ವಿಶ್ವ ಈಜು ಚಾಂಪಿಯನ್‌ಷಿಪ್‌ನಲ್ಲಿ ರಾಷ್ಟ್ರೀಯ ದಾಖಲೆ ನಿರ್ಮಿಸಿದ ಭಾರತದ ಶ್ರೀಹರಿ ನಟರಾಜ್

ಭಾರತದ ಶ್ರೀಹರಿ ನಟರಾಜ್, ಸಜನ್ ಪ್ರಕಾಶ್ ಮತ್ತು ಕುಶಾಗ್ರ ರಾವತ್ ಅವರು ಫಿನಾ ಶಾರ್ಟ್ ಕೋರ್ಸ್ ವಿಶ್ವ ಈಜು ಚಾಂಪಿಯನ್‌ಷಿಪ್‌ನಲ್ಲಿ ರಾಷ್ಟ್ರೀಯ ದಾಖಲೆ ನಿರ್ಮಿಸಿದರು. ಗುರುವಾರ ನಡೆದ ಪುರುಷರ 200 ಮೀಟರ್ಸ್ ಬಟರ್‌ಫ್ಲೈ ಸ್ಪರ್ಧೆಯ ಹೀಟ್ಸ್‌ನಲ್ಲಿ ಸಜನ್ 1 ನಿಮಿಷ 52.10ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು. ಒಟ್ಟಾರೆ 10ನೇ ಸ್ಥಾನಕ್ಕೆ ಕುಸಿದ ಅವರು ಫೈನಲ್ ಪ್ರವೇಶಿಸಲು ವಿಫಲರಾದರು.100 ಮೀ ಬ್ಯಾಕ್‌ಸ್ಟ್ರೋಕ್‌ನಲ್ಲಿ ಶ್ರೀಹರಿ ನಟರಾಜ್ 52.81 ಸೆಕೆಂಡುಗಳ ಸಾಧನೆಯೊಂದಿಗೆ ಹೀಟ್ಸ್‌ನಲ್ಲಿ 28ನೇ ಸ್ಥಾನ ಗಳಿಸಿದರು. ಕುಶಾಗ್ರ ರಾವತ್ 400 ಮೀ ಫ್ರೀಸ್ಟೈಲ್‌ನಲ್ಲಿ 3 ಮೀ 49.04 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು. ರಿಧಿಮಾ ವೀರೇಂದ್ರ ಕುಮಾರ್ ಮಹಿಳೆಯರ 100 ಮೀ ಬ್ಯಾಕ್‌ಸ್ಟ್ರೋಕ್‌ನಲ್ಲಿ 1ನಿ 03.29 ಸೆಕೆಂಡುಗಳಲ್ಲಿ ಗುರಿ ತಲುಪಿ 34ನೇ ಸ್ಥಾನಕ್ಕೆ ಕುಸಿದರು.

Please follow and like us:

Leave a Reply

Your email address will not be published. Required fields are marked *

Next Post

ಚುನಾವಣೆಯಲ್ಲಿ ಗೆದ್ದ ಖುಷಿಗೆ ಪ್ರತಿಸ್ಪರ್ಧಿಯನ್ನೇ ಕೊಂದ ಬೆಂಬಲಿಗರು...!

Fri Dec 17 , 2021
ಪಂಚಾಯತ್​ ಚುನಾವಣೆಯಲ್ಲಿ ಸೋತಿದ್ದ ಅಭ್ಯರ್ಥಿಯನ್ನು ಗೆದ್ದ ವ್ಯಕ್ತಿಯ ಬೆಂಬಲಿಗರು ಹತ್ಯೆ ಮಾಡಿದ ಘಟನೆಯು ಬಿಹಾರದ ಪೂರ್ವ ಚಂಪಾರಣ್​​ನಲ್ಲಿ ನಡೆದಿದೆ. ಪೂರ್ವ ಚಂಪಾರಣ್​ ಜಿಲ್ಲಾ ಪಂಚಾಯತ್​ ಚುನಾವಣೆಯಲ್ಲಿ ಸೋತಿದ್ದ 50 ವರ್ಷದ ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆಗೈಯಲಾಗಿದೆ. ಮೃತ ವ್ಯಕ್ತಿಯನ್ನು ಬಬುಲ್​ ಹಾಸನ್​ ಎಂದು ಗುರುತಿಸಲಾಗಿದೆ. ಚುನಾವಣೆಯಲ್ಲಿ 45 ವರ್ಷದ ಇಮ್ಯಾನ್ಯುವಲ್​ ಹಸನ್​ ವಿಜೇತರಾಗಿದ್ದರೆ ಮೃತ ಬಬುಲ್​ ಎರಡನೇ ಸ್ಥಾನ ಪಡೆದಿದ್ದರು. ಇಮ್ಯಾನುವಲ್​ ಹಸನ್​ ವಿರುದ್ಧ ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿದ್ದ ಬಾಬುಲ್​ ಹಸನ್​ […]

Advertisement

Wordpress Social Share Plugin powered by Ultimatelysocial