ಟಿ. ಜಿ. ರಾಘವ

 
ಟಿ. ಜಿ. ರಾಘವ ಅವರು ಕನ್ನಡದ ಮಹತ್ವದ ಕಥೆಗಾರರಲ್ಲೊಬ್ಬರು.
ರಾಘವರು 1935ರ ಮಾರ್ಚ್ 28 ರಂದು ಬೆಂಗಳೂರಿನಲ್ಲಿ ಜನಿಸಿದರು. ಅವರ ತಂದೆ ಗೋವಿಂದಾಚಾರ್ಯರು ಮತ್ತು ತಾಯಿ ತಂಗಮ್ಮನವರು. ಸಾಂಪ್ರದಾಯಿಕವಾಗಿ ಅವರ ಮನೆ ಮಾತು ತಮಿಳಾದರೂ, ರಾಘವರು ಕಲಿತದ್ದು ಕನ್ನಡದಲ್ಲಿ. ಅವರ ಕೃಷಿಯೂ ಕನ್ನಡದಲ್ಲೇ ಅರಳಿತು.
ರಾಘವರ ಶಾಲಾ ವಿದ್ಯಾಭ್ಯಾಸ ಗುಬ್ಬಿ, ಶ್ರೀನಿವಾಸಪುರ, ಕೋಲಾರ ಮುಂತಾದೆಡೆಗಳಲ್ಲಿ ನೆರವೇರಿತು. ತಾವು ಚಿಕ್ಕವರಿದ್ದಾಗ ತಮ್ಮ ಅಜ್ಜಿ ಹೇಳುತ್ತಿದ್ದ ಕಥೆಗಳು ಮತ್ತು ತಾಯಿ ಗುನುಗುತ್ತಿದ್ದ ಹಾಡುಗಳೆಂದರೆ ಅವರಿಗೆ ಅಪಾರ ಆಸಕ್ತಿ. ಹೀಗೆ ಬಾಲ್ಯದಲ್ಲೇ ಸಾಹಿತ್ಯದ ಸೂಕ್ಷ್ಮ ಎಳೆ ಅವರನ್ನಾವರಿಸಿತ್ತು.
ರಾಘವರ ಮೊದಲ ಕಥೆ ‘ಟಿಕ್, ಟಿಕ್…’ ಅಂದು ಮೈಸೂರು ವಿಶ್ವವಿದ್ಯಾಲಯದಲ್ಲಿ ಕನ್ನಡ-ಇಂಗ್ಲಿಷ್ ಭಾಷೆಗಳಲ್ಲಿ ಪ್ರಕಟವಾಗುತ್ತಿದ್ದ ‘ವಾರ್ಸಿಟಿ ಟೈಮ್ಸ್’ ಪತ್ರಿಕೆಯಲ್ಲಿ ಮೂಡಿಬಂದಾಗ, ಹಲವಾರು ಪ್ರಬುದ್ಧ ಓದುಗರ ಗಮನ ಸೆಳೆಯಿತು. ಮುಂದೆ ಕಾಲೇಜಿನ ಸಣ್ಣ ಕಥಾ ಸ್ಪರ್ಧೆಯಲ್ಲಿ ‘ಹಾವು ಹೆಡೆಯಾಡಿತು’ ಬಹುಮಾನ ಗಳಿಸಿದಾಗ ಅಲ್ಲೇ ಪ್ರಾಧ್ಯಾಪಕರಾಗಿದ್ದ ಕವಿ ಗೋಪಾಲಕೃಷ್ಣ ಅಡಿಗರ ಗಮನಕ್ಕೆ ಬಂದು, ಅವರ ನೆಚ್ಚಿನ ಶಿಷ್ಯರಾದರು.
ಬಿ.ಎಸ್ಸಿ ಪದವಿ ಪಡೆದ ನಂತರ ಕೆಲಕಾಲ ಬೆಂಗಳೂರಿನ ಸೇಯಿಂಟ್ ಅಲೋಷಿಯಸ್ ಹೈಸ್ಕೂಲಿನಲ್ಲಿ ಅಧ್ಯಾಪಕರಾಗಿ ದುಡಿದ ರಾಘವರು, ಅಡಿಗರ ಆಹ್ವಾನದ ಮೇರೆಗೆ ಸಾಗರದ ಲಾಲ್‌ಬಹದ್ದೂರ್ ಕಾಲೇಜಿನಲ್ಲಿ ಶಿಕ್ಷಕರಾದರು. ಮತ್ತಷ್ಟು ವಿದ್ಯಾಕಾಂಕ್ಷೆಯಿಂದ ಧಾರವಾಡಕ್ಕೆ ಹೋಗಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಸ್ನಾತಕೋತ್ತರ ಪದವಿ ಪಡೆದರು. ಕೆಲಕಾಲ ಮೈಸೂರಿನ ಜೆ.ಎಸ್.ಎಸ್ ಕಾಲೇಜಿನಲ್ಲಿ ಅಧ್ಯಾಪಕ ವೃತ್ತಿ ನಡೆಸಿ, ಮುಂದೆ ಬೆಂಗಳೂರಿನ ಎಂ.ಇ.ಎಸ್ ಕಾಲೇಜಿನಲ್ಲಿ ನಿವೃತ್ತಿಯವರೆವಿಗೂ ಪ್ರಾಧ್ಯಾಪನ ನಡೆಸಿದರು.
ಅಂದಿನ ಕಾಲದಲ್ಲಿ ಶಿಕ್ಷಕರು ಅನುಭವಿಸುತ್ತಿದ್ದ ಬವಣೆಗಳನ್ನು ನೀಗಿಸಲು ನಿರಂತರವಾಗಿ ಶ್ರಮಿಸಿದ ಟಿ. ಜಿ. ರಾಘವರು ಕೋರ್ಟು, ಕಚೇರಿಗಳಿಗೆ ಲೆಕ್ಕವಿಲ್ಲದಷ್ಟು ಅಲೆದಾಡಬೇಕಾಗಿ ಬರುತ್ತಿತ್ತು. ಹೀಗಾಗಿ ಉದ್ಯೋಗದ ಜೊತೆ ಜೊತೆಗೆ ಲೋಕಕಲ್ಯಾಣದ ಕಾಯಕವೂ ಸೇರಿ ಅವರಿಗೆ ಬರೆಯಲು ಸಿಗುತ್ತಿದ್ದ ಬಿಡುವು ಕಡಿಮೆಯಾಗಿತ್ತು. ಹೀಗಿದ್ದರೂ ಅವರು ಮೂಡಿಸಿದ ಬರಹಗಳು ಸತ್ವಯುತವೆನಿಸಿವೆ. ‘ಜ್ವಾಲೆ ಆರಿತು’, ‘ಸಂಬಂಧಗಳು’ ಟಿ.ಜಿ.ರಾಘವರ ಕಥಾಸಂಕಲನಗಳಾಗಿವೆ. ಮನೆ, ವಿಕೃತಿ ರಾಘವರ ಕಾದಂಬರಿಗಳು. ಪ್ರೇತಗಳು ಅವರ ಎಂಬುದು ನಾಟಕ.
‘ಮನೆ’ ಕಾದಂಬರಿ ಗಿರೀಶ್ ಕಾಸರವಳ್ಳಿಯವರ ನಿರ್ದೇಶನದಲ್ಲಿ ಕನ್ನಡ-ಹಿಂದಿ ಚಲನಚಿತ್ರವಾಗಿ ರಾಷ್ಟ್ರ ಪ್ರಶಸ್ತಿ ಗೌರವಕ್ಕೆ ಪಾತ್ರವಾಗಿದೆ. ಮನೆ ಕಾದಂಬರಿ ಹಾಗೂ ಶ್ರಾದ್ಧ ಕಥೆ ಮರಾಠಿ ಭಾಷೆಗೂ, ‘ಪ್ರೇತಗಳು’ ಮಲೆಯಾಳಂ ಭಾಷೆಗೂ ಅನುವಾದಗೊಂಡಿವೆ. ಅವರ ಕೆಲವೊಂದು ಕಥೆ ಉರ್ದುವಿಗೂ ಭಾಷಾಂತರಗೊಂಡು ಮೆಚ್ಚುಗೆ ಗಳಿಸಿವೆ.
ಮಹತ್ವದ ವಿಮರ್ಶಕರೂ ಆದ ಟಿ.ಜಿ. ರಾಘವರ ವಿಮರ್ಶಾ ಬರಹಗಳು ‘ಪರಿಗ್ರಹ’ ಎಂಬ ಸಂಕಲನವಾಗಿ ಮೂಡಿಬಂದಿದೆ.ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

