ವಿಭಿನ್ನ ಕಥಾಹಂದರ ಹೊಂದಿರುವ “ಸ್ಪೂಕಿ ಕಾಲೇಜ್” ಚಿತ್ರದ ಚಿತ್ರೀಕರಣ ಮುಕ್ತಾಯ ಹಂತದಲ್ಲಿ.

“ರಂಗಿತರಂಗ”, ” ಅವನೇ ಶ್ರೀಮನ್ನಾರಾಯಣ” ಚಿತ್ರದಂತಹ ಉತ್ತಮ ಚಿತ್ರಗಳ ನಿರ್ಮಾಪಕರಾದ
ಹೆಚ್.ಕೆ.ಪ್ರಕಾಶ್ ಅವರು ಶ್ರೀದೇವಿ ಎಂಟರ್ ಟೈನರ್ಸ್ ಲಾಂಛನದಲ್ಲಿ ನಿರ್ಮಿಸುತ್ತಿರುವ “ಸ್ಪೂಕಿ ಕಾಲೇಜ್” ಚಿತ್ರದ ಚಿತ್ರೀಕರಣ ಮುಕ್ತಾಯ ಹಂತ ತಲುಪಿದೆ. ಒಂದೇ ಒಂದು ಹಾಡಿನ ಚಿತ್ರೀಕರಣ ಮಾತ್ರ ಬಾಕಿಯಿದೆ. ಆ ರೊಮ್ಯಾಂಟಿಕ್ ಹಾಡನ್ನು ಕಾಡಿನ ಸುಂದರ ಪರಿಸರದಲ್ಲಿ ನಡೆಸುವ ಯೋಚನೆಯಿದೆ. ಕನ್ನಡದ ಸುಪ್ರಸಿದ್ಧ ನಟಿಯೊಬ್ಬರು ಈ ಹಾಡಿನಲ್ಲಿ ಕಾಣಿಸಿಕೊಳ್ಳಲಿದಾರಂತೆ.

ಹಾರಾರ್, ಕಾಮಿಡಿ ಹಾಗೂ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಭರತ್ ಜೆ ನಿರ್ದೇಶಿಸುತ್ತಿದ್ದಾರೆ. ಕಥೆ, ಚಿತ್ರಕಥೆ ಹಾಗು ಸಂಭಾಷಣೆಯನ್ನು ಭರತ್ ಅವರೆ ಬರೆದಿದ್ದಾರೆ. ರೆಡಿಯೋ ಹಾಗೂ ಪ್ರಚಾರ ವಿಭಾಗದಲ್ಲಿ ಕೆಲಸ ಮಾಡಿರುವ ಅನುಭವವಿರುವ ಭರತ್ ಅವರಿಗೆ ಇದು ಚೊಚ್ಚಲ ನಿರ್ದೇಶನದ ಚಿತ್ರ.

“ಪ್ರೀಮಿಯರ್ ಪದ್ಮಿನಿ” ಖ್ಯಾತಿಯ ವಿವೇಕ್ ಸಿಂಹ “ಸ್ಪೂಕಿ ಕಾಲೇಜ್” ನ ನಾಯಕ. “ದಿಯಾ” ಮೂಲಕ ಹೆಸರಾಗಿರುವ ಖುಷಿ ರವಿ ನಾಯಕಿ. ಅಜಯ್ ಪೃಥ್ವಿ, ಹನುಮಂತೇ ಗೌಡ, ಕೆ.ಪಿ.ಶ್ರೀಧರ್, ವಿಜಯ್ ಚೆಂಡೂರ್, ಶರಣ್ಯ ಶೆಟ್ಟಿ, ರಘು ರಮಣಕೊಪ್ಪ ಹಾಗೂ “ಕಾಮಿಡಿ ಕಿಲಾಡಿಗಳು” ಶೋನ‌ ಜನಪ್ರಿಯ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಕರ್ನಾಟಕದಾದ್ಯಂತ ಆಡಿಷನ್
ನಡೆಸುವ ಮೂಲಕ ಕೂಡ ಕಲಾವಿದರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

