ಏಕಕಾಲದಲ್ಲಿ ಎರಡು ಪದವಿ:

ವದೆಹಲಿ (ಪಿಟಿಐ): ‘ವಿದ್ಯಾರ್ಥಿಗಳಿಗೆ ಏಕಕಾಲದಲ್ಲಿ ಎರಡು ಪದವಿ ಕೋರ್ಸ್‌ಗಳನ್ನು ವ್ಯಾಸಂಗ ಮಾಡಲು ಅನುವು ಮಾಡಿಕೊಡುವುದಕ್ಕಾಗಿ ಶಾಸನಬದ್ಧ ಸಂಸ್ಥೆಗಳ ಮೂಲಕ ಕಾರ್ಯವಿಧಾನ ರೂಪಿಸುವಂತೆ ವಿಶ್ವವಿದ್ಯಾಲಯ ಅನುದಾನ ಆಯೋಗವು (ಯುಜಿಸಿ) ವಿಶ್ವವಿದ್ಯಾಲಯಗಳಿಗೆ ಸೂಚಿಸಿದೆ’ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ. ‘ವಿಶ್ವವಿದ್ಯಾಲಯಗಳು ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳು ವಲಸೆ ಹಾಗೂ ವರ್ಗಾವಣೆ ಪ್ರಮಾಣ ಪತ್ರಗಳಿಗಾಗಿ ಒತ್ತಾಯಿಸುತ್ತಿರುವುದರಿಂದ ವಿದ್ಯಾರ್ಥಿಗಳು ಸಂಕಷ್ಟ ಎದುರಿಸುತ್ತಿರುವುದು ಯುಜಿಸಿ ಗಮನಕ್ಕೆ ಬಂದಿದೆ. ಈ ಪ್ರಮಾಣ ಪತ್ರಗಳನ್ನು ಸಲ್ಲಿಸದಿರುವವರಿಗೆ ಪ್ರವೇಶ ನಿರಾಕರಿಸಲಾಗುತ್ತಿದೆ. ಹೀಗಾಗಿ ವಿದ್ಯಾರ್ಥಿಗಳು ಏಕಕಾಲದಲ್ಲಿ ಎರಡು ಪದವಿ ಕೋರ್ಸ್‌ ವ್ಯಾಸಂಗ ಮಾಡುವ ಅವಕಾಶದಿಂದ ವಂಚಿತರಾಗುತ್ತಿದ್ದಾರೆ’ ಎಂದು ಯುಜಿಸಿ ಕಾರ್ಯದರ್ಶಿ ಪಿ.ಕೆ.ಠಾಕೂರ್‌ ಅವರು ವಿಶ್ವವಿದ್ಯಾಲಯ ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಬರೆದಿರುವ ಪತ್ರದಲ್ಲಿ ಹೇಳಿದ್ದಾರೆ. ‘ವಿದ್ಯಾರ್ಥಿಗಳಿಗೆ ಏಕಕಾಲದಲ್ಲಿ ಎರಡು ಪದವಿ ಕೋರ್ಸ್‌ಗಳನ್ನು ವ್ಯಾಸಂಗ ಮಾಡಲು ಅನುವು ಮಾಡಿಕೊಡುವುದಕ್ಕಾಗಿ ವಿಶ್ವವಿದ್ಯಾಲಯಗಳು ತಮ್ಮ ಶಾಸನಬದ್ಧ ಸಂಸ್ಥೆಗಳ ಮೂಲಕ ಕಾರ್ಯವಿಧಾನ ರೂಪಿಸಬೇಕು’ ಎಂದೂ ಅವರು ನಿರ್ದೇಶಿಸಿದ್ದಾರೆ. ವಿದ್ಯಾರ್ಥಿಗಳು ಏಕಕಾಲಕ್ಕೆ ಎರಡು ಪದವಿ ಪಡೆಯುವ ಪ್ರಸ್ತಾವಕ್ಕೆ ಕಳೆದ ವರ್ಷದ ಏಪ್ರಿಲ್‌ನಲ್ಲಿ ಯುಜಿಸಿ ಅನುಮೋದನೆ ನೀಡಿತ್ತು.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

RRR​ ಐತಿಹಾಸಿಕ ಸಾಧನೆ:

Wed Jan 11 , 2023
                ನವದೆಹಲಿ: ಜಾಗತಿಕ ಮಟ್ಟದಲ್ಲಿ ಪ್ರಶಂಸೆಗೆ ಪಾತ್ರವಾದ ಸ್ಟಾರ್​ ನಿರ್ದೇಶಕ ರಾಜಮೌಳಿ ನಿರ್ದೇಶನದ ಹಾಗೂ ಜೂ. ಎನ್​ಟಿಆರ್​ ಮತ್ತು ರಾಮ್​ಚರಣ್​ ಅಭಿನಯದ ‘ಆರ್​ಆರ್​ಆರ್​’ ಸಿನಿಮಾ ಇದೀಗ ಐತಿಹಾಸಿಕ ಸಾಧನೆ ಮಾಡಿದೆ. ಬೆಸ್ಟ್​ ಒರಿಜಿನಲ್​ ಸಾಂಗ್​ ವಿಭಾಗದಲ್ಲಿ ಆರ್​ಆರ್​ಆರ್​ ಸಿನಿಮಾದ ನಾಟು ನಾಟು ಹಾಡಿಗೆ ‘ಗೋಲ್ಡನ್​ ಗ್ಲೋಬ್ಸ್​-2023’ ಅಂತಾರಾಷ್ಟ್ರೀಯ ಪ್ರಶಸ್ತಿ ಒಲಿದು ಬಂದಿದೆ. ನಾಟು ನಾಟು ಹಾಡು ಜಾಗತಿಕ ಮಟ್ಟದಲ್ಲಿ ಸದ್ದು […]

Advertisement

Wordpress Social Share Plugin powered by Ultimatelysocial