2 ವರ್ಷಗಳಲ್ಲಿ 3 ಕೋಟಿಗೂ ಅಧಿಕ ಕಾಗದದ ಹಾಳೆಗಳನ್ನು ಉಳಿಸಿದೆ ಎನ್ನಲಾಗಿದೆ.

ನ್ಯಾಯಾಂಗದ ಎಲ್ಲಾ ದಾಖಲಾತಿಗಳನ್ನು ಎ 4 ಕಾಗದದ ಎರಡೂ ಬದಿಗಳಲ್ಲಿ ಮುದ್ರಿಸಲು ಅನುಮತಿಸಿದ ಸುಪ್ರೀಂ ಕೋರ್ಟ್​ನ ನಿರ್ಧಾರವು ಕಳೆದ 2 ವರ್ಷಗಳಲ್ಲಿ ಸರಿಸುಮಾರು 3 ಕೋಟಿಗೂ ಅಧಿಕ ಕಾಗದದ ಹಾಳೆಗಳನ್ನು ಉಳಿಸಿದೆ ಎನ್ನಲಾಗಿದೆ.ನ್ಯಾಯಮೂರ್ತಿಗಳಾದ ಎಸ್​.ರವೀಂದ್ರ ಭಟ್​ ಹಾಗೂ ಹೇಮಂತ್​ ಗುಪ್ತಾ ನೇತೃತ್ವದ ಸಮಿತಿಯು ಶಿಫಾರಸು ಮಾಡಿದ ಬಳಿಕ 2020ರ ಏಪ್ರಿಲ್​ನಲ್ಲಿ ಒಂದು ಬದಿ ಮಾತ್ರ ಮುದ್ರಣ ಮಾಡುವುದನ್ನು ಬಿಟ್ಟು ಕಾಗದದ ಎರಡೂ ಕಡೆಗಳಲ್ಲಿ ಮುದ್ರಣ ಮಾಡುವ ನಿರ್ಧಾರವನ್ನು ಕೈಗೊಳ್ಳಲಾಯಿತು.‌ಕಾಗದಗಳನ್ನು ಉಳಿಸುವ ಮೂಲಕ ಪರಿಸರವನ್ನು ಸಂರಕ್ಷಿಸುವ ಕ್ರಮವಾಗಿ ಅಂದಿನ ಮುಖ್ಯನ್ಯಾಯಮೂರ್ತಿ ಎನ್​ ಎ ಬೋಬ್ಡೆ ಸಮಿತಿಯನ್ನು ರಚಿಸುವ ನಿರ್ಧಾರವನ್ನು ಕೈಗೊಂಡಿದ್ದರು.ನ್ಯಾಯಮೂರ್ತಿಗಳಾದ ಭಟ್ ಮತ್ತು ಗುಪ್ತಾ ಸಮಿತಿಯು ಆರಂಭದಲ್ಲಿ ಕೆಲವು ಕಡೆಗಳಿಂದ ವಿರೋಧವನ್ನು ಎದುರಿಸಿತು, ಆದರೆ ಏಪ್ರಿಲ್ 1, 2020 ರಲ್ಲಿ, ನ್ಯಾಯಾಲಯವು ನಿರ್ಧಾರವನ್ನು ಕೈಗೊಳ್ಳಲು ನಿರ್ಧರಿಸಿತು ಮತ್ತು ಫೈಲಿಂಗ್ ಅನ್ನು‌ ಲೀಗಲ್‌ ಕಾಗದದ ಬದಲು A4 ಗಾತ್ರದ ಪೇಪರ್‌ಗಳಲ್ಲಿ ಮಾಡಬೇಕೆಂದು ಆದೇಶಿಸಿತು.ಲೀಗಲ್ ಗಾತ್ರದ ಕಾಗದವು 35.56 cm x 21.59 cm ಆಯಾಮಗಳನ್ನು ಹೊಂದಿದೆ ಮತ್ತು A4 ಗಾತ್ರದ ಕಾಗದಕ್ಕಿಂತ ಸರಿಸುಮಾರು 23 ಶೇಕಡಾ ದೊಡ್ಡದಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಉತ್ತರ ರೈಲ್ವೆಯು ಶತಾಬ್ದಿ ಮತ್ತು ವಂದೇ ಭಾರತ್ ರೈಲುಗಳಲ್ಲಿ ಕಸ್ಟಮೈಸ್

Wed Feb 23 , 2022
ರೈಲು ಪ್ರಯಾಣಿಕರಿಗೆ ಬೋರ್ ಎನಿಸದಿರಲು ರೈಲ್ವೆ ಇಲಾಖೆಯು ರೇಡಿಯೋ ಸೇವೆ ಒದಗಿಸಲು ಬಯಸಿದೆ. ಉತ್ತರ ರೈಲ್ವೆಯು ಶತಾಬ್ದಿ ಮತ್ತು ವಂದೇ ಭಾರತ್ ರೈಲುಗಳಲ್ಲಿ ಕಸ್ಟಮೈಸ್ ಮಾಡಿದ ಸಂಗೀತ ಮತ್ತು ಆರ್‌ಜೆ ಮೂಲಕ ಮನರಂಜನೆ ಸೇವೆಯನ್ನು ಪರಿಚಯಿಸಲು ಸಿದ್ಧತೆ ನಡೆದಿದೆ.ಈ ರೈಲುಗಳಲ್ಲಿ ಪ್ರಯಾಣಿಸುವವರು ಶೀಘ್ರದಲ್ಲೇ ತಮ್ಮ ಪ್ರಯಾಣದ ವೇಳೆ ರೇಡಿಯೋ ಮನರಂಜನೆ ಆನಂದಿಸಬಹದಾಗಿದೆ.ದೆಹಲಿ, ಲಕ್ನೋ, ಭೋಪಾಲ್, ಚಂಡೀಗಢ, ಅಮೃತಸರ, ಅಜ್ಮೀರ್, ಡೆಹ್ರಾಡೂನ್, ಕಾನ್ಪುರ್, ವಾರಣಾಸಿ, ಕತ್ರಾಗಳಲ್ಲಿ ಪ್ರಯಾಣಿಸುವಾಗ ರೇಡಿಯೊ ಸಂಗೀತದಿಂದ ಸ್ವಾಗತಿಸಲಾಗುತ್ತದೆ. […]

Advertisement

Wordpress Social Share Plugin powered by Ultimatelysocial