ಸಚಿವ ಕೆ.ಎಸ್. ಈಶ್ವರಪ್ಪ ವಿರುದ್ಧ 40% ಕಮಿಷನ್ ಆರೋಪ!

ಬೆಂಗಳೂರು : ಸಚಿವ ಕೆ.ಎಸ್. ಈಶ್ವರಪ್ಪ ವಿರುದ್ಧ 40% ಕಮಿಷನ್ ಆರೋಪ ಮಾಡಿದ್ದ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಬೆನ್ನಲ್ಲೇ ರಾಜ್ಯ ಸರ್ಕಾರದಲ್ಲಿ ಮತ್ತೊಬ್ಬ ಸಚಿವರ ಮೇಲೆ ಭ್ರಷ್ಟಾಚಾರದ ಆರೋಪ ಕೇಳಿಬಂದಿದೆ.

ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದು, ಆರೋಗ್ಯ ಇಲಾಖೆಯ ಸಚಿವ ಡಾ.ಕೆ.

ಸುಧಾಕರ್ ಅತ್ಯಂತ ಭ್ರಷ್ಟ ಮಂತ್ರಿ, ಅವರು ಪ್ರತಿ ಕಾಮಗಾರಿಗಳಲ್ಲಿಯೂ ಶೇ. 5 ಕಮಿಷನ್ ಪಡೆಯುತ್ತಿದ್ದಾರೆ. ರಾಜ್ಯ ಸರ್ಕಾರದ ಎಲ್ಲ ಇಲಾಖೆಗಳಲ್ಲೂ ಭ್ರಷ್ಟಾಚಾರ ಮಿತಿ ಮೀರಿದೆ. ಪ್ರತಿ ಟೆಂಡರ್ ಗೂ ಕನಿಷ್ಠ ಶೇ. 5 ರಷ್ಟು ಕಮಿಷನ್ ಕೊಡಬೇಕಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ವಿರುದ್ಧ ಕಮಿಷನ್ ಆರೋಪ ಮಾಡಿದ್ದ ಗುತ್ತಿಗೆದಾರ ಸಂತೋಷ್ ಅವರದ್ದು ಆತ್ಮಹತ್ಯೆ ಅಲ್ಲ. ಅದು ಸರ್ಕಾರವೇ ಮಾಡಿರುವ ಕೊಲೆ. ಬಿಜೆಪಿ ಸರ್ಕಾರವು ರೌಡಿಸಂ ಮಾಡುತ್ತಿದೆ. ಮುಖ್ಯಮಂತ್ರಿ ಕಚೇರಿಯಲ್ಲಿಯೇ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಆರೋಗ್ಯ, ನೀರಾವರಿ ಇಲಾಖೆಯಲ್ಲ ಭ್ರಷ್ಟಾಚಾರ ಮಿತಿ ಮೀರಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ದೀಪಿಕಾ ಪಡುಕೋಣೆ ರಣಬೀರ್-ಆಲಿಯಾ ಮದುವೆಗೂ ಮುನ್ನ ಮುಂಬೈ ತೊರೆದು ಟ್ರೋಲ್!

Wed Apr 13 , 2022
ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಮದುವೆ ದೀಪಿಕಾ ಪಡುಕೋಣೆ ಟ್ರೋಲಿಂಗ್‌ಗೆ ಬಲಿಯಾಗಿದೆ. ದೀಪಿಕಾ ಮುಂಬೈನಿಂದ ಹೊರಟು ಹೋಗುತ್ತಿರುವುದನ್ನು ಗಮನಿಸಲಾಯಿತು. ಈಗ, ಇದು ವೈಯಕ್ತಿಕ ಕಾರಣಗಳಿಗಾಗಿ ಅಥವಾ ವೃತ್ತಿಪರ ಬದ್ಧತೆ ಅಜ್ಞಾತವಾಗಿ ಉಳಿದಿದೆ ಆದರೆ ಟ್ರೋಲ್‌ಗಳು ಅವಳ ಮೇಲೆ ಆಕ್ರಮಣವನ್ನು ಪ್ರಾರಂಭಿಸಿದವು. ಎಂದು ದೀಪಿಕಾ ಪಡುಕೋಣೆ ಟ್ರೋಲ್ ಮಾಡಿದ್ದಾರೆ. “ಅಸೂಯೆ” ಯಿಂದ ಅವಳು ಮುಂಬೈ ತೊರೆಯುತ್ತಿದ್ದಾಳೆ ಎಂದು ಹಲವರು ಭಾವಿಸಿದ್ದರು, ಆದರೆ ಸಾಮಾಜಿಕ ಮಾಧ್ಯಮದಲ್ಲಿ ನಟಿಯನ್ನು ರಕ್ಷಿಸಲು ಹಲವರು ಹಾರಿಹೋದರು. […]

Advertisement

Wordpress Social Share Plugin powered by Ultimatelysocial