ಎನ್. ಎಸ್. ಶ್ರೀನಿವಾಸಮೂರ್ತಿ

 
ಆತ್ಮೀಯರಾದ ಎನ್. ಎಸ್. ಶ್ರೀನಿವಾಸಮೂರ್ತಿ ಕಳೆದ ಎರಡು ದಶಕಗಳಿಂದ ದೇಗುಲಗಳ ಬಗೆಗೆ ಅಧ್ಯಯನಶೀಲರಾಗಿ ಮಹತ್ವದ ವಿಷಯಗಳ ಬಗೆಗೆ ಬೆಳಕು ಚೆಲ್ಲುತ್ತ ಬಂದಿದ್ದಾರೆ.
ಮಾರ್ಚ್ 21 ಶ್ರೀನಿವಾಸಮೂರ್ತಿ ಅವರ ಜನ್ಮದಿನ. ಅವರ ತಂದೆ ಎನ್. ಎಸ್. ಸೀತಾರಾಮ ರಾವ್ ಗಣಿತ, ವಿಜ್ಞಾನ, ಸಂಗೀತ ಮತ್ತು ರಂಗಲೋಕದ ಮಹಾನ್ ಸಾಧಕರು. ತಾಯಿ ಪ್ರೇಮಲೀಲಾ. ಶ್ರೀನಿವಾಸಮೂರ್ತಿ ಅವರ ತಾತ ನೂಲೇನೂರು ಶಂಕರಪ್ಪನವರು ಮಹಾನ್ ವಿದ್ವಾಂಸರಾಗಿ, ವಾಗ್ಗೇಯಕಾರರಾಗಿ ಮತ್ತು ಗಮಕಿಗಳಾಗಿ ನಾಡಿನಲ್ಲಿ ಪ್ರಸಿದ್ಧರಾಗಿದ್ದವರು. ದೊಡ್ಡಪ್ಪ ಎನ್. ಎಸ್. ಚಿದಂಬರ ರಾವ್ ಕಥೆಗಾರರಾಗಿ ಪ್ರಸಿದ್ಧರಾಗಿದ್ದವರು. ಇವರ ಸಹೋದರ ನಮ್ಮೆಲ್ಲರ ಆತ್ಮೀಯರಾದ ಎನ್. ಎಸ್. ಶ್ರೀಧರ ಮೂರ್ತಿ ಪತ್ರಿಕಾ ಲೋಕದಲ್ಲಿ ಮತ್ತು ಬರಹಲೋಕದಲ್ಲಿ ಪ್ರಖ್ಯಾತರು.
ಶ್ರೀನಿವಾಸಮೂರ್ತಿ ಚಿಕ್ಕಮಗಳೂರು ಜಿಲ್ಲೆಯ ಹರಿಹರಪುರದಲ್ಲಿ ತಮ್ಮ ಆರಂಭಿಕ ವಿದ್ಯಾಭ್ಯಾಸ ಮುಗಿಸಿ, ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಬಿ.ಎಸ್ಸಿ ಮತ್ತು ಸ್ಟಾಟಿಸ್ಟಿಕ್ಸ್ ವಿಷಯದಲ್ಲಿ ಎಂ.ಎಸ್ಸಿ ಪದವಿ ಗಳಿಸಿದವರು.
ಶ್ರೀನಿವಾಸಮೂರ್ತಿ ಅವರು ನಾಲ್ಕು ವರ್ಷ ಅಂಚೆ ಇಲಾಖೆಯಲ್ಲಿ ಕಾರ್ಯ ನಿರ್ವಹಿಸಿದ ನಂತರ ಕಳೆದ 24 ವರ್ಷಗಳಿಂದ ಕರ್ಣಾಟಕ ಬ್ಯಾಂಕಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಶ್ರೀನಿವಾಸಮೂರ್ತಿ ಅವರು ತಮ್ಮ ಹಿರಿಯರಿಂದ ಬಳುವಳಿಯಾಗಿ ಬಂದ ವೈವಿಧ್ಯಪೂರ್ಣ ಸಾಹಿತ್ಯ ಮತ್ತು ಸಾಂಸ್ಕೃತಿಕ ಆಸಕ್ತಿಗಳಿಂದ ಪ್ರೇರಿತರಾದವರು. ಕಳೆದ ಇಪ್ಪತ್ತು ವರ್ಷಗಳಿಂದ ದೇವಾಲಯಗಳ ಬಗ್ಗೆ ಅಧ್ಯಯನ ಮಾಡುತ್ತಿರುವ ಇವರು ಈ ನಿಮಿತ್ತ ರಾಜ್ಯದ ಸುಮಾರು 1000 ಕ್ಕೂ ಅಧಿಕ ಪುರಾತನ ದೇವಾಲಯಗಳಿಗೆ ಭೇಟಿ ನೀಡಿದ್ದು ಇದನ್ನು ಕೇವಲ ತಮ್ಮ ಸ್ವಯಂ ಆಸಕ್ತಿಯ ಸಂಶೋಧನೆಗೆ ಮೀಸಲುಗೊಳಿಸದೆ, ಜನಸಾಮಾನ್ಯರಿಗೂ ತಲುಪಿಸುತ್ತಾ ಬಂದಿದ್ದಾರೆ. ಕರ್ನಾಟಕ ಇತಿಹಾಸ ಅಕಾಡೆಮಿಯ ಸಕ್ರಿಯ ಸದಸ್ಯರಾಗಿರುವ ಇವರು ವಿವಿಧ ಬಳಗಗಳ ಮೂಲಕ ಇತಿಹಾಸದ ಹೊಸ ಹೊಳಹುಗಳನ್ನು ನೀಡುವ ನಿಟ್ಟಿನಲ್ಲಿ ಕ್ರಿಯಾಶೀಲರಾಗಿದ್ದಾರೆ. ಈ ನಿಟ್ಟಿನಲ್ಲಿ ಇವರು ಸುಮಾರು 500ಕ್ಕೂ ಅಧಿಕ ಲೇಖನಗಳನ್ನು ಅಜ್ಞಾತ ದೇವಾಲಯಗಳ ಕುರಿತು ಬರೆದಿದ್ದು ಅವು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಬೆಳಕು ಕಂಡಿವೆ. ಇದಲ್ಲದೆ ವಿವಿಧ ಮಾಧ್ಯಮಗಳ ಮೂಲಕವೂ ದೇವಾಲಯಗಳ ಪರಿಚಯವನ್ನು ತಲುಪಿಸುತ್ತಾ ಬಂದಿದ್ದಾರೆ. ತಮ್ಮ ಬರಹಕ್ಕೆ ಅನುಗುಣವಾಗಿ ಛಾಯಾಗ್ರಹಣದಲ್ಲೂ ಪರಿಣಿತರಾಗಿರುವ ಇವರ 20,000ಕ್ಕೂ ಹೆಚ್ಚು ಚಿತ್ರಗಳು ಇವರ ಬರಹಗಳ ಮೌಲ್ಯವನ್ನು ಓದುಗರಿಗೆ ಆಪ್ತವಾಗಿಸಿವೆ.
ಇದುವರೆಗೆ ಎರಡು ಪುಸ್ತಕಗಳನ್ನು ಪ್ರಕಟಿಸಿರುವ ಶ್ರೀನಿವಾಸಮೂರ್ತಿ ಅವರ ‘ಶಿಲ್ಪಕಲಾ ದೇವಾಲಯಕ್ಕೆ ದಾರಿ’ ಶಿಲ್ಪಕಲಾ ಆಸಕ್ತರಿಗೆ ಹಲವು ಹಾದಿಗಳನ್ನು ತೆರೆದುಕೊಟ್ಟಿವೆ.
ಆತ್ಮೀಯರಾದ ಶ್ರೀನಿವಾಸಮೂರ್ತಿ, ಅವರ ಪತ್ನಿ ಸಂಧ್ಯಾ ಮತ್ತು ಮಗಳು ನಿಹಾರಿಕಾ ಕುಟುಂಬಕ್ಕೆ ಶುಭಹಾರೈಕೆಗಳು.ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಧೋನಿ ಮತ್ತು ಚೆನ್ನೈ ಕೆಲವೇ ಕೆಲವರಂತೆ ಸಂಪರ್ಕದಲ್ಲಿ ಉಳಿಯುತ್ತಾರೆ': ಮಾಜಿ CSK 'ನಾಯಕ'ಗೆ ಶ್ರೀಮಂತ ಗೌರವ ಸಲ್ಲಿಸಿದ,ಸೆಹ್ವಾಗ್!

