ರಾಜ್ಯದಲ್ಲಿ 4ನೇ ಕೋವಿಡ್ ಅಲೆ ಸದ್ಯಕ್ಕೆ ಬಂದಿಲ್ಲಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ

 

 

ಬೆಂಗಳೂರು,ಏ.20-ರಾಜ್ಯದಲ್ಲಿ 4ನೇ ಕೋವಿಡ್ ಅಲೆ ಸದ್ಯಕ್ಕೆ ಬಂದಿಲ್ಲವಾದರೂ ಜನರು ನಿಯಮಗಳನ್ನು ಚಾಚೂ ತಪ್ಪದೇ ಪಾಲನೆ ಮಾಡಬೇಕೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಜನತೆಗೆ ಮನವಿ ಮಾಡಿದರು.

ಕೋವಿಡ್-19 ಹೋಗೇಬಿಟ್ಟಿದೆ ಎಂದು ಯಾರೊಬ್ಬರೂ ಭಾವಿಸಬೇಡಿ. ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆ. ಆದರೆ ಕೋವಿಡ್ ಇನ್ನು ನಮ್ಮನ್ನು ಬಿಟ್ಟು ಹೋಗಿಲ್ಲ.

ಹಾಗಾಗಿ ಜನತೆ ಮಾಸ್ಕ್ ಧರಿಸುವುದು, ಲಸಿಕೆ ಹಾಕಿಸಿಕೊಳ್ಳುವುದು ಸೇರಿದಂತೆ ಸರ್ಕಾರದ ನಿಯಮಗಳನ್ನು ಪಾಲನೆ ಮಾಡಬೇಕೆಂದು ಸಲಹೆ ಮಾಡಿದರು. ಸುದ್ದಿಗಾರರ ಜೊತೆ ಮಾತನಾಡಿದ ಅವರು, ದೆಹಲಿ ಸೇರಿದಂತೆ ಮತ್ತಿತರ ಕಡೆ ಕೆಲವು ಭಾಗಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಇದು 4ನೇ ಅಲೆಯ ಮುನ್ಸೂಚನೆ ಎಂಬುದರ ಬಗ್ಗೆ ದಢಪಟ್ಟಿಲ್ಲ. ಅಧ್ಯಯನದಿಂದ ತಿಳಿಯಲಿದೆ ಎಂದು ಹೇಳಿದರು.

ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿರುವುದು ಮತ್ತು 4ನೇ ಅಲೆ ನಮಗೆ ಬಾರದಿರುವುದಕ್ಕೆ ನಾವು ತೆಗೆದುಕೊಂಡ ಪರಿಣಾಮಕಾರಿಯಾದ ನಿರ್ವಹಣೆಯಿಂದ ಇದು ಸಾಧ್ಯವಾಗಿದೆ. 4ನೇ ಅಲೆ ಬರುವುದೇ ಇಲ್ಲ ಎಂದು ಹೇಳಲು ಕಷ್ಟಸಾಧ್ಯ ಎಂದರು.

ಜನರು ಮೈಮರೆಬಾರದು. ಮಾಸ್ಕ್ ಹಾಕುವುದು, ಸಾಮಾಜಿಕ ಅಂತರ ಹಾಗೂ ಲಸಿಕೆ ತೆಗೆದುಕೊಳ್ಳುವುದನ್ನು ಮರೆಯಬಾರದು. ಮನೆಯಿಂದ ಆಚೆ ಹೋಗುವಾಗ, ಕೆಲವು ನಿರ್ದಿಷ್ಟ ಪ್ರದೇಶಗಳಲ್ಲಿ ಮಾಸ್ಕ್ ಧರಿಸುವುದರಿಂದ ಸಮಸ್ಯೆಯಾಗುತ್ತದೆಯೇ ಎಂದು ಸುಧಾಕರ್ ಪ್ರಶ್ನಿಸಿದರು.

ನಮಗೆ ಒಂದು ಮತ್ತು 2ನೇ ಕೋವಿಡ್ ಅಲೆಯಲ್ಲಿ ಸಾಕಷ್ಟು ಅನುಭವಗಳಾಗಿವೆ. ಆ ವೇಳೆ ಆಸ್ಪತ್ರೆ, ಬೆಡ್, ಔಷಧಿ ಸೇರಿದಂತೆ ಹಲವಾರು ಸಮಸ್ಯೆಗಳು ಎದುರಾದವು ನಾವು ಅತ್ಯುತ್ತಮವಾಗಿ ನಿರ್ವಹಣೆ ಮಾಡಿದ್ದರಿಂದ ನಿಯಂತ್ರಕ್ಕೆ ಬಂದಿತ್ತು.ಪ್ರತಿದಿನ ಈಗಲೂ ನಾವು ಪರೀಕ್ಷೆಗಳನ್ನು ನಡೆಸುತ್ತಿದ್ದೇವೆ. 4ನೇ ಅಲೆಯ ಮುನ್ಸೂಚನೆ ಸದ್ಯಕ್ಕೆ ಬಂದಿಲ್ಲ ಎಂದು ಸ್ಪಷ್ಟಪಡಿಸಿದರು.

