ಹಣದ ದುರ್ಬಳಕೆ ಆರೋಪ ಯುವಕ ಆತ್ಮಹತ್ಯೆ.!

ಹಣದ ದುರ್ಬಳಕೆ ಆರೋಪದ ಹಿನ್ನೆಲೆ ಯುವಕ ಮರಕ್ಕೆ ನೇಣು ಬಿಗಿದುಕೊಂಡು ಆತ್ಮ ಹತ್ಯೆ ಮಾಡಿಕೊಂಡಿರುವ ಘಟನೆ ಶ್ರೀನಿವಾಸಪುರ ತಾಲ್ಲೂಕಿನ ಹೊಗಳಗೆರೆ ಗ್ರಾಮದಲ್ಲಿ ನಡೆದಿದೆ. ಸಾದಿಕ್ ಪಾಷ ಎಂಬ ಭಾರತ್ ಫೈನಾನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ. ಇತ್ತೀಚಿನ ದಿನಗಳಲ್ಲಿ ಈತ ಕಂಪನಿಯ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದ ಎನ್ನಲಾಗಿದೆ. ಈ ವಿಚಾರದಲ್ಲಿ ಕಂಪನಿಯಿಂದ ದಿನೇ ದಿನೇ ಒತ್ತಡ ಹೆಚ್ಚಾದ ಹಿನ್ನೆಲೆ ಸಾದಿಕ್ ಪಾಷ ಮನನೊಂದು ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಇನ್ನು ಘಟನಾ ಸ್ಥಳಕ್ಕೆ ಧಾವಿಸಿದ ಶ್ರೀನಿವಾಸಪುರದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಮಸ್ಕಿ ಉಪಚುನಾವಣೆಯ ಅಖಾಡಕ್ಕೆ ಇಳಿದ CM BSY

Sat Apr 10 , 2021
ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲ್ಲೂಕಿನ ಮುದಗಲ್ ಪಟ್ಟಣದ ಮಸ್ಕಿ ಉಪಚುನಾವಣೆ ಪ್ರಚಾರಕ್ಕೆ ಆಗಮಿಸಿದ ಮುಖ್ಯಮಂತ್ರಿ ಬಿ. ಎಸ್  ಯಡಿಯೂರಪ್ಪ. ಸವಿತಾ ಸಮಾಜ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು, ಸವಿತಾ ಸಮಾಜಕ್ಕೆ ನಮ್ಮ ಸಕಾ೯ರ ಲಾಕ್ ಡೌನ್ ವೇಳೆ ಒಂದು ಕುಟುಂಬಕ್ಕೆ 5000 ರೂಪಾಯಿ ಕೊಟ್ಟು ಆಸರೆಯಾಗಿದೆ,ಮಹಿಳೆಯರಿಗೆ ಭಾಗ್ಯ ಲಕ್ಷ್ಮೀ  ಬಾಂಡ್ ನೀಡಿದ್ದು  ಮಸ್ಕಿ ಕ್ಷೇತ್ರಕ್ಕೆ ನಮ್ಮ ಅಭ್ಯಥಿ೯  ಪ್ರತಾಪ ಗೌಡ ಅವರಿಗೆ  20 ಸಾವಿರ ಮತಗಳ ಲೀಡ್ ನಿಂದ ಬಂದ್ರೆ ನೀವು […]

Advertisement

Wordpress Social Share Plugin powered by Ultimatelysocial