ಸೂರ್ಯನಾರಾಯಣ ರಾವ್

ಸೂರ್ಯನಾರಾಯಣ ರಾವ್
ಬಿ. ಸೂರ್ಯನಾರಾಯಣ ರಾವ್ ಇತಿಹಾಸದ ಮೇಲೆ ಬೆಳಕು ಚೆಲ್ಲಿದ ಮಹಾನ್ ಸಾಧಕರು.
ಸೂರ್ಯನಾರಾಯಣ ರಾವ್ 1856ರ ಫೆಬ್ರವರಿ 13ರಂದು ಹುಣಸೂರಿನಲ್ಲಿ ಜನಿಸಿದರು. ಪ್ರಾರಂಭಿಕ ಶಿಕ್ಷಣ ಹುಣಸೂರಿನಲ್ಲಿ ನಂತರ ಮೈಸೂರಿನಲ್ಲಿ ನಡೆಯಿತು. ಮದರಾಸು ವಿಶ್ವವಿದ್ಯಾಲಯದಲ್ಲಿನ ಕಾನೂನು ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಗಿಸಿ ಬಳ್ಳಾರಿಯಲ್ಲಿ ವಕೀಲಿವೃತ್ತಿ ಆರಂಭಿಸಿದರು.
ಸೂರ್ಯನಾರಾಯಣ ರಾವ್ ಅವರಿಗೆ ವಕೀಲಿ ವೃತ್ತಿಯಿಂದ ತೃಪ್ತಿ ಸಿಗದೆ ಪುನಃ ಹಳ್ಳಿಗೆ ಬಂದು 15 ವರ್ಷಗಳ ಕಾಲ ಸತತ ವ್ಯಾಸಂಗ ಮಾಡಿದರು. ಜ್ಯೋತಿಷ್ಯ, ಖಗೋಳ ವಿಜ್ಞಾನ ಮುಂತಾದ ಶಾಸ್ತ್ರಗಳಲ್ಲಿ ಅಪಾರ ಪಾಂಡಿತ್ಯ ಗಳಿಸಿದರು.
ಸೂರ್ಯನಾರಾಯಣ ರಾವ್ ದೇಶದ ನಾನಾ ಭಾಗಗಳಲ್ಲಿ ಸಂಚಾರ ಮಾಡಿದರು. ಭಾರತೀಯ ಇತಿಹಾಸ ಮತ್ತು ಸಂಸ್ಕೃತಿಯ ಬಗ್ಗೆ ಭಾಷಣ ಪ್ರವಚನದಿಂದ ಜನ ಜಾಗೃತಿಯ ಕಾರ್ಯಕ್ರಮ ನಡೆಸಿದರು.
ಭಾರತೀಯ ಜ್ಯೋತಿಷ ಶಾಸ್ತ್ರವನ್ನು ಪರಿಚಯಿಸಲು ಅಪಾರ ಶ್ರಮ ವಹಿಸಿದರು.
ಸೂರ್ಯನಾರಾಣ ರಾವ್ ಹಲವಾರು ಗ್ರಂಥಗಳನ್ನು ರಚಿಸಿದರು. ಇತಿಹಾಸದ ಬಗ್ಗೆ ಇವರು ಬರೆದ ಗ್ರಂಥ “HISTORY OF VIJAYANAGAR OR NEVER TO BE FORGOTTON EMPIRE” ಮನೋಜ್ಞ ಗ್ರಂಞಥವೆಂದು ವಿಶ್ವದೆಲ್ಲೆಡೆ ಹೆಸರಾಗಿದೆ.
ಸೂರ್ಯನಾರಾಯಣ ರಾವ್ ಅವರಿಗೆ ಲಂಡನ್ನಿನ ರಾಯಲ್ ಆಸ್ಟ್ರ ನಾಮಿಕಲ್ ಸೊಸೈಟಿ, ನ್ಯೂಯಾರ್ಕಿನ ಮೆಡಿಕೊ ಲೀಗಲ್ ಸೊಸೈಟಿ, ಬಂಗಾಲದ ರಾಯಲ್ ಏಶಿಯಾಟಿಕ್ ಸೊಸೈಟಿ ಸಂಸ್ಥೆಗಳಲ್ಲಿ ಗೌರವ ಸದಸ್ಯತ್ವವಿತ್ತು. ಅವರು ಬೆಂಗಳೂರಿನ ಅಸ್ಟ್ರಲಾಜಿಕಲ್ ಮಾಸಪತ್ರಿಕೆಯ ಸಂಸ್ಥಾಪಕರು. ಹಲವು ವರ್ಷ ಸಂಪಾದಕರ ಹೊಣೆ ನಿರ್ವಹಿಸಿದರು.
ಸೂರ್ಯನಾರಾಯಣ ರಾವ್ ಅವರ ಕನ್ನಡ ಗ್ರಂಥಗಳಲ್ಲಿ ಅಕ್ಷಯ ಮತ್ತು ಪ್ರಭವದ ಪರಿಣಾಮ, ಸ್ವಯಂ ಜ್ಯೋತಿರ್ಬೋನಿ (ಗಣಿತಗ್ರಂಥ) ; ಇಂದ್ರಜಾಲ, ವಶಿಷ್ಠನಾರದ ತಪೋಬಲ, ವಿಶ್ವಾಮಿತ್ರ, ಕಾದಂಬರಿಗಳು ; ವಿಕ್ಟೋರಿಯಾ ಮಹಾರಾಣಿ, ಸುಖದ ಶೋಧ
ಮುಂತಾದುವು ಇವೆ. ತೆಲುಗು ಭಾಷೆಯಲ್ಲಿ ಮುದಿರಾಜರ ಇತಿಹಾಸ, ಸ್ವಯಂ ಜ್ಯೋತಿರ್ಬೋನಿ. ಇಂಗ್ಲಿಷ್‌ನಲ್ಲಿ ಬೃಹತ್‌ಜಾತಕ, ವಿಜಯನಗರದ ಚರಿತ್ರೆ, ಜೈಮಿನಿಸೂತ್ರ, ಜಾತಕ ಚಂದ್ರಿಕಾ, ಜಾತಕ ಕಲಾನಿ, ಜ್ಯೋತಿಷ ಮಂಜರಿ, ಲೈಫ್ ಆಫ್ ಶಂಕರಾಚಾರ್ಯ, ಲೈಫ್ ಆಫ್ ವಿದ್ಯಾರಣ್ಯ, ಲೈಫ್ ಆಫ್ ವರಹಾಮಿಹಿರ, ಮ್ಯಾನುಯಲ್ ಆಫ್ ಚೆಸ್, ಸಾರಸ್ವತ ಚಿಂತಾಮಣಿ, ಫೈವ್ ಹಂಡ್ರೆಡ್ ಕಾಂಬಿನೇಷನ್ ಆಫ್ ಪ್ಲಾನೆಟ್ಸ್, ಆಟೋಬಯಾಗ್ರಫಿ ಮುಂತಾದ 75 ಗ್ರಂಥಗಳಿವೆ.
ಸೂರ್ಯನಾರಾಯಣ ರಾವ್ 1937ರಲ್ಲಿ ನಿಧನರಾದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಜಾನ್ ಹಂಟರ್ | On the birth anniversary of great surgeon of 18th century Jhon Hunter |

