ರಾಮ್ ಚರಣ್ ಪತ್ನಿಗೆ ಆಘಾತದ ಸುದ್ದಿ.

 

 

 

ಅಜ್ಜಿ ಅಂದ್ರೆ ಎಲ್ಲರಿಗೂ ಅಚ್ಚುಮೆಚ್ಚು ಅದರಲ್ಲೂ ಹೆಣ್ಣು ಮಕ್ಕಳಿಗೆ ಸ್ವಲ್ಪ ಹೆಚ್ಚಾಗಿ ಇಷ್ಟವಿರುತ್ತದೆ.

ಮೆಗಾ ಸೊಸೆ, ರಾಮ್ ಚರಣ್ ಪತ್ನಿ ಉಪಾಸನಾ ಕಾಮಿನೇನಿ ಅಜ್ಜಿ ತೀರಿಕೊಂಡರು ನೋವಿನಲ್ಲಿದ್ದಾರೆ.

ಅಜ್ಜಿ ಸಾವಿನ ಸುದ್ದಿ ಕೇಳಿ ಅಘಾತಗೊಂಡಿರುವ ಉಪಾಸನಾ, ಅಜ್ಜಿ ನೆನೆದು ಭಾವುಕರಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅಜ್ಜಿ ಜೊತೆಗಿನ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ನಾವು ಅಜ್ಜಿಗೆ ಕೊನೆಯವರೆಗೂ ಕೃತಜ್ಞರಾಗಿರಬೇಕು ಎಂದ್ರು. ಹೆಮ್ಮೆ ಪಡುವಂತೆ ಗೌರವ ಮತ್ತು ಪ್ರೀತಿಯಿಂದ ಜೀವನವನ್ನು ನಡೆಸಿದ್ದಾರೆ.

ನನ್ನ ಅಜ್ಜಿಯನ್ನು ನೋಡಿ ನಾನು ಜೀವನವನ್ನು ಹೇಗೆ ನಡೆಸಬೇಕು ಎಂದು ಕಲಿತಿದ್ದೇನೆ. ಅವರು ನನ್ನನ್ನು ಬೆಳೆಸಿದ್ದಾರೆ. ಜೀವನದಲ್ಲಿ ಪಾಠ ಜೊತೆಗೆ ಖುಷಿಯಾಗಿ ಬದುಕುವುದನ್ನು ಹೇಳಿಕೊಟ್ಟಿದ್ದಾರೆ.

ನನ್ನ ಅಜ್ಜಿಯೊಂದಿಗೆ ನಾನು ಪಡೆದ ಪ್ರೀತಿಯ ಅನುಭವವನ್ನು ನನ್ನ ಮಕ್ಕಳಿಗೂ ಸಿಗುವಂತೆ ನೋಡಿಕೊಳ್ಳುತ್ತೇನೆ ಎಂದು ಉಪಾಸನಾ ಭಾವನಾತ್ಮಕ ಪೋಸ್ಟ್ ಮಾಡಿದ್ದಾರೆ.

ರಾಮ್ ಚರಣ್ ಹಾಗೂ ಉಪಾಸನಾ ಮೊದಲ ಮಗುವಿನ ನಿರೀಕ್ಷೆಯಲಿದ್ದಾರೆ. ಈ ಸುದ್ದಿಯನ್ನು ಮೆಗಾ ಸ್ಟಾರ್ ಚಿರಂಜೀವಿ ಅವ್ರೇ ಹಂಚಿಕೊಂಡಿದ್ರು. ಉಪಾಸನಾ ಗರ್ಭಿಣಿಯಾದಾಗಿನಿಂದ ರಾಮಚರಣ್ ಮನೆಯಲ್ಲಿ ಸಂತಸ ಮನೆಮಾಡಿತ್ತು. ಈಗ ಉಪಾಸನಾ ಅಜ್ಜಿಯ ಸಾವಿನಿಂದ ನೊಂದಿದ್ದಾರೆ.

ರಾಮ್ ಚರಣ್-ಉಪಾಸನಾ ಮದುವೆಯಾಗಿ 10 ವರ್ಷಗಳಾಗಿದ್ದು, ಇದೀಗ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ಉಪಾಸನಾ ಅಪೋಲೋ ಆಸ್ಪತ್ರೆಯ ಕೆಲಸಗಳನ್ನು ಸಹ ನೋಡಿಕೊಳ್ತಾರೆ. ಜೊತೆಗೆ ಬಿ ಪಾಸಿಟಿವ್ ಎಂಬ ಪತ್ರಿಕೆಯ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಅನೇಕ ಸಮಾಜ ಸೇವೆ ಕೆಲಸಗಳನ್ನು ಉಪಾಸನಾ ಗುರುತಿಸಿಕೊಂಡಿದ್ದಾರೆ.

RRR ಸಿನಿಮಾ ಯಶಸ್ಸಿನ ಬಳಿಕ ರಾಮ್ ಚರಣ್, ಸದ್ಯ ಶಂಕರ್ ನಿರ್ದೇಶನದಲ್ಲಿ ಪ್ಯಾನ್ ಇಂಡಿಯಾ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಕಿಯಾರಾ ಅಡ್ವಾಣಿ ನಾಯಕಿಯಾಗಿ ನಟಿಸುತ್ತಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಭತ್ಯೆ, ನಿವೃತ್ತಿ ವಯಸ್ಸು, ಪಿಂಚಣಿ ಪರಿಶೀಲನೆ.

Mon Jan 23 , 2023
ರಚನೆ ಮಾಡಿರುವ 7ನೇ ರಾಜ್ಯ ವೇತನ ಆಯೋಗ ತನ್ನ ಪರಿಶೀಲನಾರ್ಹ ಅಂಶಗಳ ಮೇಲೆ ವರದಿಯನ್ನು ಸಲ್ಲಿಸಬೇಕಾಗಿದೆ.ಈ ಉದ್ದೇಶಕ್ಕಾಗಿ ಆಯೋಗವು ಮೊದಲ ಹಂತದಲ್ಲಿ ಸಾರ್ವಜನಿಕರು, ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು, ಮಾನ್ಯತೆ ಪಡೆದ ನೌಕರರ ಸಂಘಗಳು, ವಿಶ್ವವಿದ್ಯಾಲಯಗಳು, ಸ್ಥಳೀಯ ಸಂಸ್ಥೆಗಳು ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳಿಂದ ಪ್ರತಿಕ್ರಿಯೆಗಳನ್ನು ಆಹ್ವಾನಿಸಿ ಪ್ರಶ್ನಾವಳಿ ಪ್ರಕಟಿಸಿದೆ. ಸಂಸತ್ ಸದಸ್ಯರು, ವಿಧಾನಸಭೆ ಸದಸ್ಯರು, ವಿಧಾನ ಪರಿಷತ್ತಿನ ಸದಸ್ಯರು ಮತ್ತು ಇತರೆ ಪ್ರಮುಖ ಚುನಾಯಿತ ಪ್ರತಿನಿಧಿಗಳಿಂದಲೂ ಹಾಗೂ ಸರ್ಕಾರದ […]

Advertisement

Wordpress Social Share Plugin powered by Ultimatelysocial