ತಂದೆ- ತಾಯಿ ಸಮಾಧಿ ಬಳಿ ಬರ್ತ್ಡೇ ಆಚರಿಸಿಕೊಂಡ ನಟ ದುನಿಯಾ ವಿಜಯ್.

ಟ ದುನಿಯಾ ವಿಜಯ್ 49 ವರ್ಷದ ಹುಟ್ಟುಹಬ್ಬವನ್ನು ಇದೇ ಮೊದಲ ಬಾರಿಗೆ ಹುಟ್ಟೂರಿನಲ್ಲಿ, ತಮ್ಮ ತಂದೆ- ತಾಯಿ ಸಮಾಧಿ ಬಳಿ ಅಭಿಮಾನಿಗಳ ಜೊತೆ ಆಚರಿಸಿಕೊಂಡಿದ್ದಾರೆ.

ನಟ ದುನಿಯಾ ತಮ್ಮ ಹುಟ್ಟೂರು ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಕುಂಬಾರನಹಳ್ಳಿಯಲ್ಲಿವ ತಮ್ಮ ಹೆತ್ತವರ ಸಮಾಧಿ ಬಳಿ ಭರ್ಜರಿಯಾಗಿ ಅಭಿಮಾನಿಗಳ ಜೊತೆ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ.

ಹೊರ ರಾಜ್ಯ ಸೇರಿದಂತೆ ರಾಜ್ಯದ ನಾನಾ ಕಡೆಗಳಿಂದ ಆಗಮಿಸಿದ್ದ ಅಭಿಮಾನಿಗಳು ದುನಿಯಾ ವಿಜಿಗೆ ಜೈಕಾರ ಹಾಕಿ, ನೆಚ್ಚಿನ ನಟನ ಜೊತೆ ಸೆಲ್ಪಿ ಕ್ಲಿಕ್ಕಿಸಿಕೊಂಡು ಖುಷಿಪಟ್ಟಿದ್ದಾರೆ.

ತಂದೆ ತಾಯಿಯ ಸಮಾಧಿಗೆ ದುನಿಯಾ ವಿಜಿ ಪೂಜೆ ಸಲ್ಲಿಸಿ ಸಾಧು ಸಂತರು ಹಾಗೂ ಸ್ವಾಮೀಜಿಗಳಿಂದ ಆಶೀರ್ವಾದವನ್ನ ಪಡೆದರು. ಹೆತ್ತವರ ಸಮಾಧಿಯ ಬಳಿಯ ನಿರ್ಮಾಣ ಮಾಡಲಾಗಿದ್ದ ವೇದಿಕೆ ದುನಿಯಾ ವಿಜಿ ಎಂಟ್ರಿ ಕೊಡುತ್ತಿದ್ದಂತೆ ನೆಚ್ಚನ ನಟನನ್ನು ಕಂಡ ಅಭಿಮಾನಿಗಳ ಆನಂದಕ್ಕೆ ಪಾರವೇ ಇರಲಿಲ್ಲ. ಅಭಿಮಾನಿಗಳು ಭೀಮ ಚಿತ್ರದ ಪೋಸ್ಟರ್ ಇರುವ ಕೇಕ್ ತರಿಸಿದ್ದು ಚಿತ್ರದ ನಿರ್ಮಾಪಕರ ಹಾಗೂ ಅಭಿಮಾನಿಗಳ ಜೊತೆಗೂಡಿ ವಿಜಿ ಕೇಕ್ ಕತ್ತರಿಸುವ ಮೂಲಕ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ.

ಅಭಿಮಾನಿಗಳಿಗೆ ಭರ್ಜರಿ ಬಾಡೂಟದ ವ್ಯವಸ್ಥೆಯನ್ನ ಮಾಡಿದ್ದರು. ಸುಮಾರು ಮೂರು ಸಾವಿರಕ್ಕೂ ಅಧಿಕ ಮಂದಿ ಫ್ಯಾನ್ಸ್‌ಗೆ ಚಿಕಿನ್ ಬಿರಿಯಾನಿ, ಚಿಕನ್ ಫ್ರೈ ಮಾಡಿ ತಾವೇ ಕೈಯಾರೆ ಅಭಿಮಾನಿಗಳಿಗೆ ಬಡಿಸಿ ಕೈತುತ್ತು ತಿಂದರು. ಅಭಿಮಾನಿಗಳ ನಟ ದುನಿಯಾ ವಿಜಯ್‌ಗೆ ಕೈತುತ್ತು ತಿನ್ನಿಸಿ ನಟನ ಸಿಂಪ್ಲಿ ಸಿಟಿ ಕಂಡು ಮತ್ತಷ್ಟು ಖುಷಿಯಾದ್ರು. ವೇದಿಕೆ ನಿರ್ಮಾಣ ಮಾಡಿದ್ದ ಸುತ್ತಲೂ ಭೀಮ ಸಿನಿಮಾ ಪೋಸ್ಟರ್‌ಗಳು ರಾರಾಜಿಸುತ್ತಿದ್ದು, ದುನಿಯಾ ವಿಜಿ ಸಿನಿಮಾ ಹಾಡುಗಳಿಗೆ ಅಭಿಮಾನಿಗಳು ಹುಚ್ಚೆದ್ದು ಕುಣಿದಾಡಿದ್ರು. ಪ್ರತಿವರ್ಷವು ಸಹ ಹುಟ್ಟೂರಿನಲ್ಲಿಯೇ ಹುಟ್ಟುಹಬ್ಬವನ್ನ ಆಚರಣೆ ಮಾಡಿಕೊಂಡು ಅನ್ನಕೊಟ್ಟ ಅಭಿಮಾನಿಗಳು ಊಟವನ್ನ ಹಾಕುವ ಮೂಲಕ ಅವರ ಜೊತೆ ಹುಟ್ಟು ಹಬ್ಬವನ್ನ ಆಚರಿಸಿಕೊಳ್ಳಬೇಕು ಎಂದು ತಿರ್ಮಾನಿಸಿದ್ದೇನೆ. ಇದು ತಂದೆತಾಯಿ ಇರುವಂತ ಪುಣ್ಯ ಸ್ಥಳ ಹಾಗಾಗಿ ಮುಂದಿನ ದಿನಗಳಲ್ಲಿ ಬರ್ತಡೇ ಸೆಲೆಬ್ರೇಷನ್ ಹುಟ್ಟೂರು ಕುಂಬಾರನಹಳ್ಳಿಯಲ್ಲಿ ಆಗುತ್ತದೆ ಎಂದು ದುನಿಯಾ ವಿಜಿ ಸಂತಸ ಹಂಚಿಕೊಡರು.

