ಚೈನೀಸ್ ಇಂಟರ್ನೆಟ್ ಆಫ್ ಥಿಂಗ್ಸ್ ಮೂಲಕ ಬೇಹುಗಾರಿಕೆ;

ಮೂಲಸೌಕರ್ಯ ಮತ್ತು ಪ್ರಮುಖ ಕೈಗಾರಿಕೆಗಳಲ್ಲಿರುವ ಚೈನೀಸ್ ಇಂಟರ್ನೆಟ್ ಆಫ್ ಥಿಂಗ್ಸ್ (ಐಒಟಿ) ಮಾಡ್ಯೂಲ್‌ಗಳು ಬೇಹುಗಾರಿಕೆ ಮಾಡುತ್ತಿರುವ ಆತಂಕ ಎದುರಾಗಿದೆ. ಚೀನಾದ ಈ ಮಾಡ್ಯೂಲ್‌ಗಳು ಸ್ಮಾರ್ಟ್ ಸಿಟಿಗಳಲ್ಲಿ ಕಣ್ಗಾವಲು ಇಟ್ಟಿರಬಹುದು, ವ್ಯವಸ್ಥೆಗಳನ್ನು ಹಾಳುಮಾಡಲು ಇವು ಅನುವು ಮಾಡಿಕೊಡುತ್ತವೆ.

ಈ ಕಾರಣದಿಂದ ಇಡೀ ಜಗತ್ತಿಗೇ ಇದು ದೊಡ್ಡ ಬೆದರಿಕೆ ಎಂಬ ವರದಿ ಇದೀಗ ಬಹಿರಂಗವಾಗಿದೆ. ಇಂಟರ್ನೆಟ್ ಆಫ್ ಥಿಂಗ್ಸ್ (IoT) ಭೌತಿಕ ವಸ್ತುಗಳ ಜಾಲವನ್ನು ವಿವರಿಸುತ್ತದೆ. ವಸ್ತುಗಳು, ಸಾಫ್ಟ್‌ವೇರ್, ಸಂವೇದಕಗಳು ಮತ್ತು ಇಂಟರ್ನೆಟ್‌ನಲ್ಲಿ ಇತರ ಸಾಧನಗಳು ಮತ್ತು ಸಿಸ್ಟಮ್‌ಗಳೊಂದಿಗೆ ಡೇಟಾವನ್ನು ಸಂಪರ್ಕಿಸುವ ಮತ್ತು ವಿನಿಮಯ ಮಾಡುವ ಉದ್ದೇಶಕ್ಕಾಗಿ ಇದನ್ನು ಬಳಸಲಾಗುತ್ತದೆ.

ಪೋರ್ಟಲ್ ಪ್ಲಸ್ ವರದಿಯ ಪ್ರಕಾರ, ಅಮೆರಿಕದಲ್ಲಿ ತಯಾರಾದ ಶಸ್ತ್ರಾಸ್ತ್ರಗಳ ಬಗ್ಗೆ ಕಂಡುಹಿಡಿಯಲು, ಎಷ್ಟು ಬಿಡಿ ಭಾಗಗಳು ಮತ್ತು ಶಸ್ತ್ರಾಸ್ತ್ರಗಳನ್ನು ಎಲ್ಲೆಲ್ಲಿಗೆ ಸಾಗಿಸಲಾಗಿದೆ ಎಂಬುದನ್ನು ತಿಳಿದುಕೊಳ್ಳಲು ಚೀನಾ ಇದನ್ನು ಬಳಸಿಕೊಳ್ಳುತ್ತಿರುವ ಅನುಮಾನ ವ್ಯಕ್ತವಾಗಿದೆ. ಸಪ್ಲೈ ಚೈನ್‌ ಮತ್ತು ಲಾಜಿಸ್ಟಿಕ್ಸ್ ವ್ಯವಸ್ಥೆಯಲ್ಲಿ ಎಂಬೆಡ್ ಮಾಡಲಾದ IoT ಮಾಡ್ಯೂಲ್‌ಗಳಿಂದ ಸಂಗ್ರಹಿಸಲಾದ ಡೇಟಾದಲ್ಲಿ ಈ ಎಲ್ಲಾ ವಿವರಗಳು ಲಭ್ಯವಾಗಬಹುದು. ಸರ್ಕಾರಿ ವ್ಯವಸ್ಥೆಗಳು ಮತ್ತು ಕಾರ್ ಕಂಪ್ಯೂಟರ್‌ಗಳು, ಗೃಹೋಪಯೋಗಿ ಉಪಕರಣಗಳು ಅಥವಾ ಧರಿಸಬಹುದಾದ ಡಿವೈಸ್‌ಗಳ ಮೂಲಕ ಡೇಟಾವನ್ನು ಚೀನಾ ಸಂಗ್ರಹಿಸಬಹುದು.

