ಸೂಪರ್ ಟ್ಯಾಕಲ್ ಮಾಡಿ ಸೋಲು ತಪ್ಪಿಸಿದ ಕ್ಯಾಪ್ಟನ್ ಶೆರಾವತ್;

ಬೆಂಗಳೂರು : ಬೆಂಗಳೂರು ಬುಲ್ಸ್ ಮತ್ತು ತೆಲುಗು ಟೈಟಾನ್ಸ್ ನಡುವಿನ ರೋಚಕ ಕಾದಾಟದಲ್ಲಿ ಕಡೆಯ ನಿಮಿಷ ಬೆಂಗಳೂರಿನ ನಾಯಕ ಪವನ್ ಶೆರವತ್, ಟೈಟಾನ್ಸ್ ನಾಯಕ ರೋಹಿತ್ ಕುಮಾರ್ ಅವರನ್ನು ಹಿಡಿಯುವ ಮೂಲಕ ಪಂದ್ಯವನ್ನು 34-34 ಅಂಕಗಳಿಂದ ಟೈ ಗೊಳಿಸಲು ಯಶಸ್ವಿಯಾದರು.

ಎರಡು ತಂಡಗಳು ಕೂಡ ಆರಂಭದಿಂದಲೂ ಸಮಬಲದ ಹೋರಾಟ ಸಾಧಿಸುತ್ತ ಮುನ್ನುಗ್ಗಿದವು. ಒಂದು ಹಂತದಲ್ಲಿ ಬೆಂಗಳೂರು ಮುನ್ನಡೆ ಕಾಯ್ದುಕೊಂಡಿದ್ದರೂ ಕೂಡ ಅದನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಅಂತಿಮ 3 ನಿಮಿಷದ ಆಟದಲ್ಲಿ ಟೈಟಾನ್ಸ್ ಮುನ್ನಡೆ ಸಾಧಿಸಿತು. ಆದರೆ ಕಡೆಯ 1 ನಿಮಿಷದಲ್ಲಿ ಪಂದ್ಯ ರೋಚಕ ಹಂತಕ್ಕೆ ಸಾಗಿ ಅಂತಿಮವಾಗಿ 34-34 ಅಂಗಳಿಂದ ಸಮಬಲ ಸಾಧಿಸಿತು. ಬೆಂಗಳೂರು ಪರ ಚಂದ್ರನ್ ರಂಜಿತ್ 3 ರೈಡ್, 6 ಬೋನಸ್ ಪಾಯಿಂಟ್ ಸೇರಿ ಒಟ್ಟು 9 ಅಂಕಗಳಿಸಿದರೆ, ಟೈಟಾನ್ಸ್ ಪರ ಅಂಕಿತ್ ಬೇನಿವಾಲ್ 10 ರೈಡ್ ಪಾಯಿಂಟ್ ಗಳಿಸಿ ಮಿಂಚಿದರು. ಆದರೆ ಜಿದ್ದಾಜಿದ್ದಿನ ಕಾದಾಟ ಕೊನೆಗೆ ಸಮಬಲ ಸಾಧಿಸಿ ಅಭಿಮಾನಿಗಳಿಗೆ ಕಬಡ್ಡಿ ರಸದೌತಣವನ್ನು ಉಣಬಡಿಸಿತು.

ಈ ಮೂಲಕ ದಿನದ ಎರಡು ಪಂದ್ಯಗಳು ಟೈನಲ್ಲಿ ಅಂತ್ಯವಾಯಿತು. ಈ ಮೊದಲು ಯುಮುಂಬಾ ಮತ್ತು ಯುಪಿ ಯೋಧ ನಡುವಿನ ಪಂದ್ಯ ಕೂಡ 28-28 ಅಂಕಗಳಿಂದ ಟೈ ಆಗಿತ್ತು. ಬೆಂಗಳೂರು ತಂಡ 21 ರೈಡ್, 13 ಟೇಕಲ್ ಪಾಯಿಂಟ್‍ಗಳಿಂದ 34 ಅಂಕ ಗಳಿಸಿದರೆ, ಟೈಟಾನ್ಸ್ 19 ರೈಡ್, 1 ಸೂಪರ್ ರೈಡ್, 11 ಟೇಕಲ್ ಮತ್ತು 4 ಆಲ್‍ಔಟ್ ಪಾಯಿಂಟ್‍ನಿಂದ ಒಟ್ಟು 34 ಅಂಕ ಗಳಿಸಿತು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕಾಣಿಕೆಯ ವಿಷಯದಲ್ಲಿ ಫಾದರ್‌ ಗಳ ಮಧ್ಯ ಕಿತ್ತಾಟ | Christmas Day | Church Fathers | Speed News Kannada |

Sun Jan 2 , 2022
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please follow and like us:

Advertisement

Wordpress Social Share Plugin powered by Ultimatelysocial