25 ವರ್ಷದ ಯುವತಿ ಜೊತೆ ವಿವಾಹವಾಗಿದ್ದ 50 ವರ್ಷದ ಶಂಕರಪ್ಪ ಆತ್ಮಹತ್ಯೆ

Tue Mar 29 , 2022
ತುಮಕೂರು: 2021ರ ಅಕ್ಟೋಬರ್ 19ರಂದು 45 ವರ್ಷದ ವ್ಯಕ್ತಿಯೊಬ್ಬರು 25 ವರ್ಷದ ಯುವತಿಯನ್ನು ಮದುವೆಯಾಗಿದ್ದು ರಾಜ್ಯಾದ್ಯಂತ ಭಾರಿ ಸುದ್ದಿಯಾಗಿತ್ತು. ಈ ಮದುವೆ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿತ್ತು. ಈ ಅಪರೂಪದ ಮದುವೆ ಇದೀಗ ಆತ್ಮಹತ್ಯೆಯಲ್ಲಿ ಅಂತ್ಯವಾಗಿದೆ.25 ವರ್ಷದ ಮೇಘನಾಳನ್ನು ವಿವಾಹವಾಗಿದ್ದ 45 ವರ್ಷದ ಶಂಕರಣ್ಣ ಇದೀಗ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ತುಮಕೂರಿನ ಕುಣಿಗಲ್ ತಾಲೂಕಿನ ಹುಲಿಯೂರು ದುರ್ಗ ಹೋಬಳಿಯ ಅಕ್ಕಿಮರಿ ಪಾಳ್ಯದಲ್ಲಿ ಹೊಲದಲ್ಲಿ ಮರಕ್ಕೆ ನೇಣುಬಿಗಿದುಕೊಂಡು ಶಂಕರಣ್ಣ […]

Advertisement

Wordpress Social Share Plugin powered by Ultimatelysocial