹೆಣ್ಣುಮಕ್ಕಳು ತೆರಳುವ ಚಕ್ಕಡಿ ಗಾಡಿಗೂ ಪರದೆ ಹಾಕಿರುವ ಇತಿಹಾಸ ಇದೆ. ಇದು ಕೋವಿಡ್ ಸಮಯದಲ್ಲಿ ಹಾಕಿಕೊಳ್ಳುವಂತೆ ಆಗಿದ್ದು, ನಾನು ಹಾಕೊಂಡಿದ್ದೇನೆ,ಸಿಎಂ ಬೊಮ್ಮಾಯಿ […]

Advertisement

Wordpress Social Share Plugin powered by Ultimatelysocial