ಮೈಸೂರಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ.

ಮೊದಲು ಸಿದ್ದರಾಮಯ್ಯ ತಮ್ಮ ಸರ್ಕಾರದ ರಿಪೋರ್ಟ್ ಕಾರ್ಡ್ ಕೊಡಲಿ. ಅವರು ಎಷ್ಟು ಭರವಸೆ ಕೊಟ್ಟಿದ್ದರು, ಎಷ್ಟು ಇಡೇರಿಸಿದ್ದಾರೆ ಎಂಬುದನ್ನ ಅವರು ಹೇಳಿಲ್ಲ. ನಮ್ಮ ಕಾಲದಲ್ಲಿ ಕೋವಿಡ್ ಬಂತು, ಹೀಗಾಗಿ ಒಂದಿಷ್ಟು ವ್ಯತ್ಯಾಸಗಳಾಗಿದೆ. ಆದರೂ ನಾವು ಕೆಲವು ಮಾರ್ಪಡುಗಳೊಂದಿಗೆ ಜನರಿಗೆ ಸ್ಪಂದನೆ ಮಾಡಿದ್ದೇವೆ. ಇವತ್ತು ಬಿಡುಗಡೆ ಮಾಡಿರುವ ಪ್ರಾಣಳಿಕೆಯನ್ನ ಕಾರ್ಯಗತ ಮಾಡಲು ಎಲ್ಲಾ ಪ್ಲಾನ್ ಮಾಡಿಕೊಂಡಿದ್ದೇವೆ. ಈ ಪ್ರಣಾಳಿಕೆಯಿಂದ ನಮ್ಮ ಸ್ಥಾನ ಗಳ ಸಂಖ್ಯೆಯೂ ಹೆಚ್ಚಾಗ ಬಹುದು.

ಮೋದಿ ಅಮಿತ್ ಶಾ ಬಂದ ಮೇಲೆ ನಮ್ಮ ಸಂಖ್ಯೆ ಸಹಜವಾಗಿಯೇ ಹೆಚ್ಚಾಗುತ್ತಿದೆ. ವರುಣದಲ್ಲಿ ಹತಾಶೆಯಿಂದ ಕಾಂಗ್ರೆಸ್ ನವರು ಗಲಾಟೆ ಮಾಡಿಸುತ್ತಿದ್ದಾರೆ. ಮೊದಲೆಲ್ಲಾ ಬಹಳ ಸುಲಭವಾಗಿ ಗೆದ್ದು ಬಿಡುತ್ತಿದ್ದರು.
ಈ ಬಾರಿ ಪರಿಸ್ಥಿತಿ ಅವರಿಗೆ ಇಲ್ಲ. ಹೀಗಾಗಿ ಇತರಹದ ಗಲಾಟೆ ಹೆಚ್ಚಾಗುತ್ತಿವೆ. ದಿನದಿನಕ್ಕೂ ಬಿಜೆಪಿ ಪರವಾದ ವಾತಾವರಣ ಅಲ್ಲಿ ಸೃಷ್ಟಿಯಾಗುತ್ತಿದೆ. ಜನರನ್ನ ಭಯ ಬೀಳಿಸಿ ಮತ ಹಾಕದಂತೆ ತಡೆಯುವುದು ಕಾಂಗ್ರೆಸ್ ನ ಉದ್ದೇಶ. ಕಾಂಗ್ರೆಸ್ ಈ ಹಳೇ ಚಾಳಿ ಈಗ ವರ್ಕ್ ಆಗುವುದಿಲ್ಲ. ಜನ ನಿರ್ಭಯವಾಗಿ ಬಂದು ಮತ ಹಾಕುತ್ತಾರೆ. ನಾನು ಕೂಡ ಮುಂದಿನ ದಿನಗಳಲ್ಲಿ ವರುಣದಲ್ಲಿ ಪ್ರಚಾರ ಮಾಡುತ್ತೇನೆ. ಮೈಸೂರಿನಲ್ಲಿ ಸಿಎಂ ಹೇಳಿಕೆ.

ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ಆಕ್ಷೇಪರ್ಹ ಪದ ಬಳಕೆ ವಿಚಾರ. ಪ್ರಿಯಾಂಕ ಅವರಿಂದ ಇ‌ನ್ನೇನನ್ನು ನೀರಿಕ್ಷೆ ಮಾಡಲು ಸಾಧ್ಯ. ಅವರ ಈ ಹಿಂದೆ ಮಾತನಾಡಿ ಆ ಮಾತನ್ನ ವಾಪಸ್ ಪಡೆದಿದ್ದರು. ಅವರಿಂದ ಇನ್ನೇನು ನೀರಿಕ್ಷೆ ಮಾಡಲು ಸಾಧ್ಯ.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬಾರಿ ಬಿಗಿ ಬಂದೋಬಸ್ತನೂಂದಿಗೆ ರೋಡ್ ಶೋ..!

Mon May 1 , 2023
ಎಸಿಸಿ ಪ್ರಧಾನ ಕಾರ್ಯದರ್ಶಿ, ಪಕ್ಷದ ಅದಿನಾಯಕ ಪ್ರಿಯಾಂಕ ಗಾಂಧಿ ವಾದ್ರ ಹಾರೂಗೇರಿ ಪಟ್ಟಣಕ್ಕೆ ಆಗಮನ. ಚಾಪರ ವಿಮಾನದ ಮೂಲಕ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಾರೂಗೇರಿ ಅಭಾಜೀ ಕ್ರೀಡಾಂಗಣಕ್ಕೆ ಬಂದ ಕಾಂಗ್ರೆಸ್ ಪಕ್ಷದ ನಾಯಕಿ ಪ್ರಿಯಾಂಕ ವಾದ್ರ,  ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮಹೇಂದ್ರ ತಮ್ಮನವರ ಪರವಾಗಿ ಮತಯಾಚನೆಗೆ ರೋಡ್ ಶೋ ದಲ್ಲಿ ಭಾಗಿಯಾದ ಪ್ರಿಯಾಂಕ ಗಾಂಧಿ ವಾದ್ರ; 45 ವರ್ಷಗಳ ಹಿಂದೆ ಮಾಜಿ ಪ್ರಧಾನಿ ಶ್ರೀಮತಿ ಇಂದಿರಾಗಾಂಧಿ ಅವರು ಬಂದಿರುವುದು […]

Advertisement

Wordpress Social Share Plugin powered by Ultimatelysocial