ಶಿವಮೊಗ್ಗ: ಹಾವನ್ನು ತಪ್ಪಿಸಲು ಹೋಗಿ ನಾಲೆಗೆ ಉರುಳಿದ ಕಾರು; ಪತ್ನಿ ಸಾವು, ಪತಿ ಪಾರು

 

ಶಿವಮೊಗ್ಗ :ಗಾಜನೂರು ಬಳಿ ದಾರಿಗೆ ಅಡ್ಡಬಂದ ಹಾವನ್ನು ತಪ್ಪಿಸಲು ಹೋಗಿ ಕಾರೊಂದು ತುಂಗಾ ಎಡದಂಡೆ ನಾಲೆಗೆ ಉರುಳಿ ಮಹಿಳೆಯೊಬ್ಬರು ದಾರುಣವಾಗಿ ಸಾವನ್ನಪ್ಪಿದ್ದು, ಪತಿ ಬದುಕುಳಿದಿದ್ದಾರೆ.ಗುರುವಾರ ಬೆಳಗ್ಗಿನ ಜಾವ 3 ಗಂಟೆಗೆ ಘಟನೆ ನಡೆದಿದ್ದು, ನೀರಿನಲ್ಲಿ ಮುಳುಗಿ ಸುಷ್ಮಾ( 28) ಸಾವನ್ನಪ್ಪಿದ್ದು, ಪತಿ ಚೇತನ್ ಕುಮಾರ್ ಪಾರಾಗಿದ್ದಾರೆ.ಚೇತನ್ ತಾಯಿಯ ಆನಾರೋಗ್ಯದ ವಿಚಾರ ತಿಳಿದು ತಡರಾತ್ರಿಯೇ ದಂಪತಿಗಳು ಶಿವಮೊಗ್ಗದಿಂದ ತುಮಕೂರಿಗೆ ಹೊರಟಿದ್ದರು ಎಂದು ತಿಳಿದು ಬಂದಿದೆ.ನಾಲೆಯ ಪಕ್ಕದ ರಸ್ತೆಯಲ್ಲಿ ತೆರಳುವ ವೇಳೆಗೆ ಕಾರಿಗೆ ಹಾವು ಅಡ್ಡಬಂದಿದ್ದು , ಈ ವೇಳೆ ಏಕಾಏಕಿ ಬ್ರೇಕ್ ಹಾಕಿದ್ದರಿಂದ ಕಾರು ನಾಲೆಗೆ ಉರುಳಿದೆ ಎನ್ನಲಾಗಿದೆ.ಈ ವೇಳೆ ಚೇತನ್ ಕುಮಾರ್ ಸಹಾಯಕ್ಕಾಗಿ ಕೂಗಿ ಕೊಂಡಿದ್ದು, ಧ್ವನಿ ಕೇಳಿದರೂ, ಭಯದಿಂದ ಮನೆಯಿಂದ ಜನರು ಹೊರಗೆ ಬರದೇ ಶಬ್ಧದ ಬಗ್ಗೆ ಪೊಲೀಸರಿಗೆ ಕರೆ ಮಾಡಿ, ಮಾಹಿತಿ ನೀಡಿದ್ದಾರೆ.ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮತ್ತು ಸ್ಥಳೀಯರು ಚೇತನ್ ಅವರನ್ನು ರಕ್ಷಣೆ ಮಾಡಿದ್ದು, ಕಾರಿನೊಳಗೆ ನೀರು ತುಂಬಿದ್ದರಿಂದ ಸುಷ್ಮಾ ಅವರು ಮೃತಪಟ್ಟಿದ್ದಾರೆ.ಘಟನೆ ಸಂಬಂಧ ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಐದು ತಿಂಗಳ ನಂತರ ಉತ್ತರ ಕೊರಿಯದ ಸರ್ವಾಧಿಕಾರಿ ಕಿಮ್‌ ಪತ್ನಿ ಪ್ರತ್ಯಕ್ಷ!

Thu Feb 3 , 2022
ಸಿಯೋಲ್‌: ಉತ್ತರ ಕೊರಿಯದ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌ ಪತ್ನಿ ರೈ ಸೊಲ್‌ ಜು 5 ತಿಂಗಳ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಅಲ್ಲಿಗೆ ಅವರು ನಾಪತ್ತೆಯಾಗಿದ್ದಾರೆ ಅಥವಾ ಕೊಲೆಯಾಗಿದ್ದಾರೆ ಎಂಬ ಶಂಕೆಗಳಿಗೆ ತೆರೆಬಿದ್ದಿದೆ.ಚಂದ್ರಮಾನ ಹೊಸವರ್ಷದ ರಜಾದಿನದಂದು ನಡೆದ ಸಂಗೀತೋತ್ಸವದಲ್ಲಿ ಕಿಮ್‌, ಪತ್ನಿಯೊಂದಿಗೆ ಹಾಜರಾದರು.ಒಡನೆಯೇ ಜನರು ಜೋರಾಗಿ ಕೂಗಿ ಇಬ್ಬರನ್ನೂ ಸ್ವಾಗತಿಸಿದರು. ಜನರ ಈ ಖುಷಿಗೆ ಇನ್ನೊಂದು ಕಾರಣವೂ ಇದೆ.ಎಲ್ಲ ಸಂಕಷ್ಟಗಳ ನಡುವೆಯೂ ಕಿಮ್‌ ಉತ್ತರ ಕೊರಿಯವನ್ನು ಬಲಿಷ್ಠವಾಗಿ ಮುನ್ನಡೆಸುತ್ತಿದ್ದಾರೆ. ಅದರ […]

Advertisement

Wordpress Social Share Plugin powered by Ultimatelysocial