ಬೆಂಗಳೂರಿನ ಜನಪ್ರತಿನಿಧಿಗಳ ಸಭೆ ನಡೆಸ್ತಿದ್ದೀವಿ. ಕಾರ್ಪೋರೇಟರ್‌ಗಳು ಎಲ್ಲ ಚುನಾಯಿತ ಜನ ಪ್ರತಿ ನಿಧಿಗಳ ಸಭೆ ಮಾಡಿದ್ದೇವೆ. ಇನ್ನಷ್ಟು ಹೆಚ್ಚು ಅಗ್ರೆಸಿವ್ ಆಗಿ ಚುನಾಯಿತ ಜನಪ್ರತಿನಿಧಿಗಳು ಕೋವಿಡ್ ನಿಯಂತ್ರಣದಲ್ಲಿ ಭಾಗಿಯಾಗಬೇಕು ಎಂದು ಸಚಿವ ಆರ್ ಅಶೋಕ್ ಹೇಳಿದ್ದಾರೆ.ಬೆಂಗಳೂರಿನಲ್ಲಿ ಮಾತನಾಡಿದ ಅವರು, ಯಾವ ಆಸ್ಪತ್ರೆಗಳು ನಿಯಮ ಉಲ್ಲಂಘನೆ ಮಾಡ್ತಿದ್ದಾರೋ ಅಂಥವರ ವಿರುದ್ದ ಕ್ರಿಮಿನಲ್ ಕೇಸ್‌ಗಳನ್ನು ದಾಖಲಿಸುತ್ತೇವೆ. ವಿಪಕ್ಷಗಳ ಹೇಳುತ್ತಿರುವಂತಹ ಯಾವುದೇ ಹಗರಣ ಸರ್ಕಾರದಲ್ಲಿ ನಡೆದಿಲ್ಲ ಎಂದು ಹೇಳಿದರು.

ಕೊರೊನಾ ಸೋಂಕು ಹರಡುವ ಭೀತಿ ಇರುವುದರಿಂದ ಸದ್ಯ ಸಿನಿಮಾ ಚಿತ್ರೀಕರಣಕ್ಕೆ ಅನುಮತಿ ನೀಡಲು ಸಾಧ್ಯವಿಲ್ಲ. ಆದರೆ, ಉಳಿದ ತಾಂತ್ರಿಕ ಕೆಲಸಗಳನ್ನು ಮಾಡಿಕೊಳ್ಳಬಹುದು’ ಎಂದು ಸಚಿವ ಆರ್. ಅಶೋಕ್‌ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು,’ಚಿತ್ರೀಕರಣಕ್ಕೆ ಅವಕಾಶ ನೀಡಿದರೆ ಕೊರೊನಾ ಸೋಂಕು ನಿಯಂತ್ರಣ ನಿಯಮ ಪಾಲನೆ ಕಷ್ಟವಾಗಬಹುದು. ಆದರೆ, ಡಬ್ಬಿಂಗ್, ಎಡಿಟಿಂಗ್, ಗ್ರಾಫಿಕ್ಸ್‌, ರಿರೆಕಾರ್ಡಿಂಗ್‌ನಂತಹ ಚಟುವಟಿಕೆಯನ್ನು ನಡೆಸಬಹುದು. ಈ ವೇಳೆಯೂ, ಸರ್ಕಾರದ ಆದೇಶ ಮತ್ತು ನಿಯಮ ಪಾಲಿಸಬೇಕು’ ಎಂದು ಹೇಳಿದ್ದಾರೆ. ವರದಿ:ಪೊಲಿಟಿಕಲ್ ಬ್ಯೂರೋ […]

Advertisement

Wordpress Social Share Plugin powered by Ultimatelysocial