ಸ್ವಾದಿಷ್ಟಕರವಾದ ಸಿಹಿ ತಿನಿಸು ಮಾಲ್ಪುವಾ ಹೀಗೆ ಮಾಡಿ

 

ಸಿಹಿ ಯಾರಿಗೆ ತಾನೇ ಬೇಡ ಹೇಳಿ. ಮಕ್ಕಳಿಗಂತೂ ಸಿಹಿ ತಿನಿಸು ಇದ್ದರೆ ಊಟ ಕೂಡ ಬೇಡ ಎನ್ನುತ್ತಾರೆ. ಇಲ್ಲಿ ರುಚಿಕರವಾದ ಮಾಲ್ಪುವಾ ಮಾಡುವ ವಿಧಾನ ಇದೆ. ಹಬ್ಬಕ್ಕೆ ಮನೆಯಲ್ಲಿ ಟ್ರೈ ಮಾಡಿ.

ಬೇಕಾಗುವ ಸಾಮಗ್ರಿಗಳು:

ಮೈದಾ ಹಿಟ್ಟು – 1/2 ಕಪ್, ಖೋವಾ – 1/4 ಕಪ್, ಸಕ್ಕರೆ – ಸಕ್ಕರೆ‌ 1/2 ಕಪ್, ಹಾಲು – 3/4 ಕಪ್, ಉಪ್ಪು – ರುಚಿಗೆ ತಕ್ಕಷ್ಟು, ಎಣ್ಣೆ – ಕರಿಯಲು, ಸಕ್ಕರೆ – 1/2 ಕಪ್, ನೀರು – 1/2 ಕಪ್, ಕೇಸರಿ ಎಸಳು – 5, ಏಲಕ್ಕಿ ಪುಡಿ – ಚಿಟಿಕೆ.

 

ಮಾಡುವ ವಿಧಾನ:

ಒಂದು ಬೌಲ್ ಗೆ ½ ಕಪ್ ಬಿಸಿ ಹಾಲು ಹಾಕಿ ಅದಕ್ಕೆ ಖೋವಾ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಇದಕ್ಕೆ ಮೈದಾ ಹಿಟ್ಟು, ½ ಟೇಬಲ್ ಸ್ಪೂನ್ ಸಕ್ಕರೆ, ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ 15 ನಿಮಿಷಗಳ ಕಾಲ ಹಾಗೆಯೇ ಬಿಟ್ಟು ಬಿಡಿ. ನಂತರ ಗ್ಯಾಸ್ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ ½ ಕಪ್ ನೀರು, ½ ಕಪ್ ಸಕ್ಕರೆ ಹಾಕಿ ಒಂದು ಕುದಿ ಕುದಿಸಿಕೊಳ್ಳಿ. ಇದಕ್ಕೆ ಏಲಕ್ಕಿ ಪುಡಿ, ಕೇಸರಿ ದಳ ಸೆರಿಸಿ ಗ್ಯಾಸ್ ಆಫ್ ಮಾಡಿ.

ಗ್ಯಾಸ್ ಮೇಲೆ ಎಣ್ಣೆ ಕಡಾಯಿ ಇಟ್ಟು ಅದಕ್ಕೆ ಮಾಡಿಟ್ಟುಕೊಂಡ ಮೈದಾ ಮಿಶ್ರಣವನ್ನು ಒಂದು ಸೌಟಿನ ಸಹಾಯದಿಂದ ಸ್ವಲ್ಪ ಸ್ವಲ್ಪವೇ ಹಾಕಿ ಎರಡು ಕಡೆ ಚೆನ್ನಾಗಿ ಬೇಯಿಸಿಕೊಂಡು ಸಕ್ಕರೆ ಪಾಕಕ್ಕೆ ಹಾಕಿ 2 ನಿಮಿಷಗಳ ಕಾಲ ಮುಳುಗಿಸಿ ಆಮೇಲೆ ಬೇರೊಂದು ತಟ್ಟೆಗೆ ತೆಗೆದುಕೊಳ್ಳಿ. ಬಿಸಿ ಬಿಸಿ ಇರುವಾಗ ಸವಿಯುವುದಕ್ಕೆ ಚೆನ್ನಾಗಿರುತ್ತದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮೆಟಾ ಕಂಪೆನಿ ಫೇಸ್‌ಬುಕ್‌ ಮೆಸೆಂಜರ್‌ ಅಪ್ಲಿಕೇಶನ್‌ನಲ್ಲಿ ಹೊಸ ಅಪ್ಡೇಟ್‌ ಅನ್ನು ಪರಿಚಯಿಸಿದೆ.

Thu Feb 10 , 2022
ಮೆಟಾ ಕಂಪೆನಿ ಫೇಸ್‌ಬುಕ್‌ ಮೆಸೆಂಜರ್‌ ಅಪ್ಲಿಕೇಶನ್‌ನಲ್ಲಿ ಹೊಸ ಅಪ್ಡೇಟ್‌ ಅನ್ನು ಪರಿಚಯಿಸಿದೆ. ಈ ಹೊಸ ಅಪ್ಡೇಟ್‌ನಲ್ಲಿ ಆಡಿಯೊ ಫೀಚರ್ಸ್‌, ಡಿಸ್‌ಅಪಿಯರಿಂಗ್‌ ಫಿಚರ್ಸ್‌ ವಿಥ್‌ ವ್ಯಾನಿಶ್ ಮೋಡ್‌ ಮತ್ತು ಇತರ ಫೀಚರ್ಸ್‌ಗಳಿಗಾಗಿ ಸ್ಪ್ಲಿಟ್ ಪಾವತಿ ಪೇಮೆಂಟ್‌ ಫೀಚರ್ಸ್‌ ಅನ್ನು ಮೆಟಾ ಕಂಪೆನಿ ಘೋಷಣೆ ಮಾಡಿದೆ.ಸದ್ಯ ಮೆಟಾ ಕಂಪೆನಿ ಘೋಷಣೆ ಮಾಡಿರುವ ಕೆಲವು ಫೀಚರ್ಸ್‌ಗಳು ಆರಂಭಿಕ ಹಂತದಲ್ಲಿ US ಪ್ರೇಕ್ಷಕರಿಗೆ ಲಭ್ಯವಿರುತ್ತವೆ ಎನ್ನಲಾಗಿದೆ.ಅಪ್ಲಿಕೇಶನ್‌ಹೌದು, ಮೆಸೆಂಜರ್‌ ಅಪ್ಲಿಕೇಶನ್‌ ಹೊಸ ಅಪ್ಡೇಟ್‌ ಅನ್ನು ಪಡೆದುಕೊಂಡಿದೆ. ಇದರಲ್ಲಿ […]

Advertisement

Wordpress Social Share Plugin powered by Ultimatelysocial