ಐಡೆಂಟಿಟಿ, ಅಭ್ಯಾಸಗಳು, ಕಾಂಟಾಕ್ಟ್ಸ್‌ ಕಂಡುಹಿಡಿಯಲು ಈ ಆರ್ಟಿಫಿಶಿಯಲ್‌ ಇಂಟೆಲಿಜನ್ಸ್‌ ಅನ್ನು ಬಳಸಬಹುದು. ಇದನ್ನು ಆದಷ್ಟು ಶೀಘ್ರ ನಿಷೇಧಿಸಬೇಕೆಂಬ ಒತ್ತಾಯ ಬ್ರಿಟನ್‌ನಲ್ಲೂ ಕೇಳಿಬಂದಿದೆ. ಈ ಮಾಡ್ಯೂಲ್‌ಗಳು ಸರ್ಕಾರಿ ಆಸ್ತಿಗಳು ಮತ್ತು ಸೇವೆಗಳು, ನಿರ್ಣಾಯಕ ರಾಷ್ಟ್ರೀಯ ಮೂಲಸೌಕರ್ಯಗಳಲ್ಲಿ ಎಲ್ಲೆಲ್ಲಿ ಹುದುಗಿದೆ ಎಂಬುದರ ಕುರಿತು ಸಂಪೂರ್ಣ ಮಾಹಿತಿ ಕದಿಯುವ ಆತಂಕ ಎದುರಾಗಿದೆ. ಈ ವರ್ಷದ ಅಂತ್ಯದೊಳಗೆ ಹೊಸ ಚೈನೀಸ್ ಐಒಟಿ ಮಾಡ್ಯೂಲ್‌ಗಳನ್ನು ಖರೀದಿಸುವುದನ್ನು ನಿಷೇಧಿಸಬೇಕು ಮತ್ತು 2025ರ ಅಂತ್ಯದ ವೇಳೆಗೆ ಅಸ್ತಿತ್ವದಲ್ಲಿರುವ ಉತ್ಪನ್ನಗಳನ್ನು ಬದಲಾಯಿಸಲು ಗಡುವು ನೀಡಬೇಕು ಎಂದು ಪೋರ್ಟಲ್ ಪ್ಲಸ್ ವರದಿ ಮಾಡಿದೆ.

ಸ್ಮಾರ್ಟ್ ಬಲ್ಬ್‌ಗಳು, ಫ್ರಿಜ್‌ಗಳು, ಕಾರು ಮತ್ತು ಕ್ರೆಡಿಟ್ ಕಾರ್ಡ್‌ಗಳಲ್ಲಿ ಮೈಕ್ರೊಚಿಪ್‌ಗಳ ಮೂಲಕ ಚೀನಾ ನಿಮ್ಮನ್ನು ವೀಕ್ಷಿಸುತ್ತಿದೆ ಎಂದು ಏಷ್ಯನ್ ಲೈಟ್ ಇಂಟರ್‌ನ್ಯಾಶನಲ್ ಇತ್ತೀಚೆಗೆ ವರದಿ ಮಾಡಿದೆ.ಇದರಿಂದಾಗಿ ರಾಷ್ಟ್ರೀಯ ಭದ್ರತೆ, ಆರ್ಥಿಕ ಸಮೃದ್ಧಿ, ಗೌಪ್ಯತೆ, ಮೌಲ್ಯಗಳು ಮತ್ತು ಮಾನವ ಹಕ್ಕುಗಳಿಗೆ ಆತಂಕ ಎದುರಾಗಿದೆ.  ಮತ್ತು ಚೀನಾ ಮೊಬೈಲ್ ಈ ಮೂರು ಕಂಪನಿಗಳ ಡಿವೈಸ್‌ಗಳು ಈಗಾಗಲೇ ಜಾಗತಿಕ ಮಾರುಕಟ್ಟೆಯ 54 ಪ್ರತಿಶತ ಪಾಲನ್ನು ಹೊಂದಿವೆ. ಮೂರು ಚೀನೀ ಸಂಸ್ಥೆಗಳ ಗ್ರಾಹಕರು ಕಂಪ್ಯೂಟಿಂಗ್ ಸಂಸ್ಥೆಗಳಾದ ಡೆಲ್, ಲೆನೊವೊ, ಎಚ್‌ಪಿ ಮತ್ತು ಇಂಟೆಲ್, ಕಾರು ತಯಾರಕ ಟೆಸ್ಲಾ ಮತ್ತು ಕಾರ್ಡ್ ಪಾವತಿ ಸಂಸ್ಥೆ ಸುಮಪ್ ಕೂಡ ಇವುಗಳಲ್ಲಿ ಸೇರಿವೆ.

