ಆತ್ಮಹತ್ಯೆಗೆ ಯತ್ನಿಸಿದವರು ಪವಾಡಸದೃಷವಾಗಿದೆ.

 

 

 

ದೇವನಹಳ್ಳಿ: ಆತ್ಮಹತ್ಯೆಗೆ ಯತ್ನಿಸಿದವರು ಪವಾಡಸದೃಷವಾಗಿ ಬದುಕುಳಿದಿರುವ ಘಟನೆ ಅನೇಕ ಬಾರಿ ನಡೆದಿದೆ. ಆದರೆ ಇಲ್ಲೊಬ್ಬ ಯುವಕನಿಗೆ ಬದುಕುಳಿಯುವ ಅದೃಷ್ಟ ಇರಲಿಲ್ಲ ಎಂದೆನಿಸುತ್ತದೆ. ಈತ ಆತ್ಮಹತ್ಯೆ ಮಾಡಿಕೊಳ್ಳಲೆಂದು ಮರವೇರಿದ್ದ. ಆದರೆ ಕೊನೆ ಕ್ಷಣದಲ್ಲಿ ಮರದ ಮೇಲಿಂದ ಬಿದ್ದು ಸಾವನ್ನಪಿದ್ದಾನೆ.

ಮಗ್ಗದ ಕೂಲಿ ಕೆಲಸಕ್ಕೆ ಹೋಗುತ್ತಿದ್ದ ನಾಗೇಂದ್ರ ಪ್ರಸಾದ್ ಕೂಲಿ ಹಣವನ್ನ ಮನೆಯವರಿಗೆ ಕೊಡುತ್ತಿರಲಿಲ್ಲ, ಕೂಲಿಯಿಂದ ಬಂದ ಹಣವನ್ನ ಸಿನಿಮಾ ನೋಡುವುದಕ್ಕೆ ಖರ್ಚು ಮಾಡುತ್ತಿದ್ದ, ಇದೇ ವಿಚಾರಕ್ಕೆ ಹೆತ್ತವರ ಜೊತೆ ಜಗಳವಾಗುತ್ತಿತ್ತು, ಇದೇ ವಿಚಾರಕ್ಕೆ ಭಾನುವಾರ ಜಗಳವಾಗಿದ್ದು ಇದರಿಂದ ಮನನೊಂದ ಆತ ಆತ್ಮಹತ್ಯೆಯ ನಿರ್ಧಾರಕ್ಕೆ ಬಂದಿದ್ದಾನೆ.

ಭಾನುವಾರ ಸಂಜೆಯ ಸುಮಾರಿಗೆ ಭಗತ್ ಸಿಂಗ್ ಕ್ರೀಡಾಂಗಣ ಮುಂಭಾಗದಲ್ಲಿನ ಸರ್ಕಾರಿ ಶಾಲೆಯ ಅವರಣಕ್ಕೆ ಬಂದಿದ್ದಾನೆ, ತಂದಿದ್ದ ಪಂಚೆಯನ್ನು ಮರಕ್ಕೆ ಕಟ್ಟಿ ನೇಣಿಗೆ ಶರಣಾಗುವ ಯತ್ನ ಮಾಡಿದ್ದಾನೆ, ನೇಣಿಗೆ ಕೊರಳೊಡ್ಡಿದ ನಂತರ ಆತ ಕೈಕಾಲು ಜೋರಾಗಿ ಆಡಿಸಿದ್ದಾನೆ, ಈ ವೇಳೆ ಪಂಚೆ ಕಟ್ ಆಗಿ ನೆಲಕ್ಕೆ ಬಿದ್ದಿದ್ದಾನೆ, ತಲೆ ನೇರವಾಗಿ ನೆಲಕ್ಕೆ ತಾಗಿದ ಪರಿಣಾಗಿ ತೀರ್ವವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ, ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರಸ್ತೆ ದುರಸ್ಥಿ ಕೆಲಸಕ್ಕೆ ಮುಂದಾಗಿರುವುದು ಗ್ರಾಮಸ್ಥರಲ್ಲಿ ಸಂತಸ ಮೂಡಿಸಿದೆ.

Tue Jan 17 , 2023
ಗಡ್ಡೋಬನಹಳ್ಳಿ ಗ್ರಾಮಸ್ಥರ ಮನವಿಯ ಮೇರೆಗೆ ತನ್ನ ಸ್ವಂತ ಹಣದಿಂದಲೇ ರಸ್ತೆಯ ಎರಡು ಬದಿಯ ಜಂಗಲ್ ದುರಸ್ಥಿಗೆ ಬಿಜೆಪಿ ಮುಖಂಡ ಮುಂದಾಗಿರುವ ಘಟನೆ ಮಂಗಳವಾರ ನಡೆದಿದೆ.ಕೊರಟಗೆರೆ ತಾಲೂಕು ಕೋಳಾಲ ಹೋಬಳಿ ತೀತಾ ಗ್ರಾಪಂ ವ್ಯಾಪ್ತಿಯ ಮೇಳೆಹಳ್ಳಿ ಕ್ರಾಸಿನಿಂದ ಗಡ್ಡೋಬನಹಳ್ಳಿ ಗ್ರಾಮದವರೇಗೆ ರಸ್ತೆದುರಸ್ಥಿ ಕೆಲಸ ನಡೆಯುತ್ತೀದೆ.ಮೇಳೆಹಳ್ಳಿ ಕ್ರಾಸಿನಿಂದ ಗಡ್ಡೋಬನಹಳ್ಳಿಗೆ 2ಕೀಮೀ ಮತ್ತು ಗಡ್ಡೋಬನಹಳ್ಳಿ ಗ್ರಾಮದ ಮಧ್ಯವೆಂಕಟಾಪುರ ಕ್ರಾಸಿಗೆ 3ಕೀಮೀ ರಸ್ತೆ ದುರಸ್ಥಿ ಕೆಲಸ ಪ್ರಾರಂಭವಾಗಿದೆ.ಗಡ್ಡೋಬನಹಳ್ಳಿ ಗ್ರಾಮದಲ್ಲಿ ಒಟ್ಟು100 ಕುಟುಂಬಗಳಿದ್ದು 450ಕ್ಕೂ ಅಧಿಕ ಮತದಾರರು […]

Advertisement

Wordpress Social Share Plugin powered by Ultimatelysocial