ಸಮರ್ಪಕ ಬಸ್ ವ್ಯವಸ್ಥೆಗೆ ಬೇಸತ್ತ ವಿದ್ಯಾರ್ಥಿಗಳು !

ಸವದತ್ತಿ : ತಾಲೂಕಿನ ಚಿಕ್ಕ ಉಳ್ಳಿಗೇರಿ ಗ್ರಾಮದಿಂದ ಸವದತ್ತಿ, ಧಾರವಾಡದ ಶಾಲಾ,ಕಾಲೇಜು ಹಾಗೂ ಮಹಾವಿದ್ಯಾಲಯಕ್ಕೆ ತೆರಳಲು ಸೂಕ್ತ ಬಸ್ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿಗಳು ನಿತ್ಯ ಪರದಾಡುತ್ತಿದ್ದಾರೆ.

ಸವದತ್ತಿಯಿಂದ 15 ಕಿಮೀ ದೂರವಿರುವ ಚಿಕ್ಕಉಳ್ಳಿಗೇರಿ ಗ್ರಾಮದಲ್ಲಿ ಪ್ರತಿದಿನ 50 ವಿದ್ಯಾರ್ಥಿಗಳು ಶಿಕ್ಷಣ ಪಡೆಯಲು ಧಾರವಾಡ ಹಾಗೂ ಸವದತ್ತಿಗೆ ತೆರಳುತ್ತಾರೆ. ಸವದತ್ತಿಗೆ ತೆರಳಲು ಮು.8:30 ಸಾ.5:30 ರಾ.8:30 ಸೇರಿ ಮೂರು ಬಸ್ ಇದ್ದರೆ ಧಾರವಾಡಕ್ಕೆ ತೆರಳಲು ಮು.6:30, 9:30 ಮ.3.30 ಸಾ.5:30ಕ್ಕೆ ಸೇರಿ ನಾಲ್ಕು ಬಸ್ ಗಳು ಓಡಾಡುತ್ತವೆ. ಈ ಬಸ್ಸುಗಳು ಸಹ ಸಮಯಕ್ಕೆ ಬಾರದೆ ಇರುವ ಕಾರಣ ವಿದ್ಯಾರ್ಥಿಗಳು ಸರಿಯಾಗಿ ತರಗತಿಗೆ ಹಾಜರಾಗದೆ ಶಿಕ್ಷಣದದಿಂದ ವಂಚಿತರಾಗುವ ಜೊತೆಗೆ ಹಾಜರಾತಿಯ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.

ಈ ವ್ಯವಸ್ಥೆಗೆ ವಿದ್ಯಾರ್ಥಿಗಳು ಬೇಸತ್ತು ಹೋಗಿದ್ದು ಗೊಂದಲಕ್ಕೆ ಸಿಲುಕಿದ್ದಾರೆ.

ಸಮರ್ಪಕ ಬಸ್ ಇರದ ಕಾರಣ ಗ್ರಾಮದಿಂದ 2 ಕಿಮೀ ಅಂತರದಲ್ಲಿರುವ ಸವದತ್ತಿ-ಧಾರವಾಡದ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಚಿಕ್ಕಉಳ್ಳಿಗೇರಿ ಕ್ರಾಸ್ ಗೆ ವಿದ್ಯಾರ್ಥಿಗಳು ಕಾಲ್ನಡಿಗೆಯಲ್ಲಿ ಬರುತ್ತಾರೆ.

ಆದರೆ ಆ ಕ್ರಾಸ್ ಗೆ ಸವದತ್ತಿ ವಿಭಾಗದ ಬಸ್ ಹೊರತುಪಡಿಸಿ ಬೇರೆ ವಿಭಾಗದ ಯಾವುದೇ ಬಸ್ ನಿಲ್ಲುವುದಿಲ್ಲಾ ಹೀಗಾಗಿ ಪರೀಕ್ಷಾ ಸಮಯದಲ್ಲಂತೂ ತುಂಬಾ ತೊಂದರೆ ಅನುಭವಿಸುತ್ತಿದ್ದೇವೆ ಎಂದು ಅಲ್ಲಿನ ವಿದ್ಯಾರ್ಥಿಗಳು ಸೋಮವಾರ ಚಿಕ್ಕ ಉಳ್ಳಿಗೇರಿ ಬಸ್ ನಿಲ್ದಾಣದಲ್ಲಿ ಬಸ್ ವ್ಯವಸ್ಥೆ ಕುರಿತು 1ಗಂಟೆ ಕಾಲ ಧಿಕ್ಕಾರವನ್ನು ಕುಗಿದರು.

