SSLC ವಿದ್ಯಾರ್ಥಿಗಳ ಗಮನಕ್ಕೆ: ಇಲಾಖೆಯಿಂದ ಸಹಾಯವಾಣಿ ಸಂಖ್ಯೆ ಆರಂಭ

ಬೆಂಗಳೂರು: ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ( Karnataka SSLC Exam 2023 ) ಸಂಬಂಧಿಸಿದಂತ ಗೊಂದಲ, ಸಮಸ್ಯೆಗಳ ಬಗ್ಗೆ ಅನುಕೂಲವಾಗುವ ನಿಟ್ಟಿನಲ್ಲಿ, ಸಹಾಯವಾಣಿ ಸಂಖ್ಯೆಯನ್ನು ( Helpline Number ) ಆರಂಭಿಸಲಾಗಿದೆ.

ಈ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಮಾಹಿತಿ ನೀಡಲಾಗಿದ್ದು, ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಯಾವುದೇ ಸಮಸ್ಯೆ ಉಂಟಾಗ ಬಾರದು ಎಂಬುದಾಗಿ ಇಲಾಖೆ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗಾಗಿ ಟೋಲ್ ಫ್ರೀ ಸಹಾಯವಾಣಿ ಸಂಖ್ಯೆ ಆರಂಭಿಸಿರೋದಾಗಿ ಹೇಳಿದೆ.

ವಿದ್ಯಾರ್ಥಿಗಳು ತಮ್ಮ ಪ್ರವೇಶ ಪತ್ರ, ಪರೀಕ್ಷೆ ಗೊಂದಲಗಳಿದ್ದರೇ ಟೋಲ್ ಫ್ರೀ ಸಹಾಯವಾಣಿ ಸಂಖ್ಯೆ 1800 425 0255ಗೆ ಕರೆ ಮಾಡಬಹುದು. ಈ ಸಹಾಯವಾಣಿ ಸಂಖ್ಯೆ ಸೋಮವಾರದಿಂದ ಶನಿವಾರದವರೆಗೆ ಪ್ರತಿದಿನ ಬೆಳಿಗ್ಗೆ 10 ರಿಂದ ಆರಂಭಗೊಂಡು, ರಾತ್ರಿ 8 ಗಂಟೆಯವರೆಗೆ ಚಾಲನೆಯಲ್ಲಿ ಇರಲಿದೆ. ಭಾನುವಾರದಂದು ಬೆಳಿಗ್ಗೆ 11 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಲಭ್ಯವಿರಲಿದೆ ಎಂದು ತಿಳಿಸಿದೆ.

ಅಂದಹಾಗೇ ಎಸ್ ಎಸ್ ಎಲ್ ಸಿ ಪರೀಕ್ಷೆಗಳು ( Karnataka SSLC Exam 2023 ) ಮಾರ್ಚ್ 31 ರಿಂದ ಏಪ್ರಿಲ್ 15ರವರೆಗೆ ನಡೆಯಲಿದೆ. ವಿದ್ಯಾರ್ಥಿಗಳು ಯಾವುದೇ ಗೊಂದಲವಿಲ್ಲದೇ ಪರೀಕ್ಷೆ ಸುಗಮವಾಗಿ ನಡೆಯೋದಕ್ಕಾಗಿ ಈ ಸಹಾಯವಾಣಿ ಸಂಖ್ಯೆಗಳನ್ನು ಆರಂಭಿಸಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವೃಶ್ಚಿಕ ರಾಶಿ ಭವಿಷ್ಯ.

Sun Feb 26 , 2023
  ಇಂದು ನೀವು ಆರಾಮವಾಗಿರಬೇಕು ಹಾಗೂ ನಿಕಟ ಸ್ನೇಹಿತರು ಮತ್ತು ಕುಟುಂಬದ ಎಲ್ಲಾ ಸದಸ್ಯರನ್ನು ಸಂತೋಷವಾಗಿರಿಸಲು ಪ್ರಯತ್ನಿಸಬೇಕು. ಹಣಕಾಸು ಸ್ಥಿತಿ ಊಹಾಪೋಹ ಅಥವಾ ಅನಿರೀಕ್ಷಿತ ಲಾಭದ ಮೂಲಕ ಸುಧಾರಿಸುತ್ತವೆ. ಮಕ್ಕಳು ಅಧ್ಯಯನದಲ್ಲಿ ಅವರ ನಿರಾಸಕ್ತಿಯಿಂದಾಗಿ ಶಾಲೆಯಲ್ಲಿ ನಿರಾಸೆಯುಂಟುಮಾಡಬಹುದು. ನಿಮ್ಮ ಪ್ರೀತಿಪಾತ್ರರ ನಿಷ್ಠೆಯನ್ನು ಅನುಮಾನಿಸಬೇಡಿ. ಉತ್ತಮ ಸಂಜೆ ಹೊಂದಲು, ನೀವು ದಿನವಿಡೀ ಶ್ರದ್ಧೆಯಿಂದ ಕೆಲಸ ಮಾಡಬೇಕಾಗುತ್ತದೆ. ಇಂದು, ನೀವು ಮತ್ತೆ ನಿಮ್ಮ ಸಂಗಾತಿಯ ಜೊತೆ ಪ್ರೀತಿಯಲ್ಲಿ ಬೀಳುತ್ತೀರಿ. ಜೀವನದಲ್ಲಿ ನೀರಿನ ಮೌಲ್ಯದ […]

Advertisement

Wordpress Social Share Plugin powered by Ultimatelysocial