Fri Mar 25 , 2022
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಶನಿವಾರದಂದು ಉನ್ನತ ಹೆಸರುಗಳು ಮತ್ತು ಎರಡು ಹೊಸ ಫ್ರಾಂಚೈಸಿಗಳು ಲಾಭದಾಯಕ T20 ಸ್ಪರ್ಧೆಯಲ್ಲಿ ಸೇರಿಕೊಳ್ಳಲಿದೆ. ಆದರೆ 15 ನೇ ಆವೃತ್ತಿಯಲ್ಲಿ ಪಾದರಸದ ಎಂಎಸ್ ಧೋನಿ ಟಾಸ್‌ಗೆ ಹೊರನಡೆಯುವುದನ್ನು ನೋಡುವುದಿಲ್ಲ. 2008 ರಲ್ಲಿ ಲೀಗ್ ಪ್ರಾರಂಭವಾದಾಗಿನಿಂದ ತಂಡವನ್ನು ಅತ್ಯಂತ ಯಶಸ್ವಿ ತಂಡವನ್ನಾಗಿ ಮಾಡಿದ ನಂತರ 40 ವರ್ಷದ ಕ್ರಿಕೆಟಿಗ ರವೀಂದ್ರ ಜಡೇಜಾಗೆ ನಾಯಕತ್ವವನ್ನು ಹಸ್ತಾಂತರಿಸಿದ್ದಾರೆ ಎಂದು ನಾಲ್ಕು ಬಾರಿ ಐಪಿಎಲ್ ವಿಜೇತ ಚೆನ್ನೈ ಸೂಪರ್ ಕಿಂಗ್ಸ್ […]

Advertisement

Wordpress Social Share Plugin powered by Ultimatelysocial