HIJAB:ಮುಸ್ಲಿಂ ವಿದ್ಯಾರ್ಥಿನಿ ಏಕಾಂಗಿ ಹೋರಾಟ;

ಮಂಡ್ಯ: ನೂರಾರು ಕೇಸರಿ ಶಾಲು ತೊಟ್ಟ ವಿದ್ಯಾರ್ಥಿಗಳ ವಿರುದ್ಧ ಮುಸ್ಲಿಂ ವಿದ್ಯಾರ್ಥಿನಿ ಏಕಾಂಗಿ ಹೋರಾಟ!

ಮಂಡ್ಯ: ಮಂಡ್ಯದಲ್ಲಿ ಕೇಸರಿ ಮತ್ತು ಹಿಜಬ್ ಹೋರಾಟ ಮುಂದುವರೆದಿದೆ.

ಪಿಇಎಸ್ ಕಾಲೇಜಿನ ವಿದ್ಯಾರ್ಥಿಗಳು ಕೇಸರಿ‌ ಶಾಲು ಹಾಕಿಕೊಂಡು ಹಿಜಾಬ್​ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಮುಸ್ಲಿಂ ವಿದ್ಯಾರ್ಥಿ ನೂರಾರು ಯುವಕರ ಎದುರೇ ಧೈರ್ಯವಾಗಿಯೇ ಹೋರಾಟ ನಡೆಸಿದ್ದಾರೆ.

ಮುಸ್ಲಿಂ ವಿದ್ಯಾರ್ಥಿನಿ ಏಕಾಂಗಿ ಹೋರಾಟವಿದ್ಯಾರ್ಥಿಗಳು ಕಾಲೇಜಿನ‌ ಮುಂದೆ ಕೇಸರಿ ಶಾಲು ಹಾಕಿಕೊಂಡು ಜೈ ಶ್ರೀರಾಮ್ ಘೋಷಣೆ ಕೂಗುತ್ತಾ ಹಿಜಾಬ್​ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದರು. ಇದೇ ವೇಳೆ ಕಾಲೇಜ್​ಗೆ ಆಗಮಿಸಿದ ಮುಸ್ಲಿಂ ವಿದ್ಯಾರ್ಥಿನಿಯೊಬ್ಬಳು ಅಲ್ಲಾಹು ಅಕ್ಬರ್ ಎಂದು ಘೋಷಣೆ ಕೂಗಿದರು. ಇದು ಯುವಕರ ಆಕ್ರೋಶಕ್ಕೆ ಕಾರಣವಾಗಿದ್ದು, ವಿದ್ಯಾರ್ಥಿಗಳು ಶಾಲಾ ಮಂಡಳಿ ಸಿಬ್ಬಂದಿ ಜೊತೆ ವಾಗ್ವಾದಕ್ಕಿಳಿದರು.

ಕೇಸರಿ ಶಾಲು ಹಾಕಿಕೊಂಡ ಬಂದಿದ್ದೇವೆ ನಮಗೆ ಒಳಗೆ ಹೋಗಲು ಅವಕಾಶ ಕೊಡುತ್ತಿಲ್ಲ. ಆದರೆ, ಬುರ್ಕಾ ಹಾಕಿಕೊಂಡು ಬಂದವರಿಗೆ ಅವಕಾಶ ಕೊಟ್ಟಿದ್ದೀರಿ. ಅವರನ್ನು ಕಾಲೇಜ್​ನಿಂದ ಹೊರಗೆ ಕಳುಹಿಸಿ ಅಂತ ಎಂದು ನಾವು ಹೇಳುತ್ತಿಲ್ಲ. ಅವರ ಹಿಜಾಬ್​, ಬುರ್ಕಾ ತೆಗೆಸಿ. ನಾವು ಕೇಸರಿ ಶಾಲನ್ನು ತೆಗೆದು ಬರುತ್ತೇವೆ ಎಂದು ವಿದ್ಯಾರ್ಥಿಗಳು ಕಾಲೇಜಿನ ಮುಖ್ಯ ಶಿಕ್ಷಕರ ಜೊತೆ ವಾಗ್ವಾದ ನಡೆಸಿದರು.

ಸದ್ಯ ಕಾಲೇಜು ಮುಂಭಾಗ ಜಮಾಯಿಸಿರುವ ಕೇಸರಿ ಶಾಲು ತೊಟ್ಟ ವಿದ್ಯಾರ್ಥಿಗಳು ತಮ್ಮ ಪ್ರತಿಭಟನೆ ಮುಂದುವರಿಸಿದ್ದಾರೆ. ಪೊಲೀಸರು ಸ್ಥಳಕ್ಕಾಗಮಿಸಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

2008 ಅಹಮದಾಬಾದ್ ಸರಣಿ ಸ್ಫೋಟ ಪ್ರಕರಣ: ವಿಶೇಷ ನ್ಯಾಯಾಲಯ 49 ಅಪರಾಧಿಗಳು, 28 ಖುಲಾಸೆಗಳು

Tue Feb 8 , 2022
  2008 ರ ಅಹಮದಾಬಾದ್ ಸರಣಿ ಸ್ಫೋಟ ಪ್ರಕರಣದಲ್ಲಿ 56 ಜನರನ್ನು ಕೊಂದು 200 ಕ್ಕೂ ಹೆಚ್ಚು ಜನರನ್ನು ಗಾಯಗೊಳಿಸಿದ ಪ್ರಕರಣದಲ್ಲಿ ಒಟ್ಟು 49 ಆರೋಪಿಗಳನ್ನು ವಿಶೇಷ ನ್ಯಾಯಾಲಯವು ಫೆಬ್ರವರಿ 8 ಮಂಗಳವಾರದಂದು ದೋಷಿಗಳೆಂದು ಘೋಷಿಸಿದೆ. ಪ್ರಕರಣದಲ್ಲಿ ಭಾಗಿಯಾಗಿದ್ದ ಇತರ 28 ಆರೋಪಿಗಳನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. 26 ಜುಲೈ 2008 ರಂದು 70 ನಿಮಿಷಗಳ ಅವಧಿಯಲ್ಲಿ 21 ಸ್ಫೋಟಗಳ ಸರಣಿಯು ನಗರವನ್ನು ತಲ್ಲಣಗೊಳಿಸಿತು. ಸಫ್ದರ್ ನಾಗೋರಿ, ಅತಿಕುರ್ ರೆಹಮಾನ್, ಜಾವೇದ್ […]

Advertisement

Wordpress Social Share Plugin powered by Ultimatelysocial