ಧಾರವಾಡದಲ್ಲಿರುವ 103 ವರ್ಷಗಳ ಹಿಂದಿನ ಬ್ರಿಟಿಷರ ಕಾಲದ ಕಾಲೇಜು ಈ ಚಿತ್ರದ ಕೇಂದ್ರ ಬಿಂದು. ಇಲ್ಲೇ ಬಹುತೇಕ ಚಿತ್ರೀಕರಣ ನಡೆದಿದೆ. ಕಾಳಿ ನದಿಯಿಂದ ಆವೃತವಾಗಿರುವ, ದಟ್ಟವಾದ ವನಸಿರಿಯನ್ನು ಹೊಂದಿರುವ ದಾಂಡೇಲಿಯಲ್ಲೂ ಚಿತ್ರೀಕರಣ ನಡೆಸಿರುವುದಾಗಿ ಚಿತ್ರತಂಡ ತಿಳಿಸಿದೆ.

ಹಾರಾರ್ ಚಿತ್ರಗಳು ಸಾಕಷ್ಟು ಬಂದಿದೆಯಾದರೂ, ಇದು ವಿಭಿನ್ನ ಎನ್ನುವ ನಿರ್ದೇಶಕ ಭರತ್, ನಮ್ಮ ಚಿತ್ರ ತಾಂತ್ರಿಕವಾಗಿ ಬಹಳ ಶ್ರೀಮಂತವಾಗಿರುತ್ತದೆ. ಇದು ಒಂಥರ “ಸ್ಪೂಕಿ” ಎಂದು ತಿಳಿಸಿದ್ದಾರೆ. ಮನೋಹರ್ ಜೋಶಿ ಅವರ ಮನಮೋಹಕ ಛಾಯಾಗ್ರಹಣ, ಅಜನೀಶ್ ಲೋಕನಾಥ್ ಅವರ ಇಂಪಾದ ಸಂಗೀತ ಹಾಗೂ “ಕೆ.ಜಿ.ಎಫ್” ಖ್ಯಾತಿಯ ಶ್ರೀಕಾಂತ್ ಅವರ ಸಂಕಲನ “ಸ್ಪೂಕಿ ಕಾಲೇಜ್” ನ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ. ಚಿತ್ರದ ಪೋಸ್ಟರ್ ಸಹ ಸದ್ಯದಲ್ಲೇ ಬಿಡುಗಡೆಯಾಗಲಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಆಜಾನ್ ಸದ್ದಿಗೆ ವಿರೋಧ;

Thu Apr 21 , 2022
    ನಗರಗಳಲ್ಲಿ ಶಬ್ದ ಮಾಲಿನ್ಯದ (Noise Pollution) ಬಗ್ಗೆ ಬಹಳ ವರ್ಷಗಳಿಂದ ಕೇಳುತ್ತಲೇ ಬಂದಿದ್ದೇವೆ. ವಾಹನಗಳ ಹಾರ್ನ್ ಸದ್ದು, ಕೈಗಾರಿಕೆಗಳ ಯಂತ್ರಗಳ ಸದ್ದು ಮೊದಲಾದವು ನಗರವಾಸಿಗಳ ನಿದ್ದೆಗೆಡಿಸುತ್ತಿದ್ದವು. ಇತ್ತೀಚೆಗೆ ಈ ಶಬ್ದಮಾಲಿನ್ಯ ವಿಚಾರ ಮುನ್ನೆಲೆಗೆ ಬಂದಿದೆ. ಮಸೀದಿಗಳಲ್ಲಿ ಧ್ವನಿವರ್ಧಕಗಳ ಮೂಲಕ ಕೂಗಲಾಗುವ ಬೆಳಗಿನ ಪ್ರಾರ್ಥನೆಯ ಆಜಾನ್ (Azaan) ಸದ್ದಿಗೆ ಹಲವರು ಕೆಂಗಣ್ಣು ಬೀರಿದ್ದಾರೆ. ಬಲಪಂಥೀಯ ಪಕ್ಷಗಳು ಆಜಾನ್ ವಿರುದ್ಧ ದೊಡ್ಡಮಟ್ಟದ ಪ್ರಚಾರವನ್ನೇ ಮಾಡುತ್ತಿವೆ. ಆಜಾನ್ ಸದ್ದಿನ ಬಗ್ಗೆ ಬಿಜೆಪಿ […]

Advertisement

Wordpress Social Share Plugin powered by Ultimatelysocial