ಶಿಕ್ಷಣಕ್ಕಾಗಿ ನಿತ್ಯ 2 ಕಿಮೀ ಅಲೆದಾಟ

ಚಿಕ್ಕ ಉಳ್ಳಿಗೇರಿ ಗ್ರಾಮದ ವಿದ್ಯಾರ್ಥಿಗಳು ಶಿಕ್ಷಣ ಪಡೆಯಲು ಧಾರವಾಡ ಹಾಗೂ ಸಮದತ್ತಿ ಶಾಲಾ, ಕಾಲೇಜಿಗೆ ತೆರಳುತ್ತಾರೆ ಆದರೆ ಆ ವಿದ್ಯಾರ್ಥಿಗಳಿಗೆ ಸಮರ್ಪಕವಾಗಿ ಬಸ್ ಇರದ ಕಾರಣ ಮಳೆ, ಗಾಳಿ, ಚಳಿಯಲ್ಲಿಯೆ ಶಿಕ್ಷಣ ಪಡೆಯಲು ಗ್ರಾಮದಿಂದ 2 ಕಿಮೀ ಆಚೆಯಿರುವ ಸವದತ್ತಿ – ಧಾರವಾಡ ಮುಖ್ಯ ರಸ್ತೆಗೆ ವಿದ್ಯಾರ್ಥಿಗಳು ನಿತ್ಯ ನಡೆದುಕೊಂಡೆ ಹೋಗುವ ಅನಿವಾರ್ಯತೆ ಇದೆ. ಅಲ್ಲದೆ ಕೆಲವೊಮ್ಮೆ ರಾತ್ರಿ ಸಮಯದಲ್ಲಿ ಕಗ್ಗತ್ತಲ ಭಯದಲ್ಲಿಯೇ ನಡೆದು ಶಿಕ್ಷಣ ಪಡೆಯಬೇಕಾಗಿದೆ.

ಇಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣದ ಕಲಿಕೆಗಿಂತ ಕಾಲ್ನಡಿಗೆಯ ಶಿಕ್ಷೆ ಹೆಚ್ಚಾಗಿದೆ. ಈ ಅವ್ಯವಸ್ಥೆಯಿಂದ ಕಡ್ಡಾಯ ಶಿಕ್ಷಣದ ಕಲಿಕೆಯು ಚಿಕ್ಕ ಉಳ್ಳಿಗೇರಿ ಗ್ರಾಮದಲ್ಲಿ ಸ್ವಲ್ಪ ಮರಿಚೀಕೆ ಕಾಣುತ್ತಿದೆ.

ನೇತ್ರಾ ದೊಡಮನಿ. (ಸ್ಥಳೀಯ ನಿವಾಸಿ ಹಾಗೂ ಪತ್ರಿಕೋದ್ಯಮ ವಿದ್ಯಾರ್ಥಿ)

ಶಿಕ್ಷಣವನ್ನು ಪಡೆಯಲು ಮಳೆ,ಗಾಳಿ, ಚಳಿಯಲ್ಲಿಯೆ ನಾನು 5 ವರ್ಷದಿಂದ ಈ ಸಮಸ್ಯೆಯನ್ನು ಎದುರಿಸುತ್ತಿದ್ದೇನೆ, ಈ ಕುರಿತು ಹಲವಾರು ಬಾರಿ ಸವದತ್ತಿ ಡಿಪೋಗೆ ಮನವಿಯನ್ನು ಸಹ ಮಾಡಿಕೊಂಡಿದ್ದೇವೆ ಆದರೆ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಸ್ಥಳೀಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ನಮ್ಮನ್ನು ನಿರ್ಲಕ್ಷಿಸಿದ್ದಾರೆ. ಇವರ ನಿರ್ಲಕ್ಷತನದಿಂದಾಗಿ ಗ್ರಾಮದ ಅನೇಕ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಚಿತ್ರದುರ್ಗ: ಏಕಾದಶಿ ಉತ್ಸವದಲ್ಲಿ ಕುರಿಗಳ ಮೇಲೂ ದರ್ಶನ್ ಹೆಸರು

Tue Jul 12 , 2022
  ಅಭಿಮಾನಿಗಳು ತಮ್ಮ ಅಭಿಮಾನ ಪ್ರದರ್ಶಿಸುವ ರೀತಿ ಭಿನ್ನ-ಭಿನ್ನ. ಕೆಲವರು ಹಚ್ಚೆ ಹಾಕಿಸಿಕೊಳ್ಳುತ್ತಾರೆ, ಕೆಲವರು ಗಾಡಿಗಳ ಮೇಲೆ ಹೆಸರು ಹಾಕಿಸುತ್ತಾರೆ. ದೂರ-ದೂರಿಂದ ಮೆಚ್ಚಿನ ನಟನ ನೋಡಲು ಬರುತ್ತಾರೆ. ಇನ್ನು ಕೆಲವರು ಮೌನವಾಗಿ ಮನದಲ್ಲಿಯೇ ನಟನನ್ನು ಆರಾಧಿಸುತ್ತಾರೆ. ಕೆಲವರು ತಮ್ಮ ಮೆಚ್ಚಿನ ನಟರ ಆರೋಗ್ಯ, ಅಭಿವೃದ್ಧಿಗಾಗಿ ದೇವರ ಮೊರೆ ಹೋಗುತ್ತಾರೆ. ಅಂಥಹುದೇ ಒಂದು ಅಭಿಮಾನದ ಉದಾಹರಣೆ ಇಲ್ಲಿದೆ. ಮಧ್ಯ ಕರ್ನಾಟಕದಲ್ಲಿ ಅತಿ ಹೆಚ್ಚಾಗಿ ಕಂಡುಬರುವ ಬುಡಕಟ್ಟು ಸಮುದಾಯಗಳಲ್ಲಿ ಕಾಡುಗೊಲ್ಲ ಸಮುದಾಯದವು ಒಂದಾಗಿದೆ. […]

Advertisement

Wordpress Social Share Plugin powered by Ultimatelysocial