ಅಂತಾರಾಷ್ಟ್ರೀಯ ಗಾಳಿ ಪಟ ಉತ್ಸವಕ್ಕೆ ಚಾಲನೆ..

 

ಹುಬ್ಬಳ್ಳಿ ನಗರದ ಶ್ರೀ ವೆಂಕಟೇಶ್ವರ ದೇವಸ್ಥಾನ ಎದುರಿನ ಮೈದಾನದಲ್ಲಿಂದು ಅಂತಾರಾಷ್ಟ್ರೀಯ ಗಾಳಿ ಪಟ ಉತ್ಸವಕ್ಕೆ ಕೇಂದ್ರ ಗಣಿ ಕಲ್ಲಿದ್ದಲು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಚಾಲನೆ ನೀಡಿದರು.

ಇಂದು ಮತ್ತು ನಾಳೆ ನಡೆಯಲಿರುವ ಈ ಉತ್ಸವ ಕ್ಷಮತಾ ಸೇವಾ ಸಂಸ್ಥೆ ವತಿಯಿಂದ ಆಯೋಜನೆ ಮಾಡಲಾಗಿದ್ದು, ದೇಶ ವಿದೇಶಗಳಿಂದ ಗಾಳಿಪಟ ಪಟುಗಳು ಉತ್ಸವದಲ್ಲಿ ಭಾಗವಹಿಸಲಿದ್ದು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಾಡಿನ ಹೆಸರಾಂತ ಕಲಾವಿದರು ಒಂದೇ ವೇದಿಕೆಯಲ್ಲಿ ಜನರನ್ನ ಮನರಂಜನೆ ಕಾರ್ಯಕ್ರಮ ಸಹ ನಡೆಯಲಿವೆ. ದೇಸಿ ಕ್ರೀಡಾ ಸ್ಪರ್ಧೆಗಳು, ಶಾಲಾ,ಕಾಲೇಜು ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ, ಮಹಿಳೆಯರಿಗೆ ಕ್ರೀಡೆ, ಸಂಗೀತ ಸ್ಪರ್ಧೆ, ಆಹಾರ ಉತ್ಸವ ಹಾಗೂ ಪ್ರದರ್ಶನ ಕೂಡ ಆಯೋಜನೆ ಮಾಡಲಾಗಿದೆ.

ಎರಡು ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮದಲ್ಲಿ ದೇಸಿ ಕ್ರೀಡಾ ಸ್ಪರ್ಧೆಗಳು, ಶಾಲಾ – ಕಾಲೇಜು ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ, ಮಹಿಳೆಯರಿಗೆ ಕ್ರೀಡೆ – ಸಂಗೀತ ಸ್ಪರ್ಧೆ, ಆಹಾರ ಉತ್ಸವ ಹಾಗೂ ಪ್ರದರ್ಶನ ಕೂಡ ನಡೆಯಲಿದ್ದು
ಉತ್ಸವದಲ್ಲಿ ಅಮೆರಿಕ, ಆಸ್ಟ್ರೇಲಿಯಾ, ಮಲೇಷ್ಯಾ, ಬೆಲ್ಜಿಯಂ, ಕೆನಡ, ಟರ್ಕಿ ಸೇರಿದಂತೆ 15 ರಾಷ್ಟ್ರಗಳ ಗಾಳಿ ಪಟ ಸ್ಪರ್ಧಿಗಳು, ಗುಜರಾತ್, ಮಹಾರಾಷ್ಟ್ರದ ಸ್ಪರ್ಧಿಗಳ ಗಾಳಿ ಪಟಗಳು ಭಾಗವಹಿಸಿದ್ದಾರೆ.

