ಹುತಾತ್ಮ ಯೋಧನಿಗೆ ಅಂತಿಮ ನಮನ ಸಲ್ಲಿಸದ ಸಂಸದ: ಸಿ.ಎಂ.ಇಬ್ರಾಹಿಂ ಆಕ್ರೋಶ

ಮಡಿಕೇರೀ: ಕೊಡಗು ದೇಶದ ರಕ್ಷಣೆಗೆ ಮುಡಿಪಾಗಿಟ್ಟಿರುವ ನಾಡು ಈ ಜಿಲ್ಲೆಯಿಂದ ಬಹಳಷ್ಟು ಮಂದಿ ದೇಶಕ್ಕಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿರುವುದು ಹೆಮ್ಮೆಯ ವಿಷಯ ಎಂದು ಈ ಸಂದರ್ಭ ಸಿ.ಎಂ.ಇಬ್ರಾಹಿಂ ಹೇಳಿದರು.ಫೆಬ್ರವರಿ 25ರಂದು ಮೃತಪಟ್ಟ ಹುತಾತ್ಮ ಯೋಧ ಅಲ್ತಾಫ್ ಮನೆಗೆ ಸಂಸದ ಪ್ರತಾಪ್ ಸಿಂಹ ಭೇಟಿ ನೀಡದ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ ಇಬ್ರಾಹಿಂ , ಸಂಸದ ಪ್ರತಾಪ್ ಸಿಂಹ ಅವರು ಸಂಸದರಾಗಿರುವ ಬಗ್ಗೆಯೇ ಸಂಶಯವಿದ್ದು ಪತ್ರಿಕೆಯಿಂದ ಅನಿರೀಕ್ಷಿತವಾಗಿ ರಾಜಕೀಯಕ್ಕೆ ಬಂದ ಪರಿಣಾಮ ಈ ರೀತಿಯಾಗಿದೆ ದಯೆ ಧರ್ಮ ಮಾನವೀಯತೆಯ ಬಗ್ಗೆ ಅವರು ಮೊದಲು ತಿಳಿಯಲಿ ಎಂದರು.ಕುಂಕುಮ , ನಮಾಜ್ ಮಾಡಿದರೆ ಮಾತ್ರ ಧರ್ಮವಲ್ಲ ಅದರ ಬದಲಾಗಿ ದಯೆ ಅನುಕಂಪ ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದೇ ನಿಜವಾದ ಧರ್ಮ ಎಂಬುದು ಎಲ್ಲರಿಗೂ ತಿಳಿಯಲಿ ಎಂದೂ ಇಬ್ರಾಹಿಂ ಅಭಿಪ್ರಾಯಪಟ್ಟರು.ಶಿವಮೊಗ್ಗದಲ್ಲಿ ಗಲಭೆ ಸಂದರ್ಭ ಆಸ್ತಿ-ಪಾಸ್ತಿ ಹಾನಿ ಮಾಡಲು ಪ್ರೇರಣೆ ನೀಡಿದ ನಾಯಕರ ಆಸ್ತಿಗಳನ್ನು ಸರ್ಕಾರ ಕೂಡಲೇ ಜಪ್ತಿ ಮಾಡಲಿ ಎಂದು ಒತ್ತಾಯಿಸಿದ ಇಬ್ರಾಹಿಂ ಹಿಜಬ್ ವಿಚಾರದಲ್ಲಿ ನ್ಯಾಯಾಲಯದ ತೀರ್ಪಿಗೆ ನಾವೆಲ್ಲರೂ ಬದ್ಧರಾಗಿರುತ್ತೇವೆ ಎಂದು ಹೇಳಿದರು. ಜೆಡಿಎಸ್ ಜಿಲ್ಲಾಧ್ಯಕ್ಷ ಕೆಎಂಬಿ ಗಣೇಶ್ ಮುಖಂಡ ನಾಪಂಡ ಮುತ್ತಪ್ಪ ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ಕರೀಂ, ಮಡಿಕೇರಿಯ ಸುನಿಲ್, ಯೂಸುಫ್ ಕೊಂಡಂಗೇರಿ, ಮಡಿಕೇರಿ ನಗರಸಭೆ ಮುಸ್ತಪ್ಪ, ಸುಂಟಿಕೊಪ್ಪ ಜಮಾಹತ್ ಅಧ್ಯಕ್ಷ ಅಬ್ದುಲ್ಲಾ ಇದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಮಾರ್ಚ್ 4 ರಿಂದ 30ರವರೆಗೆ ʻವಿಧಾನಸೌಧʼದ ಸುತ್ತಮುತ್ತ 144 ಸೆಕ್ಷನ್ ಜಾರಿ. ಯಾಕೆ ಗೊತ್ತಾ?

Tue Mar 1 , 2022
    ಬೆಂಗಳೂರು : ಮುಂದಿನ ತಿಂಗಳು ಮಾರ್ಚ್ 4 ರಿಂದ 30 ರವರೆಗೆ ವಿಧಾನಸಭಾ ಅಧಿವೇಶನ ನಡೆಯಲಿದ್ದು, ಈ ವೇಳೆ ವಿಧಾನಸೌಧ(Vidhana Soudha) ಸುತ್ತಮುತ್ತಲಿನಲ್ಲಿ ನಿಷೇಧಾಜ್ಞೆ ಜಾರಿ ಆದೇಶ ಹೊರಡಿಸಿ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಆದೇಶ ಹೊರಡಿಸಿದ್ದಾರೆ‌. ಪ್ರತಿದಿನ ಬೆಳಗ್ಗೆ 6ರಿಂದ ಮಧ್ಯರಾತ್ರಿ 12ವರೆಗೆ ನಿಷೇಧಾಜ್ಞೆ ಜಾರಿಯಲ್ಲಿ ಇರಲಿದೆ. ಈ ಅವಧಿಯಲ್ಲಿ ಪ್ರತಿಭಟನೆ, ರ‍್ಯಾಲಿ, ಧರಣಿ, ಗುಂಪುಗೂಡುವುದು ನಿಷೇಧವಾಗಿರಲಿದೆ. ಕಾನೂನು ನಿಯಮ ಉಲ್ಲಂಘನೆ ಕಂಡು ಬಂದರೆ […]

Advertisement

Wordpress Social Share Plugin powered by Ultimatelysocial