ವಿದ್ಯಾರ್ಥಿಗಳೇ ಗಮನಿಸಿ, ಪಿಯುಸಿ ಪರೀಕ್ಷಾ ನೋಂದಣಿ ದಿನಾಂಕ ವಿಸ್ತರಣೆ.

ದ್ವಿತೀಯ ಪಿಯು ವೇಳಾಪಟ್ಟಿ (Time Table) ಇತ್ತೀಚಿಗಷ್ಟೆ ಬಿಡುಗಡೆಯಾಗಿದೆ (Released) ಇದರ ಹಿನ್ನೆಲೆಯಲ್ಲೇ ಪಿಯುಸಿ ಪರೀಕ್ಷೆಗೆ ಸಂಬಂಧಿಸಿದ ಇನ್ನೊಂದು ಮಹತ್ವದ ಮಾಹಿತಿ ಹೊರಬಿದ್ದಿದೆ. ಅದೇನೆಂದರೆ ಪಿಯುಸಿ ಪರೀಕ್ಷೆಗೆ ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಣೆಯಾಗಿದೆ.

ಪಿಯುಸಿ ಪರೀಕ್ಷೆ (PUC Exam) ಬರೆಯುವ ವಿದ್ಯಾರ್ಥಿಗಳು ಈಗ ತಮ್ಮ ಹೆಸರನ್ನು ನೋಂದಣಿ ಮಾಡಿಕೊಳ್ಳಬಹುದು. ಅದರಲ್ಲೂ ಅನಿತ್ತೀರ್ಣಾರಾದವರು ಹಾಗೂ ಫಲಿತಾಂಶ (Result) ತಿರಸ್ಕರಿಸಿದ ವಿದ್ಯಾರ್ಥಿಗಳು (Students) ಈಗ ಅರ್ಜಿ ಸಲ್ಲಿಸಬಹುದು.

ಈ ಮುನ್ನ ಖಾಸಗಿ ಅಭ್ಯರ್ಥಿಗಳು, ಅನುತ್ತೀರ್ಣ ಹಾಗೂ ಫಲಿತಾಂಶ ತಿರಸ್ಕರಿಸಿದ ವಿದ್ಯಾರ್ಥಿಗಳ ನೋಂದಣಿ ಮತ್ತು ಪರೀಕ್ಷಾ ಶುಲ್ಕ ಪಾವತಿ ಮಾಡಲು ನವೆಂಬರ್ 28 ರವರೆಗೆ ಅವಕಾಶ ನೀಡಿತ್ತು. ಈಗ ಈ ದಿನಾಂಕವನ್ನು ಪೋಷಕರು ಹಾಗೂ ವಿದ್ಯಾರ್ಥಿಗಳ ಮನವಿ ಮೇರೆಗೆ ಡಿಸೆಂಬರ್ 12ರ ವರೆಗೆ ಮುಂದೂಡಿದೆ.ಮಾರ್ಚ್ 2023ರಲ್ಲಿ ನಡೆಯಲಿರುವ ದ್ವಿತೀಯ ಪಿಯುಸಿ 2023ರ ವಾರ್ಷಿಕ ಪರೀಕ್ಷೆಗೆ ಖಾಸಗಿ ಅಭ್ಯರ್ಥಿಗಳ ವಿದ್ಯಾರ್ಥಿಗಳ ನೋಂದಣಿಗೆ ಅವಧಿ ವಿಸ್ತರಿಸಲಾಗಿದೆ. ಇದರ ಜೊತೆಗೆ ಅನುತ್ತೀರ್ಣ ಹಾಗು ಫಲಿತಾಂಶ ತಿರಸ್ಕರಿಸಿದ ವಿದ್ಯಾರ್ಥಿಗಳು ಪರೀಕ್ಷಾ ಶುಲ್ಕ ಸಂದಾಯ ಮಾಡಲು ಕೊನೆಯ ದಿನಾಂಕವನ್ನು ವಿಸ್ತರಿಸಲಾಗಿದೆ.

ಈ ಮುನ್ನ ಖಾಸಗಿ ಅಭ್ಯರ್ಥಿಗಳು, ಅನುತ್ತೀರ್ಣ ಹಾಗೂ ಫಲಿತಾಂಶ ತಿರಸ್ಕರಿಸಿದ ವಿದ್ಯಾರ್ಥಿಗಳ ನೋಂದಣಿ ಮತ್ತು ಪರೀಕ್ಷಾ ಶುಲ್ಕ ಪಾವತಿಸಲು ನವೆಂಬರ್ 28 ರವರೆಗೆ ಅವಕಾಶ ನೀಡಲಾಗಿತ್ತು. ಈಗ ಈ ದಿನಾಂಕವನ್ನು ಪೋಷಕರು ಹಾಗೂ ವಿದ್ಯಾರ್ಥಿಗಳ ಮನವಿ ಮೇರೆಗೆ ಡಿಸೆಂಬರ್ 12ರ ವರೆಗೆ ವಿಸ್ತರಿಸಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಎಂಗೇಜ್ಮೆಂಟ್‌ ಬಳಿಕ ಹರಿಪ್ರಿಯಾ ಮೊದಲ ಫೋಟೋ - ಫೋಟೋಗೆ ಕಮೆಂಟ್ಗಳ ಸುರಿಮಳೆ

Sat Dec 3 , 2022
ಸ್ಯಾಂಡಲ್‌ವುಡ್‌ ನ ಬ್ಯೂಟಿಫುಲ್‌ ಹೀರೋಯಿನ್‌ ಹರಿಪ್ರಿಯಾ ಹಾಗೂ ಕಂಚಿನ ಕಂಠದ ನಟ ವಸಿಷ್ಠಸಿಂಹ ಇಬ್ಬರೂ ಸದ್ದಿಲ್ಲದೇ ಎಂಗೇಜ್ಮೆಂಟ್‌ ಮಾಡಿಕೊಂಡಿದ್ದಾರೆ. ಸ್ಯಾಂಡಲ್ವುಡ್ನಲ್ಲಿ ಮದುವೆ ಪರ್ವ ಆರಂಭವಾದಂತೆ ಕಾಣಿಸ್ತಾಇದೆ. ಇತ್ತೀಚಿನ ದಿನಗಳಲ್ಲಿ ನಮ್ಮ ಇಂಡಸ್ಟ್ರಿಯ ಹಲವಾರು  ಜೋಡಿಗಳು ನಿಶ್ಚಿತಾರ್ಥ ಮಾಡಿಕೊಳ್ಳುತ್ತಿದ್ದಾರೆ. ಅದರಲ್ಲೂ ಯಾರಿಗೂ ಹೇಳದೇ, ಇನ್ನು ತಮ್ಮ ಪ್ರೀತಿಯ ಬಗ್ಗೆ ಒಂದು ಸುಳಿವೂ ನೀಡದೇ ವಸಿಷ್ಠ, ಹರಿಪ್ರಿಯಾ ನಿಶ್ಚಿತಾರ್ಥ ಮಾಡಿಕೊಂಡಿದ್ದು ಅಭಿಮಾನಿಗಳಿಗೆ ಖುಷಿಯ ಜೊತೆಗೆ ಶಾಕ್‌ ನೀಡಿದೆ. ಕೆಲದಿನಗಳ ಹಿಂದಷ್ಟೇ ದುಬೈ ಪ್ರವಾಸ […]

Advertisement

Wordpress Social Share Plugin powered by Ultimatelysocial