10.50 ಕೋಟಿ ಲಸಿಕೆಯನ್ನು ಜನತೆಗೆ ನೀಡಿದ್ದೇವೆ. ಮಕ್ಕಳಿಗೂ ಸಹ ಗಣನೀಯವಾಗಿ ಲಸಿಕೆ ಹಾಕಲಾಗಿದೆ. ಕೆಲವರು ಈಗಲೂ ಕೂಡ 29ರಿಂದ 30 ಲಕ್ಷ ಮಂದಿ 2ನೇ ಲಸಿಕೆಯನ್ನು ಪಡೆದಿಲ್ಲ. ಅಗತ್ಯ ಇರುವವರು 3ನೇ ಲಸಿಕೆಯನ್ನು ತೆಗೆದುಕೊಳ್ಳಿ. ದಯವಿಟ್ಟು ಮೈಮರೆಯಬೇಡಿ ಎಂದು ಮನವಿ ಮಾಡಿಕೊಂಡರು.

ದೆಹಲಿಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವುದರ ಕುರಿತು ತಾಂತ್ರಿಕ ಸಲಹಾ ಸಮಿತಿ ಅಧ್ಯಯನ ನಡೆಸುತ್ತಿದೆ. ಸರ್ಕಾರ ಇದನ್ನು ಸಮರ್ಪಕವಾಗಿ ನಿರ್ವಹಣೆ ಮಾಡುತ್ತಿದೆ. ನಾವು ತಾಂತ್ರಿಕ ಸಲಹಾ ಸಮಿತಿ ಮತ್ತು ಅಕಾರಿಗಳ ಜೊತೆ ಸಭೆ ನಡೆಸುತ್ತೇವೆ. ಅವರು ನೀಡುವ ಶಿಫಾರಸ್ಸುಗಳನು ಚಾಚೂತಪ್ಪದೆ ಪಾಲನೆ ಮಾಡುತ್ತೇವೆ ಎಂದರು.

ರಾಜ್ಯದಲ್ಲಿ ಸಡಿಲಗೊಳಿಸಿರುವ ನಿಯಮಗಳನ್ನು ಮತ್ತೆ ಬಿಗಿ ಮಾಡಲಾಗುತ್ತದೆಯೇ ಎಂಬ ಪ್ರಶ್ನೆಗೆ ಇವೆಲ್ಲವೂ ಅಂದಿನ ಪರಿಸ್ಥಿತಿಗೆ ತಕ್ಕಂತೆ ತೀರ್ಮಾನಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಎಂದು ಸುಧಾಕರ್ ತಿಳಿಸಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪೂರ್ವ ಉಕ್ರೇನ್ನಲ್ಲಿರುವ ಕ್ರೆಮಿನ್ನಾವನ್ನು ಹಿಡಿತಕ್ಕೆ ತೆಗೆದುಕೊಂಡ,ರಷ್ಯ!

Wed Apr 20 , 2022
ರಷ್ಯಾದ ಪಡೆಗಳು ಪೂರ್ವ ಉಕ್ರೇನ್‌ನ ಕ್ರೆಮಿನ್ನಾ ನಗರದ ಮೇಲೆ ಹಿಡಿತ ಸಾಧಿಸಿವೆ. ಉಕ್ರೇನಿಯನ್ ಪಡೆಗಳು ನಗರದಿಂದ ಹಿಂತೆಗೆದುಕೊಂಡಿವೆ ಎಂದು ಪ್ರಾದೇಶಿಕ ಗವರ್ನರ್ ಹೇಳಿದರು. ಲುಹಾನ್ಸ್ಕ್ ಪ್ರದೇಶದ ಗವರ್ನರ್ ಸೆರ್ಹಿ ಗೈಡೈ, ಕ್ರೆಮಿನ್ನಾ ‘ಆರ್ಕ್ಸ್’ (ರಷ್ಯನ್ನರು) ನಿಯಂತ್ರಣದಲ್ಲಿದೆ ಎಂದು ಬ್ರೀಫಿಂಗ್‌ಗೆ ತಿಳಿಸಿದರು. ಅವರು ನಗರವನ್ನು ಪ್ರವೇಶಿಸಿದ್ದಾರೆ. ರಷ್ಯಾ ತಕ್ಷಣವೇ ಶಸ್ತ್ರಾಸ್ತ್ರಗಳನ್ನು ತ್ಯಜಿಸಲು ಉಕ್ರೇನಿಯನ್ ಪಡೆಗಳಿಗೆ ಹೇಳಿದೆ. ಡೊನ್ಬಾಸ್ ಯುದ್ಧದ ಗಂಟೆಗಳ ನಂತರ ಆಯಕಟ್ಟಿನ ಬಂದರು ನಗರವಾದ ಮರಿಯುಪೋಲ್ನಲ್ಲಿ ಎಚ್ಚರಿಕೆ ನೀಡಲಾಗಿದೆ. ಉಕ್ರೇನಿಯನ್ […]

Advertisement

Wordpress Social Share Plugin powered by Ultimatelysocial