ವಿದ್ಯುತ್ ಸಂಪರ್ಕ ಪಡೆಯಲು ಒಸಿ ಕಡ್ಡಾಯವಲ್ಲ: ಸಚಿವ ಸುನೀಲ್‌ ಕುಮಾರ್‌ ಘೋಷಣೆ !

 

ವಿದ್ಯುತ್ ಸಂಪರ್ಕ ಪಡೆಯಲು ಓಸಿ ನಿಯಮವನ್ನು  ತೆಗೆದು ಹಾಕಿದ್ದು, ಇನ್ಮುಂದೆ ವಿದ್ಯುತ್ ಸಂಪರ್ಕ ಪಡೆಯಲು ಒಸಿ ಕಡ್ಡಾಯವಲ್ಲ ಎಂದು ಇಂಧನ ಸಚಿವ ಸುನೀಲ್ ಕುಮಾರ್​​​​ ತಿಳಿಸಿದ್ದಾರೆ.

ಈ ಕುರಿತು ಶನಿವಾರ ಟ್ವೀಟ್​ ಮಾಡಿರುವ ಅವರು, ಉದ್ಯಮ, ವಾಣಿಜ್ಯ ಮಳಿಗೆ, ವಾಸದ ಮನೆಗೆ ಒಸಿ ಅಗತ್ಯವಿತ್ತು. BBMP ಸ್ಥಳೀಯ ಸಂಸ್ಥೆಗಳಿಂದ ಒಸಿ ಪಡೆಯಬೇಕಾಗಿತ್ತು. ಒಸಿ ಇದ್ದವರಿಗೆಮಾತ್ರ ವಿದ್ಯುತ್ ಸಂಪರ್ಕ ನೀಡಲಾಗುತ್ತಿತ್ತು. ಸಿಎಂ ಅನುಮೋದನೆಯೊಂದಿಗೆ ಸರ್ಕಾರ ಮನವಿ ಸಲ್ಲಿಸಿದ್ದು, ರಾಜ್ಯ ವಿದ್ಯುತ್ ನಿಯಂತ್ರಣ ಆಯೋಗ ಹಳೆ ನಿಯಮ ತೆಗೆದುಹಾಕಿದೆ ಎಂದು ತಿಳಿಸಿದ್ದಾರೆ.

ಕಟ್ಟಡಕ್ಕೆ ನಗರಾಭಿವೃದ್ಧಿ ಪ್ರಾಧಿಕಾರದ ನಿರಾಕ್ಷೇಪಣಾ ಪತ್ರ (ಓಸಿ) ಇಲ್ಲ ಎಂಬ ಕಾರಣಕ್ಕೆ ವಿದ್ಯುತ್ ಸಂಪರ್ಕ ನಿರಾಕರಣೆ ಇನ್ನು ಸಾಧ್ಯವಿಲ್ಲ. ಕಾಂಗ್ರೆಸ್ ಕಾಲದ ಈ “ಕತ್ತಲೆಭಾಗ್ಯದ” ನಿಯಮವನ್ನು ಕೊನೆಗೂ ನಿವಾರಿಸಿದ್ದೇವೆ ಎಂದು ಅವರು ತಿಳಿಸಿದರು.

ನಿಯಮ ಬದಲಾಯಿಸಿ ಕೆಇಆರ್‌ ಸಿ ಹೊರಡಿಸಿದ್ದ ಆದೇಶ ಇಂದಿನಿಂದಲೇ ರಾಜ್ಯ ಪತ್ರದ ಮೂಲಕ ಜಾರಿಗೆ ಬರುತ್ತಿದೆ. ‘ಸರ್ವರಿಗೂ ಬೆಳಕು’ ಎಂಬ ನಮ್ಮ ಧ್ಯೇಯವಾಕ್ಯಕ್ಕೆ ಇನ್ನು ಯಾವುದೇ ಅಡ್ಡಿ ಇಲ್ಲ ಎಂದು ಅವರು ಹೇಳಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

Официальный сайт 1вин Интерфейс и функционал бк 1win

Sun Jul 3 , 2022
Официальный сайт 1вин Интерфейс и функционал бк 1win 1win зеркало рабочее 1вин официальный сайт вход Также можно продать свою ставку до ее окончания, для этого есть опция Cashout. Все действующие на сей момент промо мероприятия располагаются на веб-сайте в разделе с акционными программами. Чтобы всегда быть в курсе событий, необходимо […]

Advertisement

Wordpress Social Share Plugin powered by Ultimatelysocial