Fri Mar 4 , 2022
ಜಾನ್ ಹಂಟರ್ On the birth anniversary of great surgeon of 18th century Jhon Hunter ಜಾನ್ ಹಂಟರ್ ಸ್ಕಾಟಿಷ್ ಶಸ್ತ್ರವೈದ್ಯರು, ಖ್ಯಾತ ಅಂಗರಚನಾವಿಜ್ಞಾನಿ ಹಾಗೂ ಪ್ರಾಯೋಗಿಕ ರೋಗವಿಜ್ಞಾನದ (ಪೆತಾಲಜಿ) ಪಿತಾಮಹರೆನಿಸಿದವರು. ಶಸ್ತ್ರಕ್ರಿಯೆಯನ್ನು ವೈಜ್ಞಾನಿಕ ತಳಹದಿಯ ಮೇಲೆ ಸ್ಥಾಪಿಸಿದ ಇವರು, ಮುಂದಿನ ಶತಮಾನಗಳಲ್ಲಿನ ವೈದ್ಯಕೀಯ ವಿಜ್ಞಾನದ ಬೆಳೆವಣಿಗೆಗಳಿಗೆ ಅಗತ್ಯ ಹಂದರ (ಫ್ರೇಮ್‍ವರ್ಕ್) ನಿರ್ಮಿಸಿದವರು. “ಆಲೋಚಿಸಬೇಡ, ಪ್ರಯೋಗಮಾಡು” ಇದು ಶಸ್ತ್ರವೈದ್ಯರಿಗೆ ಇವರು ನೀಡುತ್ತಿದ್ದ ಉಪದೇಶ. ಜಾನ್ ಹಂಟರ್ ಹತ್ತು […]

Advertisement

Wordpress Social Share Plugin powered by Ultimatelysocial