ಅಫ್ಗಾನಿಸ್ತಾನದ 2.4 ಕೋಟಿಗೂ ಹೆಚ್ಚು ಜನರಿಗೆ ಬೇಕು ಮಾನವೀಯ ನೆರವು: ವಿಶ್ವಸಂಸ್ಥೆ

ನ್ಯೂಯಾರ್ಕ್‌: ಅಫ್ಗಾನಿಸ್ತಾನದ 2.4 ಕೋಟಿಗೂ ಅಧಿಕ ಜನರಿಗೆ ಜೀವ ರಕ್ಷಣೆಯ ನೆರವಿನ ಅಗತ್ಯವಿದೆ ಎಂದು ವಿಶ್ವಸಂಸ್ಥೆಯ ವಕ್ತಾರ ಸ್ಟೆಫಾನೆ ಡುಜಾರಿಕ್ ತಿಳಿಸಿದ್ದಾರೆ.ವಿಶ್ವಸಂಸ್ಥೆಯ ಮಂಡಳಿಗಳು ಮತ್ತು ಅಂತರರಾಷ್ಟ್ರೀಯ ಸರ್ಕಾರೇತರ ಸಂಸ್ಥೆಗಳ ಎಂಟು ಹಿರಿಯ ತುರ್ತು ತಜ್ಞರ ಸಮಿತಿ ನಡೆಸಿದ ‘ಐದು ದಿನಗಳ ಕಾರ್ಯಾಚರಣೆ’ (Five day Mission) ಬಳಿಕ, ಅಫ್ಗಾನಿಸ್ತಾನಕ್ಕೆ ಮಾನವೀಯ ನೆರವು ನೀಡುವ ಅಗತ್ಯವಿದೆ ಎಂಬುದನ್ನು ತಿಳಿಸಿದ್ದಾರೆ ಎಂದು ಡುಜಾರಿಕ್ ಹೇಳಿದ್ದಾರೆ.ಅಫ್ಗಾನ್ ಜನಸಂಖ್ಯೆಯ ಶೇ 58 ರಷ್ಟು ಜನರಿಗೆ, ಅಂದರೆ 2.4 ಕೋಟಿಗೂ ಹೆಚ್ಚು ಜನರಿಗೆ ಜೀವನೋಪಾಯ ಕಲ್ಪಿಸುವ ಅಗತ್ಯವಿದೆ. ಜೀವ ರಕ್ಷಕ ನೆರವಿನ ಅಗತ್ಯವಿರುವ ಜನರ ಪ್ರಮಾಣ 2021ರಿಂದ ಈಚೆಗೆ ಶೇ 30 ರಷ್ಟು ಹೆಚ್ಚಾಗಿದೆ ಎಂಬುದು ಗಮನಿಸಬೇಕಾದ ವಿಚಾರ ಎಂದೂ ಅವರು ಉಲ್ಲೇಖಿಸಿದ್ದಾರೆ.ಇತ್ತೀಚೆಗೆ ಮೂರು ದಿನಗಳ ಭೇಟಿ ಸಲುವಾಗಿ ಅಫ್ಗಾನಿಸ್ತಾನಕ್ಕೆ ತೆರಳಿದ್ದ ಯುನಿಸೆಫ್‌ ಮುಖ್ಯಸ್ಥೆ ಕ್ಯಾಥೆರಿನಾ ರಸೆಲ್, ಅಫ್ಗಾನಿಸ್ತಾನದಲ್ಲಿನ ಮಕ್ಕಳು ರಾಜಧಾನಿ ಕಾಬೂಲ್‌ನ ರಸ್ತೆಗಳಲ್ಲಿ ಭಿಕ್ಷೆ ಬೇಡುತ್ತಿದ್ದಾರೆ. ದೇಶದಲ್ಲಿ ಅಪೌಷ್ಠಿಕತೆ ಗಂಭೀರವಾಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದರು.ತಾಲಿಬಾನ್‌ 2021ರ ಆಗಸ್ಟ್‌ನಲ್ಲಿ ಅಫ್ಗಾನಿಸ್ತಾನದ ಆಡಳಿತವನ್ನು ವಶಕ್ಕೆ ಪಡೆದುಕೊಂಡಿತ್ತು. ಇದು ಅಲ್ಲಿನ ಆರ್ಥಿಕ ಸಂಕಷ್ಟ ಮತ್ತು ಮಾನವೀಯ ಬಿಕ್ಕಟ್ಟನ್ನು ಮತ್ತಷ್ಟು ಹೆಚ್ಚಿಸಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರಷ್ಯಾದೊಂದಿಗೆ ಮಧ್ಯಸ್ಥಿಕೆ ವಹಿಸುವಂತೆ ಝೆಲೆನ್ಸ್ಕಿ ಇಸ್ರೇಲ್ಗೆ ಕೇಳುತ್ತಾರೆ ಎಂದು ಉಕ್ರೇನ್ ರಾಯಭಾರಿ ಹೇಳುತ್ತಾರೆ

Sat Feb 26 , 2022
  ರಷ್ಯಾದೊಂದಿಗಿನ ಸಂಘರ್ಷದಲ್ಲಿ ಮಧ್ಯಸ್ಥಿಕೆ ವಹಿಸುವಂತೆ ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಶುಕ್ರವಾರ ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್ ಅವರನ್ನು ಕೇಳಿದರು, ಇಸ್ರೇಲ್‌ಗೆ ಉಕ್ರೇನಿಯನ್ ರಾಯಭಾರಿ ಹೇಳಿದರು, ಇದು ಕೈವ್‌ನಿಂದ ಇದುವರೆಗೆ ಫಲಪ್ರದವಾಗದ ವಿನಂತಿಗಳ ಸರಣಿಯಲ್ಲಿ ಇತ್ತೀಚಿನದು ಎಂದು ಹೇಳಿದರು. “ನಾವು ಇಸ್ರೇಲ್‌ಗೆ ಸಂಭವನೀಯ ಮಧ್ಯವರ್ತಿ ಪಾತ್ರದ ಬಗ್ಗೆ ಕನಿಷ್ಠ ಕಳೆದ ವರ್ಷದಿಂದ ಇಸ್ರೇಲಿಗಳೊಂದಿಗೆ ಮಾತನಾಡುತ್ತಿದ್ದೇವೆ” ಎಂದು ರಾಯಭಾರಿ ಯೆವ್‌ಗೆನ್ ಕೊರ್ನಿಚುಕ್ ರಾಯಿಟರ್ಸ್‌ಗೆ ತಿಳಿಸಿದರು. “ಎರಡೂ ದೇಶಗಳೊಂದಿಗೆ ಅತ್ಯುತ್ತಮ ಸಂಬಂಧವನ್ನು […]

Advertisement

Wordpress Social Share Plugin powered by Ultimatelysocial