ಸಲ್ಮಾನ್ ಖಾನ್ ಫ್ಯಾಮಿಲಿಯಲ್ಲಿ ಮತ್ತೊಂದು ಡಿವೋರ್ಸ್:

 

ಸಲ್ಮಾನ್ ಖಾನ್ ಕುಟುಂಬದಿಂದ ಬೇಸರದ ವಿಚಾರವೊಂದು ಕೇಳಿಬಂದಿದೆ. ನಟ ಸಲ್ಮಾನ್ ಖಾನ್ ಸಹೋದರ ಸೊಹೈಲ್ ಖಾನ್ ಮತ್ತು ಅವರ ಪತ್ನಿ ಸೀಮಾ ಖಾನ್ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಮೇ 13 ರಂದು ಕೌಟುಂಬಿಕ ನ್ಯಾಯಾಲಯದಲ್ಲಿ ಈ ಇಬ್ಬರು ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದಾರೆ.

ಮುಂಬೈನ ಕೋರ್ಟ್ ಆವರಣದಲ್ಲಿ ಇಬ್ಬರು ಕೂಡ ಪ್ರತ್ಯೇಕವಾಗಿ ಕಾಣಿಸಿಕೊಂಡಿದ್ದಾರೆ.

ಮೂಲಗಳ ಪ್ರಕಾರ, ‘ಸೊಹೈಲ್ ಖಾನ್ ಮತ್ತು ಸೀಮಾ ಖಾನ್ ಮೇ 13 ರಂದು ಕೋರ್ಟ್‌ಗೆ ಹಾಜರಾಗಿದ್ದರು. ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಇಬ್ಬರು ಕೂಡ ಪರಸ್ಪರ ಒಪ್ಪಿಗೆ ಮೇರೆಗೆ ಈ ಡಿವೋರ್ಸ್‌ಗೆ ಅರ್ಜಿ ಹಾಕಿದ್ದಾರೆ’ ಎಂಬ ಮಾಹಿತಿ ಸಿಕ್ಕಿದೆ. 24 ವರ್ಷಗಳ ಹಿಂದೆ ಸೀಮಾ ಮತ್ತು ಸೊಹೈಲ್ ಖಾನ್ ಮದುವೆ ಆಗಿದ್ದರು.

ಈ ಬಗ್ಗೆ ಮಾತನಾಡಿದ ಸೀಮಾ, ವಯಸ್ಸಾಗುತ್ತಿದ್ದಂತೆ ಸಂಬಂಧಗಳು ಬೇರೆ ಬೇರೆ ದಿಕ್ಕುಗಳನ್ನು ಪಡೆದುಕೊಳ್ಲುತ್ತವೆ. ನಾನು ಅದರ ಬಗ್ಗೆ ಕ್ಷಮೆಯಾಚಿಸುವುದಿಲ್ಲ. ಏಕೆಂದರೆ ನಾವು ಸಂತೋಷವಾಗಿದ್ದೇವೆ. ನನ್ನ ಮಕ್ಕಳು ಸಂತೋಷವಾಗಿದ್ದಾರೆ. ಸೋಹೈಲ್ ಮತ್ತು ನಾನು ಸಾಂಪ್ರದಾಯಿಕ ವಿವಾಹವಾಗಿಲ್ಲ, ಆದರೆ ನಾವು ಒಂದು ಕುಟುಂಬ. ನಾವು ಒಂದೇ. ನಮಗೆ, ಕೊನೆಯಲ್ಲಿ ಮುಖ್ಯವಾಗುವುದು ಅವನು, ನಾನು ಮತ್ತು ನಮ್ಮ ಮಕ್ಕಳು ಎಂದು ಹೇಳಿದ್ದಾರೆ.

ಸೊಹೈಲ್ ಸಲೀಮ್ ಅಬ್ದುಲ್ ರಷೀದ್ ಖಾನ್ ಅಲಿಯಾಸ್ ಸೊಹೈಲ್ ಖಾನ್ ಅವರು 1998ರಲ್ಲಿ ಸೆಲೆಬ್ರಿಟಿ ವಸ್ತ್ರ ವಿನ್ಯಾಸಕಿ ಸೀಮಾ ಸಚ್‌ದೇವ್ ಅವರೊಂದಿಗೆ ಮದುವೆ ಆಗಿದ್ದರು. ಸೊಹೈಲ್‌ಗೆ ಈಗ 51 ವರ್ಷ ಮತ್ತು ಸೀಮಾಗೆ 46 ವರ್ಷ ಈ ದಂಪತಿಗೆ ನಿರ್ವಾಣ್ ಖಾನ್, ಯೋಹಾನ್‌ ಖಾನ್ ಎಂಬಿಬ್ಬರು ಮಕ್ಕಳು ಇದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಲ್ಮಾನ್ ಖಾನ್‌ರ ಲಕ್ಕಿ ಚೈನ್, ಪೂಜಾ ಹೆಗ್ಡೆ ಕೈಲಿ! ಏನಿದು ಕತೆ?

Sat May 14 , 2022
  ಸಾವಿರಾರು ಕೋಟಿಯ ಒಡೆಯ ಸಲ್ಮಾನ್ ಖಾನ್ ಚಿನ್ನದ ಆಭರಣಗಳನ್ನು ತೊಡುವುದಿಲ್ಲ. ಕೈಗೊಂದು ಬೆಳ್ಳಿಯಂತೆ ಕಾಣುವ ಚೈನು ಬಿಟ್ಟರೆ ಇನ್ನಾವುದೇ ಆಭರಣ ಅವರ ಮೈಮೇಲಿಲ್ಲ. ಸಲ್ಮಾನ್ ಖಾನ್‌ರ ಈ ಚೈನು ಅವರ ಲಕ್ಕಿ ಚೈನ್ ಅಂತೆ. ಈ ಚೈನ್ ಇಲ್ಲದೆ ಸಾರ್ವಜನಿಕವಾಗಿ ಸಲ್ಮಾನ್ ಖಾನ್ ಕಾಣಿಸಿಕೊಳ್ಳುವುದೇ ಇಲ್ಲ. ಸಾಗರ ನೀಲಿ ಬಣ್ಣದ ಹವಳುಳ್ಳ ಈ ಚೈನು ಸಲ್ಮಾನ್ ಖಾನ್‌ರ ಗುರುತಾಗಿಬಿಟ್ಟಿದೆ. ಆದರೆ ಈಗ ಈ ಚೈನು ನಟಿ ಪೂಜಾ ಹೆಗ್ಡೆ […]

Advertisement

Wordpress Social Share Plugin powered by Ultimatelysocial