ಎಲ್ಲಾ ಚೀನೀ ಸಂಸ್ಥೆಗಳಂತೆ ಆದೇಶ ನೀಡಿದರೆ ಇವು ಕೂಡ ಚೀನಾ ಸರ್ಕಾರಕ್ಕೆ ಡೇಟಾವನ್ನು ಹಸ್ತಾಂತರಿಸಬೇಕು. ಮಾಡ್ಯೂಲ್‌ಗಳು ಮಾತ್ರವಲ್ಲದೆ ಲ್ಯಾಪ್ಟಾಪ್, ಕಂಪ್ಯೂಟರ್, ಧ್ವನಿ ನಿಯಂತ್ರಿತ ಸ್ಮಾರ್ಟ್ ಸ್ಪೀಕರ್, ಸ್ಮಾರ್ಟ್ ವಾಚ್‌, ಸ್ಮಾರ್ಟ್ ಪವರ್‌ ಮೀಟರ್, ಅಪ್ಲಿಕೇಶನ್ ಮೂಲಕ ನಿಯಂತ್ರಿಸಬಹುದಾದ ಫ್ರಿಜ್‌ಗಳು, ಲೈಟ್ ಬಲ್ಬ್‌ಗಳು ಮತ್ತು ಇತರ ಉಪಕರಣಗಳು, ಪೊಲೀಸ್ ಕ್ಯಾಮೆರಾಗಳು, ಡೋರ್ಬೆಲ್ ಕ್ಯಾಮೆರಾಗಳು, ಸೆಕ್ಯೂರಿಟಿ ಕ್ಯಾಮೆರಾಗಳು, ಬ್ಯಾಂಕ್ ಕಾರ್ಡ್ ಪಾವತಿ ಯಂತ್ರಗಳು, ಕಾರು ಮತ್ತು ಹಾಟ್ ಟಬ್‌ಗಳ ಮೂಲಕವೂ ಚೀನಾಕ್ಕೆ ಮಾಹಿತಿ ರವಾನೆಯಾಗುತ್ತಿರುವ ಆತಂಕ ಎದುರಾಗಿದೆ.

ಮಾಡ್ಯೂಲ್‌ಗಳು ಡೇಟಾವನ್ನು ಸಂಗ್ರಹಿಸುತ್ತವೆ ಮತ್ತು ನಂತರ ಅದನ್ನು 5G ನೆಟ್‌ವರ್ಕ್‌ಗಳ ಮೂಲಕ ರವಾನಿಸುತ್ತವೆ. ಶಸ್ತ್ರಾಸ್ತ್ರಗಳು ಸೇರಿದಂತೆ ಗುಪ್ತಚರ ಕೆಲಸಗಳ ಚಲನೆಯನ್ನು ಮೇಲ್ವಿಚಾರಣೆ ಮಾಡಲು ಮತ್ತು ಕೈಗಾರಿಕಾ ಬೇಹುಗಾರಿಕೆಗಾಗಿ ಸಾಧನಗಳನ್ನು ಬಳಸಲು ಚೀನಾಕ್ಕೆ ಬಹಳ ದೇಶಗಳು ಅವಕಾಶವನ್ನು ನೀಡುತ್ತಿವೆ. ಇಂತಹ ಲಕ್ಷಾಂತರ ಸಾಧನಗಳು ಈಗಾಗಲೇ ಬ್ರಿಟನ್‌ನಲ್ಲಿ ಬಳಕೆಯಲ್ಲಿವೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕ್ಯಾನ್ಸರ್ ವಕ್ಕರಿಸುವ ಮೊದಲು ದೇಹದಲ್ಲಾಗುತ್ತವೆ ಈ ಬದಲಾವಣೆ

Sat Feb 4 , 2023
  ವರ್ಷದಿಂದ ವರ್ಷಕ್ಕೆ ಕ್ಯಾನ್ಸರ್ ಪ್ರಕರಣಗಳು ಹೆಚ್ಚಾಗುತ್ತಿವೆ. ಇನ್ನು ನಮಗೆಲ್ಲಾ ತಿಳಿದಂತೆ ಕ್ಯಾನ್ಸರ್ ಎಂಬುದು ಮಾರಕ ರೋಗವಾಗಿದ್ದು, ಇದರ ವಿರುದ್ಧ ಹೋರಾಡುವುದು ಅಷ್ಟು ಸುಲಭದ ಮಾತಲ್ಲ. ಕ್ಯಾನ್ಸರ್ ಕೊನೆಯ ಹಂತಕ್ಕೆ ಬಂದಾಗ ಹೆಚ್ಚಿನ ಜನರಿಗೆ ಈ ಮಾರಕ ಕಾಯಿಲೆ ಇದೆ ಎಂದು ತಿಳಿಯುತ್ತದೆ. ಜನರು ಕ್ಯಾನ್ಸರ್ ಇರುವಾಗ ರೋಗಲಕ್ಷಣಗಳನ್ನು ನಿರ್ಲಕ್ಷಿಸುವುದೇ ಇದಕ್ಕೆ ಕಾರಣ. ಕ್ಯಾನ್ಸರ್ ಕೊನೆಯ ಹಂತಕ್ಕೆ ಬಂದಾಗ ಚಿಕಿತ್ಸೆ ಪಡೆಯುವುದು ತುಂಬಾ ಕಷ್ಟ. ಕ್ಯಾನ್ಸರ್‌ನ ಲಕ್ಷಣಗಳೇನು ಎಂಬುದನ್ನು ತಿಳಿದುಕೊಳ್ಳೋಣ. […]

Advertisement

Wordpress Social Share Plugin powered by Ultimatelysocial