ಬಣ್ಣ ಬಣ್ಣದ ಹಾಗೂ ಆಕರ್ಷಕ ವಿನ್ಯಾಸದ ಗಾಳಿಪಟಗಳು ಹಾರಾಡಲಿವೆ. ಎಲ್‌ಇಡಿ ಬಲ್ಡ್‌ಗಳಿರುವ ಗಾಳಿಪಟಗಳು ರಾತ್ರಿ ವೇಳೆ ಬಾನಿಗೇರಲಿವೆ. ನೂರಾರು ಶಾಲಾ ಕಾಲೇಜು ವಿದ್ಯಾರ್ಥಿಗಳು ಈ ಉತ್ಸವದಲ್ಲಿ ಭಾಗವಹಿಸಿದ್ದಾರೆ ‌ ಇನ್ನು ಉದ್ಘಾಟನೆಗೆ ಮುನ್ನ ವಿದ್ಯಾರ್ಥಿಗಳಿಗಾಗಿ ಚಿತ್ರಕಲೆ ಸ್ಪರ್ಧೆ ಆಯೋಜಿಸಲಾಗಿತ್ತು. ಸಂಜೆ ವಿವಿಧ ಮನರಂಜನಾ ಕಾರ್ಯಕ್ರಮಗಳು ಸಹ ನಡೆಯಲಿದ್ದು
ಮಕ್ಕಳು ಹಾಗೂ ಆಸಕ್ತರಿಗೆ ಉಚಿತವಾಗಿ ಗಾಳಿಪಟ ವಿತರಿಸಲಾಗುವುದು. ಎರಡೂ ದಿನಗಳ ಕಾಲ ಕೋರ್ಟ್ ವೃತ್ತದಿಂದ ಉತ್ಸವದ ಸ್ಥಳಕ್ಕೆ ಬಸ್ ವ್ಯವಸ್ಥೆ ಇದೆ. ಬೆಳಿಗ್ಗೆ ಉಪಾಹಾರ, ಮಧ್ಯಾಹ್ನ ಊಟ ಮತ್ತು ಸಂಜೆ ಉಪಾಹಾರದ ವ್ಯವಸ್ಥೆ ಮಾಡಲಾಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannad

Please follow and like us:

Leave a Reply

Your email address will not be published. Required fields are marked *

Next Post

ವಾಹನ ಖರೀದಿದಾರರಿಗೆ ಗುಡ್ ನ್ಯೂಸ್.

Sun Jan 22 , 2023
ಎಲೆಕ್ಟ್ರಿಕ್ ವಾಹನಗಳ ತಯಾರಿಕಾ ಕಂಪನಿ ಏಥರ್ ವಾಹನ ಖರೀದಿದಾರರಿಗೆ ಗುಡ್ ನ್ಯೂಸ್ ನೀಡಿದೆ. ಸೀಮಿತ ಅವಧಿಗೆ ಈ ಅವಕಾಶ ಇರಲಿದ್ದು, ಜೊತೆಗೆ ಎರಡು ವರ್ಷಗಳ ಕಾಲ ಹೆಚ್ಚುವರಿ ವಾರೆಂಟ್ ಕೂಡ ಸಿಗಲಿದೆ. ಏಥರ್ 450X ಈಗ ನಾಲ್ಕು ಹೊಚ್ಚಹೊಸ ಬಣ್ಣಗಳಲ್ಲಿ ಲಭ್ಯವಿದ್ದು, ಐದು ವರ್ಷಗಳ ಬ್ಯಾಟರಿ ವಾರೆಂಟ್ ಸಿಗಲಿದೆ. ಜೊತೆಗೆ ಸೀಟಿನ ವಿನ್ಯಾಸ ಬದಲಿಸಲಾಗಿದ್ದು, ಚಾಲಕರಿಗೆ ಪ್ರಯಾಣ ಮತ್ತಷ್ಟು ಸುಖಕರವಾಗಿರಲಿದೆ. ಈ ವಾಹನದ ಎಕ್ಸ್ ಶೋರೂಮ್ ಬೆಲೆ (ಬೆಂಗಳೂರು) 1,35,452 […]

Advertisement

Wordpress Social Share Plugin powered by Ultimatelysocial