ಹನುಮ ವೇಷ ಧರಿಸಿ ಬಂದ ಅಭಿಮಾನಿಯನ್ನ ಕಂಡ ವಿಜಿ ಹತ್ತಿರಕ್ಕೆ ಕರೆದು ಬ್ಯಾರಿಕೇಡ್ ಮೇಲೆ ಕೂರಿಸಿಕೊಂಡು ಹಾರ ಹಾಕಿ ಸನ್ಮಾನ ಮಾಡಿದ್ರು. ಅದೇ ರೀತಿ ವಿಕಲಚೇತನ ಅಭಿಮಾನಿಯೋರ್ವ ಕೈನಲ್ಲಿ ಹಾರ ಹಿಡಿದುಕೊಂಡು ವಿಜಿ ಹಾಕಲು ಬಂದಾಗ ತಡೆದು ಅದೇ ಹಾರವನ್ನ ಹಾಕಿದ್ರು. ಇನ್ನೂ ಆನೇಕಲ್ ಪಟ್ಟಣದ ಮಣಿ ಎಂಬ ಅಭಿಮಾನಿ ಮೈತುಂಬ ದುನಿಯಾ ವಿಜಿ ಟ್ರಾಟೂ ಹಾಕಿಸಿಕೊಂಡು ಬಂದು ನೆಚ್ಚಿನ ನಟನಿಗೆ ಬರ್ತಡೇ ವಿಶ್ ಮಾಡಿದ್ರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannad

Please follow and like us:

Leave a Reply

Your email address will not be published. Required fields are marked *

Next Post

ಚಿರತೆ ದಾಳಿಯಿಂದ ಮಹಿಳೆ ಸಾವಿಗೀಡಾದ ಹಿನ್ನಲೆ.

Sat Jan 21 , 2023
ಮೈಸೂರು ಜಿಲ್ಲೆ ಟಿ ನರಸೀಪುರ ಕನ್ನಾಯಕನಹಳ್ಳಿಯಲ್ಲಿ ಚಿರತೆ ದಾಳಿಯಿಂದ ಮಹಿಳೆ ಸಾವಿಗೀಡಾದ ಹಿನ್ನಲೆ.ಕನ್ನನಾಯಕನಹಳ್ಳಿ ಗ್ರಾಮದ ಮೃತ ಮಹಿಳೆ ಮನೆಗೆ ಕಾಂಗ್ರೆಸ್ ಯುವಮುಖಂಡ ಸುನಿಲ್ ಬೋಸ್ ಭೇಟಿ. ಸಿದ್ದಮ್ಮ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಸುನಿಲ್ ಬೋಸ್. ನಮ್ಮ ನರಸೀಪುರ ತಾಲ್ಲೂಕಿನಲ್ಲಿ ಚಿರತೆ ದಾಳಿಯಿಂದ ಇಲ್ಲಿಯ ತನಕ 3ಜನ ಸಾವನ್ನಪ್ಪಿದ್ದರೆ.3ಜನರ ಸಾವಿಗೆ ಅರಣ್ಯ ಇಲಾಖೆ ಮತ್ತು ಶಾಸಕರ ನಿರ್ಲಕ್ಷವೆ ಕಾರಣ. ನರಸೀಪುರ ತಾಲ್ಲೂಕಿನ ಎಂ.ಎಲ್.ಹುಂಡಿ ಗ್ರಾಮದಲ್ಲಿ ಮೊದಲ ಬಾರಿಗೆ ಚಿರತೆ ದಾಳಿ ಮಾಡಿದಾಗ […]

Advertisement

Wordpress Social Share Plugin powered by Ultimatelysocial